
ನವದೆಹಲಿ(ಏ.15): ಮಾರಕ ಕೊರೋನಾ ವೈರಸ್ ವ್ಯಾಪಕಾವಗಿ ಹರಡುತ್ತಿರುವ ಕಾರಣ ಇಡೀ ಭಾತರವನ್ನೇ ಲಾಕ್‍ಡೌನ್ ಮಾಡಲಾಗಿದೆ. ಜನ ಕೂಡ ಕೋವಿಡ್-19 ಸೋಂಕಿನ ಭೀತಿಯಿಂದ ಮನೆಯಿಂದ ಹೊರಗೆ ಬರಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಇಡೀ ಜಗತ್ತಿನಾದ್ಯಂತ ಜನ ಮುಂಜಾಗೃತ ಕ್ರಮವಾಗಿ ಮನೆಗೆ ಬೇಕಾಗುವ ಅಗತ್ಯ ವಸ್ತುಗಳ ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಇದೀಗ ಆನ್ಲೈನ್ ಆ್ಯಪ್ಗಳ ಮೂಲಕ ತಮಗೆ ಬೇಕಾದ ಅಗತ್ಯ ವಿಸ್ತುಗಳ ಖರೀದಿ ಮಾಡುತ್ತಿದ್ದಾರೆ.
ದೇಶಾದ್ಯಂತ ಕೊರೋನಾದಿಂದ ಜಿಮ್‍ಗಳು, ಪಾರ್ಕ್ ಮತ್ತು ಥಿಯೇಟರ್, ಅಂಗಡಿಗಳು, ಮಾಲ್ಗಳು ಎಲ್ಲವೂ ಬಂದ್ ಆಗಿವೆ. ಅಲ್ಲದೇ ಎಲ್ಲರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಬೇಕಾದ ಆಹಾರ, ಅಗತ್ಯ ವಸ್ತುಗಳನ್ನು ಖರೀದಿಯೂ ಆನ್ಲೈನ್ನಲ್ಲೇ ನಡೆಯುತ್ತಿದೆ. ಈ ಆನ್ಲೈನ್ ಕಾಂಡೋಮ್‍ಗಳ ಖರೀದಿ ಹೆಚ್ಚಳವಾಗಿದೆ. ಕೊರೋನಾ ಬಳಿಕ ಜನ ಕಾಂಡೋಮ್ ಖರೀದಿ ಮಾಡುತ್ತಿದ್ದಾರೆ. ಡಂಜೋ ಎಂಬ ಆ್ಯಪ್ನಲ್ಲಿ ಮುಂಬೈ ಜನ ಬಹುತೇಕರು ಶೇ.25 ರಿಂದ ಶೇ.50ರಷ್ಟು ಕಾಂಡೋಮ್‍ಗಳ ಖರೀದಿ ಮಾಡುತ್ತಿದ್ಧಾರೆ ಎಂದು ತಿಳಿಸಿದೆ.
ಬೆಂಗಳೂರು ಮತ್ತು ಪುಣೆಯಲ್ಲಿ ಪ್ರಜ್ನೆನ್ಸಿ ಕಿಟ್ಗಳು, ಚೆನ್ನೈ ಮತ್ತು ಜೈಪುರದಲ್ಲಿ ಹ್ಯಾಂಡ್ ವಾಶ್ಗೆ ಸಂಬಂಧಿಸಿದ ವಸ್ತುಗಳು, ಹೈದರಾಬಾದ್ನಲ್ಲಿ ಐ-ಪಿಲ್ ಮತ್ತು ಮುಂಬೈನಲ್ಲಿ ಕೇವಲ ಕಾಂಡೋಮ್‍ಗಳ ಖರೀದಿ ಹೆಚ್ಚಳವಾಗಿದೆ ಎಂದು ಡಂಜೋ ಕಂಪನಿ ಟ್ವೀಟ್ ಮಾಡಿದೆ.
ದೇಶಾದ್ಯಂತ ಲಾಕ್‍ಡೌನ್ ಆಗಿದೆ. ಹೀಗಾಗಿ ಜನರಿಗೆ ತುಂಬಾ ಸಮಯ ಸಿಗುತ್ತಿದೆ. ಅಲ್ಲದೇ ಮನೆಯಲ್ಲಿ ಇದ್ದು ಬೇಸರಗೊಂಡಿದ್ದಾರೆ. ಈ ಕಾರಣದಿಂದಲೇ ಕಾಂಡೋಮ್‍ಗಳ ಬೇಡಿಕೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಜನರು ಮೂರು ಕಾಂಡೋಮ್‍ಗಳ ಸಣ್ಣ ಪ್ಯಾಕ್ ಖರೀದಿಸುತ್ತಿದ್ದರು. ಆದರೀಗ 10 ಮತ್ತು 20 ಕಾಂಡೋಮ್‍ಗಳಿರುವ ದೊಡ್ಡ ಪ್ಯಾಕ್‍ಗಳನ್ನು ಖರೀದಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಕಾಂಡೋಮ್ ಮತ್ತು ಗರ್ಭನಿರೋಧಕ ಮಾತ್ರೆಗಳ ಮಾರಾಟದಲ್ಲಿ ಹೆಚ್ಚಳ ಕಂಡುಬಂದಿದೆ. ಅದರಲ್ಲೂ ಕಚೇರಿಗಳು ಮತ್ತು ಮಾರುಕಟ್ಟೆಗಳು ಸ್ಥಗಿತಗೊಂಡ ಸಮಯದಿಂದ ಕಾಂಡೋಮ್‍ಗಳ ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.
Comments are closed.