ಆರೋಗ್ಯ

ಬಂಜೆತನವೆಂಬ ಪಟ್ಟ ಮಹಿಳೆಯರಿಗೆ ಮಾತ್ರ ಮೀಸಲೇಕೆ?

Pinterest LinkedIn Tumblr

ಸಾಮಾನ್ಯವಾಗಿ, ಹೆಣ್ಣು, ಒಂದು ಮಗುವಿಗೆ ಜನ್ಮನೀಡಲು ಸಾಧ್ಯವಾಗದ ಸ್ಥಿತಿಯನ್ನು ಬಂಜೆತನ ಎನ್ನುತ್ತಾರೆ. ಹೆಣ್ಣಿನ ವಯಸ್ಸು ಕಡಿಮೆ ಇದ್ದರೂ ಸಹ ಮಕ್ಕಳಾಗದೇ ಇರುವ ಸಾಧ್ಯತೆಗಳಿವೆ. ಇದನ್ನು ಬಂಜೆತನ ಎನ್ನಬಹುದು. ಆದರೆ ಇದು ಮಾತ್ರವಲ್ಲ. ಮಹಿಳೆ ಗರ್ಭವತಿಯಾಗಿ ಆಕೆಯಲ್ಲಿ ಗರ್ಭ ನಿಲ್ಲದೇ ಇರುವ ಸ್ಥಿತಿಗೂ ಕೂಡ ಬಂಜೆತನ ಎನ್ನಬಹುದು. ಸಾಕಷ್ಟು ಮಹಿಳೆಯರು ಇಂದು ಇಂತಹ ಬಂಜೆತನವನ್ನು ಅನುಭವಿಸುತ್ತಿದ್ದಾರೆ.

ಆದರೆ ಬಂಜೆತನ ಎನ್ನುವುದು ಮಹಿಳೆಯರಲ್ಲಿ ಮಾತ್ರ ಕಂಡುಬರುವ ಸಮಸ್ಯೆಯಲ್ಲ. ಬಂಜೆತನಕ್ಕೆ ಮಹಿಳೆ ಹಾಗೂ ಪುರುಷ ಕೂಡ ಕಾರಣವಾಗಿರುತ್ತಾರೆ. ಹಲವು ಬಾರಿ ಪ್ರಯತ್ನದ ಬಳಿಕವೂ ಮಕ್ಕಳಾಗುವ ಸಾಧ್ಯತೆ ಇಲ್ಲದಿದ್ದಲ್ಲಿ, ಅಥವಾ ಗರ್ಭ ಧರಿಸಿದರೂ ಅದು ನಿಲ್ಲದಿದ್ದಲ್ಲಿ ಮಹಿಳೆ ಮಾತ್ರ ಇದಕ್ಕೆ ಕಾರಣವಾಗಿರದೇ ಪುರುಷನೂ ಕೂಡ ಸಮಾನ ಪಾಲುದಾರನಾಗಿರುತ್ತಾನೆ. ದಂಪತಿಗಳಿಬ್ಬರಲ್ಲೂ ಹಲವಾರು ಕಾರಣಗಳಿಗೆ ಬಂಜೆತನ ಕಂಡುಬರಬಹುದು.

ಇಲ್ಲಿ ಬಂಜೆತನದ ಬಗ್ಗೆ ಕೆಲವು ವಿಷಯಗಳನ್ನು ಹೇಳಲಾಗಿದೆ.
1. ಒತ್ತಡದ ನಿರ್ವಹಣೆ:
ಸಾಮಾನ್ಯವಾಗಿ ನಿಮ್ಮಲ್ಲಿ ಕಂಡುಬರುವ ಒತ್ತಡವನ್ನು ನಿಯಂತ್ರಿಸಿದರೆ ಗರ್ಭಧರಿಸುವ ಸಾಧ್ಯತೆಗಳು ಅಧಿಕವಾಗಿರುತ್ತವೆ. ಇದು ಗರ್ಭಧಾರಣೆಗೆ ಸಂಬಂಧಿಸಿದಂತೆ ಪ್ರಮುಖ ಪಾತ್ರವಹಿಸಿತ್ತದೆ. ಒತ್ತಡವನ್ನು ದೂರಮಾಡಲು ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೆಚ್ಚೆಚ್ಚು ಒಡನಾಟ ಬೆಳೆಸಿಕೊಳ್ಳಿ. ಉತ್ತಮ ಪುಸ್ತಕಗಳನ್ನು ಓದಿ, ಮನಸ್ಸನ್ನು ಪ್ರಶಾಂತವಾಗಿರಿಸಿಕೊಳ್ಳಿ.

2.ಮಹಿಳೆಯರಲ್ಲಿ ಬಂಜೆತನ:
ಮಹಿಳೆಯರ ಬಂಜೆತನವನ್ನು ಸುಲಭವಾಗಿ ಅರ್ಥಮಾಡಿಕೊಂಡು ಅದಕ್ಕೆ ಪರಿಹಾರವನ್ನು ಸೂಚಿಸಬಹುದು. ಏಕೆಂದರೆ ಮಹಿಳೆಯರಲ್ಲಿ ಕಂಡುಬರುವ ಬಂಜೆತನಕ್ಕೆ ಒಂದೇ ರೀತಿಯ ಕಾರಣಗಳಿರುತ್ತವೆ.

3. ಅಪೌಷ್ಠಿಕತೆಯ ಆಹಾರ;
ಬಂಜೆತನವನ್ನು ನಿವಾರಿಸಲು ಸಹಾಯಕವಾದ ಯಾವ ಆಹಾರವನ್ನು ತಿನ್ನಬೇಕು ಯಾವುದನ್ನು ಸೇವಿಸಬಾರದು ಎಂಬುದರ ಬಗ್ಗೆ ಸದಾ ಗಮನವಹಿಸಿ. ನಿಮ್ಮ ನಿತ್ಯದ ಆಹಾರಕ್ರಮದಲ್ಲಿ ಯಾವುದನ್ನು ಸೇವಿಸಬಾರದು ಎಂಬಿತ್ಯಾದಿ ಅಂಶಗಳಿಗೆ ಸಂಬಂಧಿಸಿದಂತೆ ನಿಮ್ಮ ವೈದ್ಯರಿಂದ ಸಲಹೆಗಳನ್ನು ಪಡೆಯಿರಿ.

4. ಟ್ಯೂಬ್ ಡಿಸೀಸ್;
ಸಾಮಾನ್ಯವಾಗಿ 15 -18 ಶೇಕಡಾ ಜನರಲ್ಲಿ ಕಂಡುಬರುವ ಬಂಜೆತನಕ್ಕೆ ಕಾರಣ, (ಫಲೋಪೈನ್) ಮುಚ್ಚಿರುತ್ತದೆ. ಇದಕ್ಕೆ ಕೆಲವು ತಪಾಸಣೆ ಹಾಗೂ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

5.ವಯಸ್ಸೂ ಕೂಡ ಬಂಜೆತನಕ್ಕೆ ಕಾರಣ:
ನೇರವಾಗಿ ಅಥವಾ ಪರೋಕ್ಷವಾಗಿ ಬಂಜೆತನಕ್ಕೆ ನಿಮ್ಮ ವಯಸ್ಸೂ ಕೂಡ ಕಾರಣವಾಗಿರುತ್ತದೆ. ದೇಹ ಶಕ್ತಿ , ನಿರೋಧಕ ಶಕ್ತಿ , ಪ್ರತಿರಕ್ಷಣೆಯ ಶಕ್ತಿ, ಹಾರ್ಮೋನುಗಳ ಮಟ್ಟಗಳು ಯೌವ್ವನದಲ್ಲಿ ಅಧಿಕವಾಗಿರುತ್ತದೆ. ಇದರ ಪರಿಶೀಲನೆ ಅತ್ಯಂತ ಮುಖ್ಯ. ವಯಸ್ಸಾಗುತ್ತ ಹೋದಂತೆ ದೇಹದಲ್ಲಿ ಹುರುಪು, ಸಾಮರ್ಥ್ಯ ಕಡಿಮೆಯಾಗುತ್ತಾ ಸಾಗುತ್ತದೆ. ಆದ್ದರಿಂದ ಬಂಜೆತನಕ್ಕೆ ಸಂಬಂಧಿಸಿದ ಚಿಕಿತ್ಸೆಗಳನ್ನು ಆರಂಭದಲ್ಲಿಯೇ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.

6. ಸರಿಯಾದ ನಿದ್ರೆ;
ಕೆಲವು ಅಧ್ಯಯನಗಳ ಪ್ರಕಾರ ಸರಿಯಾದ ಪ್ರಮಾಣದ ನಿದ್ದೆಯ ಕೊರತೆ ಕೂಡ ಬಂಜೆತನದ ಕಾರಣಗಳಲ್ಲೊಂದಾಗಿದೆ. ಆದ್ದರಿಂದ ಗರ್ಭಧಾರಣೆಯನ್ನು ಹೊಂದಲು ಪ್ರಯತ್ನಿಸುತ್ತಿದ್ದರೆ ಈ ಅಂಶವನ್ನು ಸದಾ ಮನಸ್ಸಿನಲ್ಲಿರಿಸಿಕೊಳ್ಳಿ. ಸರಿಯಾದ ನಿದ್ರೆ ಇಲ್ಲದ ಸಮಯದಲ್ಲಿ ಹಾರ್ಮೋನ್ ಗಳ ಮಟ್ಟ ಏರಿಳಿತಗೊಂಡು ಬಂಜೆತನಕ್ಕೆ ನೇರವಾದ ಕಾರಣವಾಗಬಹುದು. ವೈದ್ಯಕೀಯ ವಿಜ್ಞಾನದ ಪ್ರಕಾರ ನಿದ್ರೆ ಕಡಿಮೆಯಾದರೆ ಹಾರ್ಮೋನ್ ಗಳಲ್ಲಿ ಸಾಕಷ್ಟು ವ್ಯತ್ಯಾಸಗಳಾಗಿ ದೇಹದಲ್ಲಿ ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ.

7. ಸ್ತ್ರೀ ಬಂಜೆತನಕ್ಕೆ ಚಿಕಿತ್ಸೆಗಳು:
ಬಂಜೆತನಕ್ಕೆ ಸಂಬಂಧಿಸಿದ ಹಲವಾರು ಚಿಕಿತ್ಸೆಗಳಿದ್ದು ಅವುಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಆ ಚಿಕಿತ್ಸೆಗಳಿಗೆ ಒಳಗಾಗುವುದು ಅತ್ಯಂತ ಸೂಕ್ತ. ತಜ್ಞರ ಪ್ರಕಾರ ಈವರೆಗೆ ಸಾಕಷ್ಟು ಬಂಜೆತನದ ಸಮಸ್ಯೆಗಳು ಚಿಕಿತ್ಸೆಗಳಿಂದ ನಿವಾರಣೆಯಾದ ಉದಾಹರಣೆಗಳಿವೆ.

8. ಅಂಡೋತ್ಪತ್ತಿ:
ತಜ್ಞರು ಸಾಮಾನ್ಯವಾಗಿ ಅಂಡೋತ್ಪತ್ತಿಯ ಬಗ್ಗೆ ಮೊದಲು ಗಮನವಹಿಸುತ್ತಾರೆ. ದೇಹದಲ್ಲಿ ಅಂಡೋತ್ಪತ್ತಿಯ ಮಟ್ಟ, ದೇಹದ ಉಷ್ಣತೆಯ ಮಟ್ಟವನ್ನು ಅಂಡೋತ್ಪತ್ತಿ ಅಳೆಯುವ ಸಾಧನದಿಂದ ತಪಾಸಣೆ ಮಾಡಲಾಗುತ್ತದೆ. ಜೊತೆಗೆ ಪ್ರೊಜಸ್ಟ್ರಾನ್ ಮಟ್ಟವನ್ನು ಕೂಡ ತಪಾಸಣೆ ಮಾಡಲಾಗುತ್ತದೆ.

9. ಡೈಗ್ನೋಸಿಸ್ ಮತ್ತು ಪುರುಷ ಬಂಜೆತನಕ್ಕೆ ಚಿಕಿತ್ಸೆ:
ಪುರುಷ ಬಂಜೆತನಕ್ಕೆ ಚಿಕಿತ್ಸೆ, ಹಾಗೂ ಪರಿಹಾರ ಸೂಚಿಸುವುದು ಅತ್ಯಂತ ಸಂಕೀರ್ಣವಾದುದು / ಕಷ್ಟವಾದುದು. ವೀರ್ಯಾಣು, ವೀರ್ಯ ಶಕ್ತಿ ಮತ್ತು ಇತರ ಅಂಶಗಳನ್ನು ತಿಳಿಯಲು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ . ಸ್ಖಲನ, ಜನನಾಂಗಕ್ಕೆ ಸಂಬಂಧಿಸಿದ ಇತರ ಮಾನಸಿಕ ಸಮಸ್ಯೆಗಳನ್ನು ಕೂಡ ಪರೀಕ್ಷಿಸಲಾಗುತ್ತದೆ. ಇವುಗಳ ಮೂಲಕ ಮಕ್ಕಳಾಗಲು ಸಹಾಯವಾಗುವ ಅಂಶವನ್ನು ಹೆಚ್ಚಿಸಲಾಗುತ್ತದೆ.

10. ಸಂಬಂಧಗಳ ನಡುವಿನ ಅಂತರ:
ಬಂಜೆತನಕ್ಕೆ ಇನ್ನೊಂದು ಪ್ರಮುಖ ಕಾರಣ ದಂಪತಿಗಳ ನಡುವಿನ ಸಂಬಂಧಗಳಲ್ಲಿನ ದೋಷ! ಗರ್ಭಧಾರಣೆಯನ್ನು ಹೊಂದಬೇಕಾದರೆ ದಂಪತಿಗಳಲ್ಲಿನ ಆಂತರಿಕ ಹಾಗೂ ದೈಹಿಕ ಅಂತರವನ್ನು ದೂರಮಾಡಬೇಕು. ಮಾನಸಿಕವಾಗಿ, ದೈಹಿಕವಾಗಿ, ಭಾವನಾತ್ಮಕವಾಗಿ ಇಬ್ಬರ ನಡುವೆ ಹೊಂದಾಣಿಕೆ ಅತ್ಯಗತ್ಯ. ಬಂಜೆತನಕ್ಕೆ ಸಂಬಂಧಿಸಿದ ಚಿಕಿತ್ಸೆಗಳನ್ನು ಸಹ ಇಬ್ಬರೂ ಯಾವುದೇ ಮುಜುಗರವಿಲ್ಲದೆ ಪಡೆದುಕೊಳ್ಳಲು ತಯಾರಿರಬೇಕು.

11. ಗುರುತಿಸಲಾದ/ ವಿವರಿಸಲಾಗದ ಬಂಜೆತನ:
ಗರ್ಭವನ್ನು ಧರಿಸಲು ಪ್ರಯತ್ನಿಸುತ್ತಿರುವವರಿಗೆ ಈ ವಿಷಯದಿಂದ ಸಾಕಷ್ಟು ಹತಾಶೆಯಾಗಬಹುದು. ಆದರೆ ದುರದೃಷ್ಟವಶಾತ್ ಇದು ಸಾಮಾನ್ಯವಾಗಿ ಕಾಣುಸಿಕೊಳ್ಳುವ ಸಮಸ್ಯೆ. ಎಷ್ಟೋ ಬಾರಿ ನಿಮ್ಮ ಈ ಸಮಸ್ಯೆಗಳು ವೈದ್ಯರನ್ನು ಭೇಟಿ ಮಾಡಿದಾಗ ಮಾತ್ರ ನಿಮ್ಮ ಗಮನಕ್ಕೆ ಬರುತ್ತದೆ ಹಾಗೂ ಕೆಲವು ಚಿಕಿತ್ಸೆಗಳೂ ಕೂಡ ಪರಿಣಾಮ ಉಂಟುಮಾಡದೇ ಇರಬಹುದು. ಆದರೆ ಬಂಜೆತನ ನಿವಾರಣೆಯಾಗದ ಸಮಸ್ಯೆಯಲ್ಲ. ಯಾವುದೇ ಚಿಕಿತ್ಸೆಗೆ ಒಳಗಾಗಲು ಮಾನಸಿಕವಾಗಿರೂ ಸಹ ನೀವು ಸಿದ್ಧರಿರಬೇಕು.

12.ಸಾಮರಸ್ಯ:
ಯಾವುದೇ ಸಮಸ್ಯೆಗೆ ಪರಿಹಾರ ಎನ್ನುವುದು ಇರುವಂತೆ ಈ ಬಂಜೆತನದ ಸಮಸ್ಯೆಯೂ ಕೂಡ ನಿವಾರಣೆ ಮಾಡಬಹುದಾದಂತಹ ಸಮಸ್ಯೆಯಾಗಿದ್ದು ದಂಪತಿಗಳು ಪರಸ್ವರ ಹೊಂದುಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ.

Comments are closed.