ಕರಾವಳಿ

ಇನ್ನೊಂದು ಬಂಗ್ಲಗುಡ್ಡೆಯಾಗುವ ಬೀತಿಯಲ್ಲಿ ಸಜೀಪನಡು ಕೋಣಿಮಾರು ಪ್ರದೇಶ

Pinterest LinkedIn Tumblr

ಮಂಗಳೂರು : ಸಜೀಪನಡು ಕೋಣಿಮಾರು ಪ್ರದೇಶವು ಇನ್ನೊಂದು ಬಂಗ್ಲಗುಡ್ಡೆಯಾಗುವ ಬೀತಿಯಲ್ಲಿದೆ. ಇಲ್ಲಿನ ಇಂದಿನ ಸ್ಥಿತಿಗತಿ ನೋಡಿದರೆ ಜುಲೈ.05, ಭಾನುವಾರ ಮಂಗಳೂರಿನ ಹೊರವಲಯದ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿ ಮಣ್ಣಿನಡಿ ಸಿಲುಕಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ನೆನಪಿಗೆ ಬರುತ್ತಿದೆ.

ಸಜೀಪನಡು ಗ್ರಾಮದ ಕೋಣಿಮಾರು ಎಂಬ ಪ್ರದೇಶದಲ್ಲಿ ಸುಮಾರು 35 ಅಡಿ ಎತ್ತರದಲ್ಲಿ ಕೆಂಪು ಗುಡ್ಡೆ ಎಂಬ ಪುಟ್ಟ ಪ್ರದೇಶವಿದ್ದು ಸದ್ರಿ ಕೆಂಪುಗುಡ್ಡೆಯಲ್ಲಿ ಸುಮಾರು 15 ವಾಸದ ಮನೆಗಳಿದ್ದು ಇದೀಗ ಕೆಂಪುಗುಡ್ಡೆಯ ಮೇಲಿನಿಂದ ಮಣ್ಣು ಕುಸಿಯುತ್ತಿದೆ.

35 ಅಡಿ ಎತ್ತರದಲ್ಲಿರುವ ಮನೆಗಳ ಬದಿಯಲ್ಲೇ ಕುಸಿತವುಂಟಾಗುತ್ತಿದೆ, ಅಲ್ಲದೇ ಈ ಗುಡ್ಡದ ಕೆಲ ಭಾಗದಲ್ಲಿಯೂ ಮನೆಗಳಿದ್ದು ಗುಡ್ಡದ ಮೇಲಿರುವ ಮನೆಗಳು ಕೆಲ ಭಾಗದ ಮನೆಗಳ ಮೇಲೆ ಕುಸಿದು ಬೀಳುವ ಅಪಾಯದಲ್ಲಿದೆ. ಇಲ್ಲಿ ಯಾವುದೇ ಕ್ಷಣದಲ್ಲೂ ಅವಗಡ ಸಂಭವಿಸುವ ಸಾಧ್ಯತೆ ಇದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

ಈಬಗ್ಗೆ ಹಲವಾರು ಬಾರಿ ಗ್ರಾಮಪಂಚಾಯತಿಗೆ ಲಿಖಿತ ದೂರನ್ನು ನೀಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ, ಸದ್ರಿಪ್ರದೇಶವು ಗುರುಪುರ ಕೈಕಂಬದ ಇನ್ನೊಂದು ಬಂಗ್ಲಗುಡ್ಡೆಯಾಗುವುದಕ್ಕಿಂತ ಮುಂಚಿತವಾಗಿ ಅಧಿಕಾರಿಗಳು ಎಚ್ಚೆತ್ತು ಸೂಕ್ತ ಕ್ರಮಕೈಗೊಳ್ಳಬೇಕೆಂಬುವುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ನಿರ್ಲಕ್ಷ್ಯ: ಬಂಗ್ಲಗುಡ್ಡೆ ಗುಡ್ಡ ಕುಸಿತಕ್ಕೆ ಕಾರಣ?

ಬಂಗ್ಲಗುಡ್ಡೆ ಗುಡ್ಡ ಕುಸಿತ

ನಿರಂತರ ಸುರಿದ ಮಳೆಯಿಂದಾಗಿ ಜುಲೈ.05, ಭಾನುವಾರ ಮಂಗಳೂರಿನ ಹೊರವಲಯದ ಗುರುಪುರ ಕೈಕಂಬದ ಬಂಗ್ಲಗುಡ್ಡೆ ಎಂಬಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದರು.

ಈ ಪ್ರದೇಶವೂ ಸಜೀಪನಡು ಕೋಣಿಮಾರು ಪ್ರದೇಶದಂತೆ ಅಪಾಯದ ಸ್ಥಿತಿಯಲ್ಲಿತ್ತು. ಆದರೆ ಸ್ಥಳೀಯರ ಹಾಗೂ ಸಂಬಂಧಪಟ್ಟ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿ ಗುಡ್ಡ ಕುಸಿತ ಉಂಟಾಗಿ, ಇಬ್ಬರು ಮಕ್ಕಳು ಪ್ರಾಣ ತೆರಬೇಕಾಗಿ ಬಂತು.

ಗುಡ್ಡ ಕುಸಿದಿರುವ ಜಾಗ ಸರ್ಕಾರಿ ಜಮೀನಾಗಿದ್ದು ಇಲ್ಲಿ ಬಡವರಿಗೆ ಸೈಟ್​​ಗಳನ್ನು ನೀಡಲಾಗಿತ್ತು, 30 ಮನೆಗಳನ್ನು ಬಡವರು ನಿರ್ಮಿಸಿಕೊಂಡಿದ್ದರು, ಸುಮಾರು ಹತ್ತು ವರ್ಷಗಳಿಂದಲೂ ಇಲ್ಲಿಯೇ ವಾಸವಾಗಿದ್ದರು ಎನ್ನಲಾಗಿದೆ.

ಈ ರಸ್ತೆ ಕೈಕಂಬ ಪೊಳಲಿ ದ್ವಾರದ ಸಮೀಪದ ರಸ್ತೆಯಾಗಿ ಗುರುಪುರ ಸೇತುವೆ ಸಮೀಪದ ರಸ್ತೆಗೆ ಸಂಪರ್ಕ‌ ಕಲ್ಪಿಸುತ್ತದೆ. ಈ ರಸ್ತೆಯನ್ನು ಇತ್ತೀಚೆಗೆ ದುರಸ್ತಿಗೊಳಿಸಿದ್ದು, ಆದರೆ ಮಳೆಯಿಂದಾಗಿ ರಸ್ತೆ ಕೆಟ್ಟು ಹೋಗಿತ್ತು. ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣ ಕುಸಿತಕ್ಕೆ ಕಾರಣ ಎಂದು ಹೇಳಲಾಗಿತ್ತು.

ಘಟನಾ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್​ ಕುಮಾರ್​ ಕಟೀಲು, ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಮತ್ತು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೇ ವೇಳೆ, ಸರ್ಕಾರದಿಂದ ಹೊಸ ಮನೆಗಳನ್ನು ನಿರ್ಮಿಸಲಾಗುವುದು ಎಂದು ಅಂದು ಸಚಿವ ಪೂಜಾರಿ ಕುಟುಂಬಗಳಿಗೆ ಭರವಸೆ ನೀಡಿದ್ದರು.

Comments are closed.