ಮಂಗಳೂರು : ವಿಶ್ವ ಪರಿಸರ ದಿನ ಪ್ರಕೃತಿ ಹಬ್ಬವಾಗಬೇಕು, ಭಾರತೀಯ ವೈದ್ಯ ಪದ್ಧತಿ ಆಯುರ್ವೇದ ಆರೋಗ್ಯಕ್ಕೆ ಉತ್ತಮವಾಗಿದೆ. ಅಡ್ಡ ಪರಿಣಾಮಗಳಿಲ್ಲದ ಔಷಧೀಯ ಸಸ್ಯ ಸಂಪತ್ತನ್ನು ಉಳಿಸಿ ಬೆಳೆಸುವ ಕರ್ತವ್ಯ ನಮ್ಮದಾಗಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಬಳ್ಕುಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಳ್ಕುಂಜೆ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ದ.ಕ.ಜಿಲ್ಲಾ ಪಂಚಾಯಿತಿ, ಸಾಮಾಜಿಕ ಅರಣ್ಯ ಇಲಾಖೆ ಹಾಗೂ ಆಯುಷ್ ಇಲಾಖೆ ಸಹಭಾಗಿತ್ವದಲ್ಲಿ ನಿರ್ಮಿಸಲಾದ ಧನ್ವಂತರಿ ಔಷಧೀಯ ವನದಲ್ಲಿ ನಡೆದ ವನಮಹೋತ್ಸವ, ಆಶಾ ಕಾರ್ಯಕರ್ತರಿಗೆ ಚ್ಯವನಪ್ರಾಶ ಹಾಗೂ ಜನಪ್ರತಿನಿಧಿಗಳಿಗೆ ಆಯುರ್ವೇದ ಕಷಾಯ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ದ.ಕ. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯರಾದ ವಿನೋದ್ ಕುಮಾರ್, ತಾಲೂಕು ಪಂಚಾಯತ್ ಸದಸ್ಯೆ ರಶ್ಮೀ ಆಚಾರ್ಯ, ಬಳ್ಕುಂಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಪುತ್ರನ್, ಸದಸ್ಯರಾದ ಆನಂದ್, ಗೀತಾ, ಮಂಗಳೂರು ಸಾಮಾಜಿಕ ಅರಣ್ಯ ವಲಯ ಉಪ ವಲಯ ಅಧಿಕಾರಿ ರೋಹಿಣಿ ಎಂ ತಲ್ಲೂರು, ಬಿಜೆಪಿ ಮುಖಂಡರಾದ ವಿಠಲ ಎಂ, ಉಮೇಶ್ ಮಾನಂಪಾಡಿ, ಅಶೋಕ್ ಜನನಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.



Comments are closed.