ಯುವಜನರ ವಿಭಾಗ

ಹುಡುಗಿಯರನ್ನು ಬುಟ್ಟಿಗೆಹಾಕಿಕೊಳ್ಳಲು ಹುಡುಗರು ಏನೆಲ್ಲ ಸುಳ್ಳು ಹೇಳುತ್ತಾರೆ ಗೊತ್ತಾ….?

Pinterest LinkedIn Tumblr

 

ಹುಡುಗಿಯರನ್ನು ಇಂಪ್ರೆಸ್‌ಮಾಡಲು ಕೆಲವೊಮ್ಮೆ ಹುಡುಗರು ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ, ನಾಟಕ ಮಾಡುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಈ ರೀತಿಯ ನಾಟಕ ಮಾಡಿ ಇಂಪ್ರೆಸ್‌ಮಾಡಲು ನೋಡುತ್ತಾರೆ.

ಹುಡುಗಿಯರನ್ನು ಇಂಪ್ರೆಸ್‌ಮಾಡಲು ಕೆಲವೊಮ್ಮೆ ಹುಡುಗರು ಸಾಕಷ್ಟು ಸುಳ್ಳುಗಳನ್ನು ಹೇಳುತ್ತಾರೆ, ನಾಟಕ ಮಾಡುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಈ ರೀತಿಯ ನಾಟಕ ಮಾಡಿ ಇಂಪ್ರೆಸ್‌ಮಾಡಲು ನೋಡುತ್ತಾರೆ.

ನಿಮ್ಮ ಇಷ್ಟದ ವಸ್ತುಗಳು ಅವನಿಗೆ ಇಷ್ಟ ಎಂಬಂತೆ ನಟಿಸುವುದು
ಎಲ್ಲರೂ ಅಲ್ಲ ಕೆಲವರು ಈ ರೀತಿಯ ನಟನೆ ಮಾಡುತ್ತಾರೆ. ಒಂದು ವೇಳೆ ನಿಮಗೆ ನಾಯಿ ಅಂದರೆ ಪ್ರಾಣ ಅಂತ ಅವನಿಗೆ ಗೊತ್ತಿದ್ದರೆ ಅವನಿಗೂ ನಾಯಿ ಕಂಡ್ರೆ ತುಂಬಾ ಇಷ್ಟ ಎಂಬಂತೆ ತೋರಿಸಿಕೊಳ್ಳುವುದು.

ಬ್ರೇಕ್‌ಅಪ್‌ಸ್ಟೋರಿ ಹೇಳಿ ಅನುಕಂಪ ಗಿಟ್ಟಿಸಿಕೊಳ್ಳುವುದು
ಹಳೆಯ ಲವ್‌ಸ್ಟೋರಿ ಹೇಳಿ ಆ ಸ್ಟೋರಿಯಲ್ಲಿ ಈತನನ್ನು ತುಂಬಾ ಒಳ್ಳೆಯವನಂತೆ ಬಿಂಬಿಸಿ ಅನುಕಂಪಗಿಟ್ಟಿಸಿಕೊಳ್ಳುವುದು.

ದೇಹದಾರ್ಢ್ಯದ ಕುರಿತು ಬಡಾಯಿ ಕೊಚ್ಚಿಕೊಳ್ಳುವುದು
ನಾನು ಒಂದು ನಿಮಿಷದಲ್ಲಿ 50 ಪುಶ್‌ಅಪ್‌ಹೊಡೆಯುತ್ತೇನೆ, ಟ್ರೆಡ್‌ಮಿಲ್‌ನಲ್ಲಿ ಒಂದು ಗಂಟೆ ಓಡುತ್ತೇನೆ ಹೀಗೆಲ್ಲಾ ಯಾರಾದರೂ ಹೇಳುತ್ತಿದ್ದರೆ ಅವರು ಹೇಳುವುದು ಎಷ್ಟರ ಮಟ್ಟಿಗೆ ಸರಿ ಎಂದು ನೀವೇ ಪರೀಕ್ಷಿಸುವುದು ಒಳ್ಳೆಯದು.

ಕೈ ತುಂಬಾ ದುಡ್ಡು ಇರುವಂತೆ ಪೋಸ್‌ನೀಡುವುದು
ಕೆಲವರು ಹುಡುಗಿಯರನ್ನು ಇಂಪ್ರೆಸ್‌ಮಾಡಲು ಕೈ ತುಂಬಾ ದುಡ್ಡು ಇರುವಂತೆ ಪೋಸ್‌ನೀಡುವುದು ಮಾಡುತ್ತಾರೆ. ಹೀಗೆ ಪೋಸ್‌ನೀಡುವ ಹುಡುಗರು ನೆನೆಪಿನಲ್ಲಿಡಬೇಕಾದ ಅಂಶವೆಂದರೆ ನಿಮ್ಮ ಹಣ ಮಾತ್ರ ನೋಡಿ ಇಂಪ್ರೆಸ್‌ಆಗುವವರು ತುಂಬಾ ಕಾಲ ನಿಮ್ಮೊಂದಿಗೆ ಇರಲ್ಲ.

ನಿಮ್ಮ ಫ್ರೆಂಡ್ಸ್ ಮೂಲಕ ನಿಮ್ಮನ್ನು ಇಂಪ್ರೆಸ್‌ಮಾಡುವುದು
ಕೆಲವು ಹುಡುಗರು ಅವರಿಗೆ ನಿಮ್ಮ ಫ್ರೆಂಡ್ಸ್‌ಸರ್ಕಲ್‌ಕಂಡ್ರೆ ಅಷ್ಟೇನು ಇಷ್ಟವಿಲ್ಲದಿದ್ದರೂ ನಿಮ್ಮನ್ನು ಇಂಪ್ರೆಸ್‌ಮಾಡಲು ಅವರ ಜತೆ ತುಂಬಾ ಫ್ರೆಂಡ್ಲಿ ಆಗಿ ಇರುತ್ತಾರೆ.

ಸದಾ ನಿನದೇ ಧ್ಯಾನ
‘ಇಡೀ ದಿನ ನಿಮ್ಮ ಧ್ಯಾನದಲ್ಲಿಯೇ ಇರುತ್ತೇನೆ’ ಎನ್ನುವ ಹೋಳು ಮಾತಿಗೆ ಮರುಳಾಗಬೇಡಿ.

Comments are closed.