ಮನೋರಂಜನೆ

ನಮ್ಮ ಕುಟುಂಬದಲ್ಲಿ ಹುಳಿ ಹಿಂಡಿದ್ದು ನಯನತಾರಾ: ಪ್ರಭುದೇವಾ ಮಾಜಿ ಪತ್ನಿ

Pinterest LinkedIn Tumblr


ಸೌತ್​ ಇಂಡಿಯಾದ ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಳ್ಳುವ ನಯನತಾರಾ ಅವರ ಲವ್ ಸ್ಟೋರೀಸ್​ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಶಿಂಬು ಜೊತೆ ಸಹ ನಯನತಾರಾ ಹೆಸರು ತಳುಕು ಹಾಕಿಕೊಂಡಿತ್ತು. ಅದರಲ್ಲೂ ನಟ-ನಿರ್ದೇಶಕ ಪ್ರಭುದೇವ ಅವರ ಜೊತೆಗಿನ ಪ್ರೇಮಾಯಾಣದ ಕುರಿತಾಗಿ ಈ ಹಿಂದೆ ಮಾಧ್ಯಮಗಳಲ್ಲಿ ಸಾಕಷ್ಟು ವರದಿಯಾಗಿತ್ತು.

ಆಗ ನಯನತಾರಾ ಹಾಗೂ ಪ್ರಭುದೇವ ಪ್ರೀತಿಸುತ್ತಿದ್ದು, ಮದುವೆಯಾಗಬೇಕು ಎಂದುಕೊಂಡಿದ್ದರು. ಇದೇ ಕಾರಣಕ್ಕೆ ಪ್ರಭುದೇವ ತಮ್ಮ ಮೊದಲ ಪತ್ನಿ ರಮಲತಾ ಅವರಿಗೆ ವಿಚ್ಛೇಧನ ಸಹ ಕೊಟ್ಟಿದ್ದರು. ಆದರೆ ಕೊನೆ ಕ್ಷಣದಲ್ಲಿ ನಯನತಾರಾ ಹಾಗೂ ಪ್ರಭುದೇವ ಬೇರೆಯಾದರು. ಈ ವಿಷಯ ಈಗ ಎಲ್ಲರೂ ಮರೆತು ಹೋಗಿದ್ದು, ಪ್ರಭು ತಮ್ಮ ಪಾಡಿಗೆ ಇದ್ದಾರೆ.

ಆದರೆ ಪತಿಯಿಂದ ದೂರಾದ ನಂತರವೂ ರಮಲತಾ ಮಾತ್ರ ತನ್ನ ಸಂಸಾರಕ್ಕೆ ಹುಳಿ ಹಿಂಡಿದ್ದು ನಯನತಾರಾ ಎಂದು ಹೇಳಿಕೊಂಡು ಓಡಾಡುತ್ತಿದ್ದಾರಂತೆ. ತನ್ನ ಸಂಸಾರಕ್ಕೆ ಕಿಚ್ಚು ಹಚ್ಚಿದ ನಯನತಾರಾ ಕೈಗೆ ಸಿಕ್ಕರೆ ಸಾಯಿಸುವಷ್ಟು ಸಿಟ್ಟಿದೆ ಎಂದು ಇಂದಿಗೂ ತಮ್ಮ ನೋವನ್ನು ತೋಡಿಕೊಳ್ಳುತ್ತಾರಂತೆ ರಮಲತಾ.

ರಮಲತಾ ಹಾಗೂ ಪ್ರಭುದೇವಾ ಅವರದ್ದು ಪ್ರೇಮ ವಿವಾಹ. ಮುಸಲ್ಮಾನರಾಗಿದ್ದ ರಮಲತಾ ಪ್ರಭುದೇವಾಗಾಗಿ ತಮ್ಮ ಧರ್ಮವನ್ನೇ ಬದಲಾಯಿಸಿಕೊಂಡರು. 1995ರಲ್ಲಿ ವಿವಾಹವಾದ ಈ ಜೋಡಿ 15 ವರ್ಷಗಳ ಕಾಲ ಚೆನ್ನಾಗಿಯೇ ಇದ್ದರು. ಪ್ರಭುದೇವ ಜೀವನದಲ್ಲಿ ನಯನತಾರಾ ಎಂಟ್ರಿ ಆಗಿದ್ದೇ ಆಯಿತು ಗಂಡ- ಹೆಂಡತಿ ನಡುವೆ ಮನಸ್ತಾಪ ಹಾಗೂ ಜಗಳ ಆರಂಭವಾಗಿತ್ತಂತೆ. ಆಗಲೇ ಅಂದರೆ 2008ರಲ್ಲಿ ಪ್ರಭುದೇವ ಅವರ ಮಗ ಕ್ಯಾನ್ಸರ್​ನಿಂದ ಸಾವನ್ನಪ್ಪುತ್ತಾನೆ.

2011ರಲ್ಲಿ ಪ್ರಭುದೇವ ರಮಲತಾಗೆ ವಿಚ್ಛೇಧನ ನೀಡುತ್ತಾರೆ. ಆದರೆ ನಯನತಾರಾರಿಂದಲೂ ದೂರ ಆಗುತ್ತಾರೆ. ಆದರೆ ರಮಲತಾ ಮಾತ್ರ ಇಂದಿಗೂ ತಮ್ಮ ದಾಂಪತ್ಯ ಹಾಳಾಗಲು ನಯನತಾರಾ ಕಾರಣ. 15 ವರ್ಷಗಳು ತನ್ನ ಗಂಡ ನನ್ನನ್ನು ದೇವತೆಯಂತೆ ನೋಡಿಕೊಂಡಿದ್ದರು. ಆದರೆ ನಯನತಾರಾ ಬಂದ ನಂತರ ಎಲ್ಲ ಬದಲಾಗಿ ಹೋಯಿತು ಎಂದು ನೊಂದುಕೊಳ್ಳುತ್ತಾರಂತೆ.

Comments are closed.