
ಬೆಂಗಳೂರು(ಏ.19): ಮಾರಕ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಹೇರಲಾಗಿರುವ ಲಾಕ್ಡೌನ್ ಅನ್ನು ರಾಜ್ಯ ಸರ್ಕಾರ ಸ್ವಲ್ಪ ಸಡಿಲಗೊಳಿಸಿ ನಿನ್ನೆ ಆದೇಶಸಿತ್ತು. ಹಾಗಾಗಿ ಏಪ್ರಿಲ್ 20ರ ನಂತರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಶೇ. 33ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡಿತ್ತು. ಅದರ ಜತೆಗೆ ದ್ವಿಚಕ್ರ ವಾಹನ ಓಡಾಟಕ್ಕೆ ಅನುಮತಿ ನೀಡುತ್ತೇವೆ ಎಂದು ಹೇಳಿ ಈ ನಿರ್ಧಾರದಿಂದ ಸರ್ಕಾರ ಹಿಂದೆಯೂ ಸರಿಯಲಾಯ್ತು. ಈ ಬೆನ್ನಲ್ಲೀಗ ಈಗ ಇರುವ ಸ್ಥಿತಿಯಲ್ಲೇ ಲಾಕ್ಡೌನ್ ಮುಂದುವರಿಕೆಗೆ ಸರ್ಕಾರದ ಅಧಿಕೃತ ಆದೇಶ ಹೊರಡಿಸಿದೆ. ಏಪ್ರಿಲ್ 21ರವರಗೂ ಇದೇ ಸ್ಥಿತಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರ ಹೀಗೆ ಆದೇಶಿಸಿದ ಬೆನ್ನಲ್ಲೀಗ ಮತ್ತೆ ಏಪ್ರಿಲ್ 21ನೇ ತಾರೀಕಿನ ಬಳಿಕ ಲಾಕ್ಡೌನ್ ಸಡಿಲಗೊಳ್ಳಲಿದೆಯಾ ಎಂಬ ಪ್ರಶ್ನೆಗೆ ಸಿಎಂ ಕಚೇರಿ ಉತ್ತರವೂ ನೀಡಿದೆ. ಏ.21ರ ಮಧ್ಯರಾತ್ರಿಯವರೆಗೆ ಯಾವುದೇ ಬದಲಾವಣೆ ಇಲ್ಲ. ಇವಾಗ ಏನು ಆದೇಶ ಇದೆಯೋ ಅದೇ ಮುಂದುವರೆಯುತ್ತೆ. ಏ.21 ನಂತರ ಹೊಸ ಆದೇಶ ಹೊರಡಿಸಲಾಗುವುದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಿನ್ನೆ ಜನಾಭಿಪ್ರಾಯದ ಹಿನ್ನೆಲೆಯಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಈ ಕೆಳಕಂಡ ನಿರ್ಣಯಗಳನ್ನು ಪುನರ್ ವಿಮರ್ಶೆ ಮಾಡಿ ತೀರ್ಮಾನಗಳನ್ನು ತೆಗೆದುಕೊಂಡಿದೆ. ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ ಸಂಚಾರದ ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ. ಲಾಕ್ಡೌನ್ ಸಮಯದಲ್ಲಿದ್ದಂತೆ ಯಥಾಸ್ಥಿತಿಯನ್ನು ಮುಂದುವರೆಸಲಾಗುತ್ತದೆ ಎಂದು ಆದೇಶಿಸಿದೆ.
ಇದಕ್ಕೂ ಮುನ್ನ ಸಿಎಂ ಬಿ.ಎಸ್ ಯಡಿಯೂರಪ್ಪನವರು, ನಗರದಲ್ಲಿ ಕಂಟೇನ್ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ದ್ವಿಚಕ್ರ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಏಪ್ರಿಲ್ 20ರ ನಂತರ ಐಟಿ, ಬಿಟಿ ಕಂಪನಿಯ ಶೇ. 33ರಷ್ಟು ನೌಕರರು ಕಚೇಯಿಂದ ಕೆಲಸ ಮಾಡಬಹುದು. ಕಚೇರಿಗೆ ತೆರಳು ಪೊಲೀಸರಿಂದ ಪಾಸ್ ಪಡೆಯುವ ಅಗತ್ಯ ಇಲ್ಲ. ಕಟ್ಟಡ ಕಾಮಗಾರಿ ಮುಂದುವರೆಸಬಹುದು ಎಂದಿದ್ದರು.
Comments are closed.