ಕರಾವಳಿ

ವಾರ್ಷಿಕೋತ್ಸವದ ವೆಚ್ಚದಲ್ಲಿ ಆಹಾರ ಕಿಟ್ ವಿತರಣೆ: ಮಾದರಿಯಾದ ಸೂಟರ್ ಪೇಟೆ ಪ್ರಜ್ವಲ್ ಯುವಕ ಮಂಡಲ

Pinterest LinkedIn Tumblr

ಮಂಗಳೂರು :ಯುವಕ ಮಂಡಲಗಳು ಪರಿಸರದ ಆಗುಹೋಗುಗಳಿಗೆ ಸ್ಪಂದಿಸುವುದು ಅದ್ಯ ಕರ್ತವ್ಯ. ಅದರಲ್ಲೂ ಈಚೆಗೆ ದೇಶವನ್ನು ಕೊರೊನಾ ವೈರಸ್ ಆವರಿಸಿ ಸಾಕಷ್ಟು ಸಂಕಷ್ಟವನ್ನು ಜನರು ಅನುಭವಿಸುತ್ತಿದ್ದಾರೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ನಗರದ ಸೂಟರ್ ಪೇಟೆಯಲ್ಲಿರುವ ಪ್ರಜ್ವಲ್ ಯುವಕ ಮಂಡಲ ನಿಗದಿಯಾದ ತನ್ನ ವಾರ್ಷಿಕೋತ್ಸವವನ್ನು ರದ್ದು ಪಡಿಸಿ ಅದರ ವೆಚ್ಚದಲ್ಲಿ ಪರಿಸರದ ಜನರಿಗೆ ಆಹಾರ ಕಿಟ್ ನ್ನು ವಿತರಿಸಿ ಸಾಮಾಜಿಕ ಕಳಕಳಿ ಮೆರೆದು ಮಾದರಿಯಾಗಿದೆ .

ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಬಬ್ಬುಸ್ವಾಮಿ ಬಯಲು ರಂಗಮಂದಿರದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸುಮಾರು 210 ಮಂದಿಗೆ ಆಹಾರ ಕಿಟ್ ನ್ನು ಬುಧವಾರ ಬೆಳಿಗ್ಗೆ ಪ್ರಜ್ವಲ್ ಯುವಕ ಮಂಡಲದ ವತಿಯಿಂದ ವಿತರಿಸಲಾಯಿತು. ಈ ಆಹಾರ ಕಿಟ್ ನಲ್ಲಿ ಅಕ್ಕಿ ಸೇರಿದಂತೆ ಸುಮಾರು 10 ಬಗ್ಗೆಯ ದಿನಸಿ ವಸ್ತುಗಳಿದ್ದವು.

ಈ ಸಂದರ್ಭದಲ್ಲಿ ಶ್ರೀ ಕೋರ್ದಬ್ಬು ದೇವಸ್ಥಾನದ ಗುರಿಕಾರರಾದ ಶ್ರೀ ಎಸ್. ರಾಘವೇಂದ್ರ ಅವರು ಮಾತನಾಡಿ ಇದು ಸಂಘ ಸಂಸ್ಥೆಗಳಿಗೆ ಮಾದರಿಯಾಗುವ ಕಾರ್ಯಕ್ರಮ. ನಮ್ಮ ಜಿಲ್ಲೆಯಲ್ಲಿ ಎಲ್ಲರೂ ಸಂಘಟಿತರಾಗಿ ಜನರಿಗೆ ಆಹಾರ ಕಿಟ್ ನ್ನು ವಿತರಿಸುತ್ತಿದ್ದಾರೆ . ಆದರೆ , ಪ್ರಜ್ವಲ್ ಯುವಕ ಮಂಡಲ ಮೇ – 2 ರಂದು ನಡೆಯ ಬೇಕಾಗಿದ್ದ ತನ್ನ ವಾರ್ಷಿಕೋತ್ಸವವನ್ನು ರದ್ದು ಪಡಿಸಿ , ಆ ವೆಚ್ಚದಲ್ಲಿ ಅಗತ್ಯವುಳ್ಳವರಿಗೆ ಆಹಾರ ಕಿಟ್ ನ್ನು ವಿತರಿಸಿ ಮಾನವೀಯತೆಯನ್ನು ಮೆರೆದಿದೆ. ಇದು ಅಭಿನಂದನಾ ಕಾರ್ಯ ಎಂದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್ ಭೇಟಿ ನೀಡಿ ಯುವಕ ಮಂಡಲದ ಮಾನವೀಯ ಕಾರ್ಯವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೆಟರ್ ಶ್ರೀ ಭರತ್ ಕುಮಾರ್, ನಿವೃತ್ತ ತಹಶೀಲ್ದಾರರಾದ ಶ್ರೀ ಪಿ.ಬಾಬು , ಜಾನಪದ ವಿದ್ವಾಂಸ ಶ್ರೀ ಕೆ. ಕೆ. ಪೇಜಾವರ, ಕ್ರೀಡಾ ಅಂಕಣಕಾರ ಶ್ರೀ ಎಸ್. ಜಗದೀಶ್ಚಂದ್ರ ಅಂಚನ್ , ಬಬ್ಬುಸ್ವಾಮಿ ಪಾತ್ರಿ ಶ್ರೀ ಗಣೇಶ , ಶ್ರೀ ಆದಿಶಕ್ತಿ ಭುವನೇಶ್ವರಿ ಆದಿನಾಥ ಸಿದ್ಧಪೀಠದ ಶ್ರೀ ಅರ್ಜುನ್ , ಪ್ರಜ್ವಲ್ ಯುವಕ ಮಂಡಲದ ಅಧ್ಯಕ್ಷರಾದ ಶ್ರೀ ಕಿಶೋರ್ ಕುಮಾರ್, ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಮಹೇಶ್ ಎಸ್.ವಿ. ದೈವಸ್ಥಾನದ ಶ್ರೀ ನವೀನ್, ಸುದೇಶ್ ಕುಮಾರ್, ಯುವಕ ಮಂಡಲದ ಪದಾಧಿಕಾರಿಗಳಾದ ಶ್ರೀ ಎಸ್.ಜಗನ್ನಾಥ್ , ಶ್ರೀ ಪ್ರಮೋದ್ , ಶ್ರೀ ಲಕ್ಷ್ಮಣ್ , ಶ್ರೀ ರವೀಂದ್ರ , ಶ್ರೀ ಶರತ್ ಕುಮಾರ್, ಶ್ರೀ ಕಿಶೋರ್ ನಂಬಿಯಾರ್ , ಶ್ರೀ ಕಿಶೋರ್, ಶ್ರೀ ವಿವೇಕ್ , ಅಭಿಲಾಶ್ , ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Comments are closed.