ಆರೋಗ್ಯ

ಈ ಆಹಾರಗಳ ಸೇವನೆಯಿಂದ ದೇಹದಲ್ಲಿನ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಳಕ್ಕೆ ಸಹಕಾರಿ

Pinterest LinkedIn Tumblr

ದೇಹದಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇದ್ದಷ್ಟು ಕಾಯಿಲೆಗಳು ಕಡಿಮೆಯಾಗುವುದು. ಶೀತ, ನೆಗಡಿ ಮುಂತಾದ ರೋಗಗಳು ಆಗಾಗ ಕಾಣಿಸಿಕೊಂಡರೆ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ ಎಂದು ಅರ್ಥ. ಆದರೆ ಕೆಲವೊಂದು ಆಹಾರಗಳನ್ನು ಸೇವಿಸುವುದರಿಂದ ಕೂಡ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಆ ಆಹಾರಗಳ ಪಟ್ಟಿ ಇಲ್ಲಿದೆ ನೋಡಿ.

ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.
1. ಸಿಟ್ರಸ್ ಇರುವ ಹಣ್ಣುಗಳು: ಕೆಮ್ಮು ಮತ್ತು ನೆಗಡಿ ಇರುವಾಗ ಸಿಟ್ರಸ್ ಇರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದು. ಏಕೆಂದರೆ ಇದರಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ಹಣ್ಣುಗಳ ಸೇವನೆ ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುವುದು.

2. ಅಣಬೆ: ಪ್ರತಿದಿನ ಅಣಬೆ ಸೂಪ್ ಮಾಡಿ ಕುಡಿದರೆ ದೇಹವು ಕಾಯಿಲೆಯಿಂದ ಮುಕ್ತವಾಗುವುದು. ಇದರಲ್ಲಿರುವ ಪೋಷಕಾಂಶಗಳು ಸೋಂಕಾಣು ಮತ್ತು ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ.

3. ಬೆಳ್ಳುಳ್ಳಿ: ಬೆಳ್ಳುಳ್ಳಿ ಅಡುಗೆಯಲ್ಲಿ ಬಳಸುವ ಅತ್ಯುತ್ತಮವಾದ ಪದಾರ್ಥವಾಗಿದೆ. ಏಕೆಂದರೆ ಇದಕ್ಕೆ ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮಾರ್ಥ್ಯವನ್ನು ಹೊಂದಿದೆ. ಶೀತ ಮತ್ತು ಅಲರ್ಜಿಯಿಂದ ಮುಕ್ತಿಯನ್ನು ನೀಡುತ್ತದೆ. ಗಾಯಗಳು ಉಂಟಾದರೆ ಬೇಗನೆ ಗುಣಪಡಿಸಲು ಸಹಕಾರಿಯಾಗಿದೆ.

4. ಮೊಸರು: ಮೊಸರಿನಲ್ಲಿ ಆರೋಗ್ಯಕರ ಪ್ರೊಬಯೋಟಿಕ್ ಬ್ಯಾಕ್ಟೀರಿಯಾ ಇರುವುದರಿಂದ ಹೊಟ್ಟೆಯ ಆರೋಗ್ಯವನ್ನು ಹೆಚ್ಚಿಸಿ ಸೋಂಕು ತಗುಲದಂತೆ ಕಾಪಾಡುತ್ತದೆ.

5. ಮೃದ್ವಂಗಿಗಳು: ಇತರ ಸಮುದ್ರ ಆಹಾರಗಳಿಗಿಂತ ಮೃದ್ವಂಗಿಗಳಲ್ಲಿ ಸೆಲಿನಿಯಂ ಅಧಿಕವಿರುವುದರಿಂದ ದೇಹದಲ್ಲಿ ಬಿಳಿ ರಕ್ತಕಣಗಳನ್ನು ಹೆಚ್ಚಿಸುತ್ತದೆ.

6. ಬಾರ್ಲಿ ಮತ್ತು ಓಟ್ಸ್: ನಾರಿನಂಶವಿರುವ ಆಹಾರ ಸೇವನೆ ಒಳ್ಳೆಯದು. ಅದರಲ್ಲಿ ಬಾರ್ಲಿ ಮತ್ತು ಓಟ್ಸ್ ಸೋಂಕಾಣುಗಳ ವಿರುದ್ಧ ಹೋರಾಡುತ್ತದೆ ಆದ್ದರಿಂದ ಗಾಯವಾದಾಗ ಇವುಗಳನ್ನು ತಿಂದರೆ ಗಾಯ ಬೇಗನೆ ಗುಣಮುಖವಾಗುವುದು.

7. ಟೀ: ಶೀತವಾದರೆ ಶುಂಠಿ ಟೀ ಕುಡಿಯಿರಿ. ಟೀಯಲ್ಲಿರುವ ಅಮೈನೊ ಆಸಿಡ್ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Comments are closed.