ಆರೋಗ್ಯ

ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಅಗತ್ಯವಾದ ಕಣ್ಣಿನ ಮೇಕಪ್ ಸಲಹೆಗಳು.

Pinterest LinkedIn Tumblr

ಕಾಂಟ್ಯಾಕ್ಟ್ ಲೆನ್ಸ್‌ಗಳು ಕನ್ನಡಕಕ್ಕೆ ಒಂದು ಉತ್ತಮ ಪರ್ಯಾಯವಾಗಿದೆ. ಇದು ನಮ್ಮ ಜೀವನವನ್ನು ತುಂಬಾ ಸುಲಭಗೊಳಿಸುತ್ತದೆ. ದಿನಪೂರ್ತಿ ಕನ್ನಡಕವನ್ನೇ ಧರಿಸಿರುವುದು ತುಂಬಾ ಕಿರಿಕಿರಿ ಎನಿಸುತ್ತದೆ. ಕನ್ನಡಕ ಧರಿಸೇ ಇದ್ದರೆ, ಕಣ್ಣಿನ ಕೆಳಗೆ ಕಲೆಗಳೂ ಆಗಬಹುದು. (ಡಾರ್ಕ್ ಸರ್ಕಲ್ಸ್) ಹಾಗಾಗಿ ಸಾಕಷ್ಟು ಮಹಿಳೆಯರು ಅದರಲ್ಲೂ ಕೆಲಸಕ್ಕೆ ಹೋಗುವ ಮಹಿಳೆಯರು ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಬಳಸುವುದನ್ನು ನೋಡಿದ್ದೇವೆ. ಕಾಂಟ್ಯಾಕ್ಟ್ ಲೆನ್ಸ್‌ಗಳು ನಿಮ್ಮ ಕೆಲಸವನ್ನು ತುಂಬಾ ಸುಲಭವಾಗಿಸುತ್ತದೆಯಾದರೂ, ನೀವು ಅವುಗಳನ್ನು ಧರಿಸಿದಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ನಿಯಮಿತವಾಗಿ ಮೇಕಪ್ ಧರಿಸುವವರಿಗಂತೂ ಇದು ಬಹಳ ಮುಖ್ಯವಾಗುತ್ತದೆ. ಕಾರಣವೆಂದರೆ, ನೀವು ಲೆನ್ಸ್ ಗಳನ್ನು ಧರಿಸಿ ಮೇಕಪ್ ಮಾಡಿದರೆ ನಿಮ್ಮ ಲೆನ್ಸ್ ಸುಲಭವಾಗಿ ಕೊಳಕುಗೊಳಿಸಬಹುದು ಮತ್ತು ನೀವು ಮೇಕಪ್ ಅನ್ನು ತಪ್ಪು ರೀತಿಯಲ್ಲಿ ಮಾಡುವ ಮೂಲಕ ನಿಮ್ಮ ಕಣ್ಣುಗಳಿಗೆ ತೊಂದರೆಯಾಗಬಹುದು. ಹಾಗಂದ ಮಾತ್ರಕ್ಕೆ ಲೆನ್ಸ್ ಧರಿಸುವವರು ಮೇಕಪ್ ಮಾಡಲೇ ಬಾರದೇ ಎಂಬ ಪ್ರಶ್ನೆ ನಿಮ್ಮದಾಗಿದ್ದರೆ ಅದಕ್ಕೆ ಉತ್ತರ ಇಲ್ಲ. ಖಂಡಿತವಾಗಿಯೂ ನೀವು ಮೇಕಪ್ ಮಾಡಬಹುದು. ನಿಮಗಿಷ್ಟವಾದ ಬಣ್ಣದ ಐ ಶ್ಯಾಡೋ, ಐ ಲೈನರ್ ಬಳಸಬಹುದು. ಆದರೆ ಅದನ್ನೆಲ್ಲಾ ಬಳಸುವುದಕ್ಕಿಂತ ಮೊದಲು ಕೆಲವು ಮುಂಜಾಗರೂಕತೆಗಳು ಅಗತ್ಯ. ಆದ್ದರಿಂದ, ಎಲ್ಲಾ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಪ್ರಮುಖವಾದ, ಅಗತ್ಯವಾದ ಕಣ್ಣಿನ ಮೇಕಪ್ ಸಲಹೆಗಳು ಇಲ್ಲಿವೆ.

ಕಾಂಟ್ಯಾಕ್ಟ್ ಲೆನ್ಸ್‌ಳೊಂದಿಗೆ ವ್ಯವಹರಿಸುವಾಗ ನಿಮ್ಮ ಕೈಗಳು ಸ್ವಚ್ಛವಾಗಿರಬೇಕು. ನಿಮ್ಮ ಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಸಣ್ಣ ಧೂಳಿನ ಕಣಗಳು ಮತ್ತು ನಿಮ್ಮ ಕೈಗಳಿಂದ ಬರುವ ತೈಲಗಳು ನಿಮ್ಮ ಮಸೂರಗಳಿಗೆ ವರ್ಗಾವಣೆಯಾಗಬಹುದು, ಅದನ್ನು ಕೊಳಕುಗೊಳಿಸಬಹುದು ಮತ್ತು ನಿಮ್ಮ ಕಣ್ಣುಗಳನ್ನು ಕೆರಳಿಸಬಹುದು. ಆದ್ದರಿಂದ, ನೀವು ಮೆಕಪ್ ಮಾಡುವ ಮೊದಲು ನಿಮ್ಮ ಕೈಗಳನ್ನು ಹ್ಯಾಂಡ್ ವಾಶ್ ಬಳಸಿ.

ಮೇಕಪ್ ಗಿಂತ ಮೊದಲು ಲೆನ್ಸ್ ಹಾಕಿ ನಿಮ್ಮ ಮೇಕಪ್ ಪ್ರಕ್ರಿಯೆಯ ಮೊದಲ ಹೆಜ್ಜೆ ನಿಮ್ಮ ಲೆನ್ಸ್ ಗಳನ್ನು ಧರಿಸುವುದು. ಇದು ನಿಮ್ಮನ್ನು ಕಣ್ಣಿನ ಬಹಳಷ್ಟು ತೊಂದರೆಗಳಿಂದ ಕಾಪಾಡುತ್ತದೆ. ನಮ್ಮಲ್ಲಿ ಹಲವರು ಲೆನ್ಸ್ ನ್ನು ಬಹಳ ಕೊನೆಯಲ್ಲಿ ಹಾಕುವ ತಪ್ಪನ್ನು ಮಾಡುತ್ತಾರೆ. ಇದು ನಿಮ್ಮ ಮೇಕಪ್ ಅನ್ನು ನಾಶಪಡಿಸುವುದಲ್ಲದೆ ನಿಮ್ಮ ಕಣ್ಣುಗಳಿಗೂ ತೊಂದರೆಯುಂಟುಮಾಡುತ್ತದೆ.

ತೈಲ ಮುಕ್ತ ಉತ್ಪನ್ನಗಳನ್ನು ಆರಿಸಿಕೊಳ್ಳಿ ತೈಲ ಮುಕ್ತ ಕಣ್ಣಿನ ಮೇಕಪ್ ಉತ್ಪನ್ನಗಳನ್ನು ಬಳಸಿ. ನೀವು ಬಳಸುವ ಉತ್ಪನ್ನಗಳಲ್ಲಿನ ತೈಲಗಳು ನಿಮ್ಮ ಕಣ್ಣಿಗೆ ವರ್ಗಾವಣೆಯಾಗಬಹುದು ಮತ್ತು ಅದು ನಿಮ್ಮ ಲೆನ್ಸ್ ಅನ್ನು ಮಂಜಾಗಿಸಬಹುದು ಇದರಿಂದಾಗಿ ನೀವು ಸ್ಪಷ್ಟವಾಗಿ ನೋಡಲು ಕಷ್ಟವಾಗುತ್ತದೆ.

ಉತ್ಪನ್ನಗಳನ್ನು ವಾಟರ್ಲೈನ್ ಗೆ ಲೇಪಿಸಬೇಡಿ ನಿಮ್ಮ ಕಣ್ಣುಗಳ ವಾಟರ್ಲೈನ್ (ನೀರ್ಗೆರೆ) ನಿಮ್ಮ ಲೆನ್ಸ್ ಗಳಿಗೆ ಹತ್ತಿರದಲ್ಲಿರುತ್ತದೆ. ನಿಮ್ಮ ಕಣ್ಣಿನ ಅಂಚಲ್ಲಿ ಉತ್ಪನ್ನವನ್ನು ಹಾಕುವಾಗ ಅಂದರೆ ಐಲೈನರ್ ಗಳನ್ನು ಬಳಸುವಾಗ ಬಹಳ ಜಾಗರೂಕರಾಗಿರಿ. ವಾಟರ್ಲೈನ್ ಬದಲು ಕಣ್ಣಿನ ರೆಪ್ಪೆಗಳಿಗೆ ಹಚ್ಚುವುದು ಒಳ್ಳೆಯದು. ನಿಮ್ಮ ವಾಟರ್ಲೈನ್ನಲ್ಲಿ ಉತ್ಪನ್ನವನ್ನು ಅನ್ವಯಿಸುವುದರಿಂದ ನಿಮ್ಮ ಕಣ್ಣುಗಳು ಒಣಗುತ್ತವೆ ಮತ್ತು ನಿಮ್ಮ ಲೆನ್ಸ್ ಗಳೂ ಕೊಳಕಾಗುತ್ತವೆ. ಆದ್ದರಿಂದ, ಬಹಳ ದಪ್ಪವಾಗಿ ಕಣ್ಗಪ್ಪನ್ನು ಹಚ್ಚುವ ಬದಲು ತೆಳುವಾಗಿ ಲೇಪಿಸುವುದು ಉತ್ತಮ.

ಬ್ರಷ್ ಅನ್ನು ಕಠಿಣವಾಗಿ ಬಳಸಬೇಡಿ ಐಶ್ಯಾಡೋ (ಕಣ್ಣಿಗೆ ಬಣ್ಣ ಹಚ್ಚುವುದು) ಅನ್ವಯಿಸುವಾಗ ನಾವು ಎಷ್ಟು ಕಠಿಣವಾಗಿ ಬ್ರಷ್ ಮಾಡುತ್ತಿದ್ದೇವೆ ಎಂಬುದು ಕೆಲವೊಮ್ಮೆ ನಮಗೇ ತಿಳಿದಿರುವುದಿಲ್ಲ. ಅಷ್ಟು ವೇಗವಾಗಿ ಮತ್ತು ಹೆಚ್ಚು ಕಠಿಣವಾಗಿ ಬ್ರಷ್ ಮಾಡುವುದರಿಂದ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಿಗೆ ಕಣ್ಣುಗುಡ್ಡೆಯ ಮೇಲೆ ಒತ್ತಡ ಹೇರುತ್ತೇವೆ. ಇದು ಕಣ್ಣಿಗೆ ಒಳ್ಳೆಯದಲ್ಲ. ಆದ್ದರಿಂದ, ನಿಮ್ಮ ಬ್ರಷ್ ಗಳನ್ನು ಸೌಮ್ಯವಾಗಿ ಬಳಸಿ. ಕಣ್ಣಿನ ಮೇಲೆ ಕಡಿಮೆ ಒತ್ತಡ ಹಾಕಲು ಬ್ರಷ್ ಗಳ ತುದಿಯಲ್ಲಿ ಹಿಡಿದುಕೊಳ್ಳಿ.

ಕ್ರೀಮ್ ಐಶ್ಯಾಡೋ ಗಳನ್ನು ಆಯ್ಕೆಮಾಡಿ ನೀವು ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಧರಿಸಿದರೆ, ಕ್ರೀಮ್ ಐಶ್ಯಾಡೋ ಗಳನ್ನು ಬಳಸುವುದು ಅತ್ಯುತ್ತಮ ಆಯ್ಕೆಯಾಗಿದೆ. ಸಾಮಾನ್ಯವಾಗಿ ಪುಡಿ ಐಶ್ಯಾಡೋ ಬಳಸುವುದರಿಂದ ಅದರ ಸಣ್ಣ ಕಣಗಳು ಕಣ್ಣಿನ ಒಳಗೂ ಹೋಗ ಬಹುದು. ಹೀಗಾದಾಗ ನೀವು ಕಣ್ಣಿಗೆ ಧರಿಸಿರುವ ಲೆನ್ಸ್ ಕೊಳೆಯಾಗುತ್ತದೆ. ಇದು ಕಣ್ಣುರಿಗೆ ಕಾರಣವಾಗುತ್ತದೆ. ಹೀಗಾಗಿ ಲೆನ್ಸ್ ಬಳಸುವ ಸುಂದರಿಯರೇ, ನಿಮ್ಮ ಕಣ್ಣುಗಳ ಅಂದವನ್ನು ಹೆಚ್ಚಿಸಲು ಕ್ರೀಮ್ ಐಶ್ಯಾಡೋಗಳನ್ನೇ ಬಳಸಿ.

ವಾಟರ್ ಪ್ರೋಫ್ (ನೀರು-ನಿರೋಧಕ) ಮಸ್ಕರಾ ಬಳಸಿ ನೀವು ವಾಟರ್ಲೈನ್ ನಲ್ಲಿ ಲೈನರ್ ಹಚ್ಚಿದ್ದರೆ,ನಿಮ್ಮ ಮಸ್ಕರಾವು ನಿಮ್ಮ ಮಸೂರಗಳಿಗೆ ಹತ್ತಿರದಲ್ಲಿರುತ್ತದೆ. ಅಂತಹ ಸಂದರ್ಭಗಳಲ್ಲಿ ನಾಜೂಕಿಲ್ಲದ ಮಸ್ಕರಾ ಬಳಸುವುದು ಸೂಕ್ತವಲ್ಲ. ಇದು ನಿಮ್ಮ ಕಣ್ಣುಗಳಿಗೆ ಅನಾನುಕೂಲವನ್ನುಂಟು ಮಾಡುತ್ತದೆ. ಆದ್ದರಿಂದ, ಉತ್ತಮ ಗುಣಮಟ್ಟದ ಮಸ್ಕರಾವನ್ನು ಕೊಂಡುಕೊಳ್ಳಿ. ಇದು ನಿಮ್ಮ ಕಣ್ಣುಗಳಿಗೆ, ಲೆನ್ಸ್ ಗಳಿಗೆ ಯಾವುದೇ ರೀತಿಯ ಹಾನಿ ಮಾಡುವುದಿಲ್ಲ.

ಹೆಚ್ಚುವರಿ ಫೇಸ್ ಪೌಡರ್ ಅನ್ನು ತೆಗೆದು ಹಾಕಿ ನೀವು ಹೆಚ್ಚು ಮೇಕಪ್ ಬಳಕೆದಾರರಾಗಿದ್ದರೆ, ನೀವು ಕ್ಲೆನ್ಸರ್ ನ್ನು ನಿಮ್ಮ ದಿನಚರಿಯಲ್ಲಿ ಬಳಸುವುದು ಸಾಮಾನ್ಯವಾಗಿದೆ. ಮತ್ತು ಕ್ಲೆನ್ಸರ್ ಬಳಸಿದ ನಂತರ, ನೀವು ಅದನ್ನು ಸರಿಹೊಂದಿಸಲು ಸೆಟ್ಟಿಂಗ್ ಪೌಡರ್ ನ್ನು ಬಳಸುತ್ತೀರಿ. ಈ ಪೌಡರನ್ನು ತುಸು ಕಡಿಮೆ ಬಳಸಿ. ಸೆಟ್ಟಿಂಗ್ ಪೌಡರ್ ನ್ನು ಬಳಸಿ ಕ್ಲೆನ್ಸರ್ ನ್ನು ಸರಿದೂಗಿಸಲು ತೊಡಗಿದಾಗ, ಹೆಚ್ಚುವರಿ ಪೌಡರ್ ನಿಮ್ಮ ಕಣ್ಣಿಗೆ ಬೀಳಬಹುದು. ಆದ್ದರಿಂದ, ನಿಮ್ಮ ಬ್ರಷ್ ಅಥವಾ ಬ್ಲೆಂಡರ್ ಮೇಲೆ ನೀವು ಪೌಡರ್ ನ್ನು ಹಾಕಿಕೊಂಡ ನಂತರ, ಹೆಚ್ಚುವರಿ ಪೌಡರ್ನ್ನು ತೊಡೆದುಹಾಕಲು ಬ್ರಷ್ ನ್ನ್ ಒಮ್ಮೆ ಅಲ್ಲಾಡಿಸಿ, ಹೆಚ್ಚುವರಿ ಪೌಡರ್ ಬೀಳುತ್ತದೆ. ಇದು ಕಣ್ಣಿಗೆ ಯಾವುದೇ ಅಪಾಯವನ್ನೂ ಮಾಡುವುದಿಲ್ಲ.

ನಿಮ್ಮ ಲೆನ್ಸ್ ಗಳನ್ನು ಪ್ರತಿದಿನ ಸ್ವಚ್ಛಗೊಳಿಸಿ ನೀವು ದಿನವೂ ಕಾಂಟ್ಯಾಕ್ಟ್ ಲೆನ್ಸ್ ಧರಿಸುವವರಾಗಿದ್ದರೆ, ಸ್ವಲ್ಪ ಧೂಳಿನ ಕಣವೂ ಸಹ ಕಣ್ಣುಗಳಿಗೆ ತೊಂದರೆಯನ್ನುಂಟು ಮಾಡುತ್ತವೆ ಎಂದು ನಿಮಗೆ ತಿಳಿದಿರಬಹುದು. ನೀವು ಮೇಕಪ್ ಮಾಡುವಾಗ, ಕೆಲವು ಉತ್ಪನ್ನಗಳು ನಿಮ್ಮ ಕಣ್ಣಿಗೆ ಹೋಗಿರುವ ಸಾಧ್ಯತೆಗಳಿವೆ. ಆದ್ದರಿಂದ, ಕೊನೆಯಲ್ಲಿ ಮತ್ತು ಲೆನ್ಸ್ ಗಳನ್ನು ಧರಿಸುವ ಮೊದಲು, ನೀವು ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

ಕಣ್ಣಿನ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿ ಇದು ಅತ್ಯಂತ ಪ್ರಮುಖವಾದ ವಿಷಯ. ದಿನದ ಕೊನೆಯಲ್ಲಿ, ನಮ್ಮಲ್ಲಿ ಹೆಚ್ಚಿನವರು ಸೋಮಾರಿಯಾಗುತ್ತಾರೆ ಮತ್ತು ಮೇಕಪ್ನೊಂದಿಗೆ ಮಲಗುತ್ತಾರೆ, ಅಥವಾ ಸರಿಯಾಗಿ ಮೇಕಪ್ ತೆಗೆಯುವುದೇ ಇಲ್ಲ. ಆದರೆ, ನೀವು ಕಾಂಟ್ಯಾಕ್ಟ್ ಲೆನ್ಸ್ ಧರಿಸುವಿರಾದರೆ, ನೀವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ನಿಮ್ಮ ಕಣ್ಣುಗಳ ಮೇಲೆ ಉಳಿದಿರುವ ಯಾವುದೇ ಧೂಳಿನ ಕಣಗಳು ಅಸ್ವಸ್ಥತೆಯನ್ನು ಉಂಟುಮಾಡಬಹುದು. ಹಾಗಾಗಿ ತಾಳ್ಮೆಯಿಂದಿರಿ ಮತ್ತು ನಿಮ್ಮ ಕಣ್ಣಿನ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಿದ ನಂತರವೇ ಮಲಗಿ. ಕಣ್ಣು ಬಹಳ ಸೂಕ್ಷ್ಮವಾದ ಅಂಗ. ಹಾಗಾಗಿ ನೀವು ಲೆನ್ಸ್ ಧರಿಸಿ ಮೇಕಪ್ ಮಾಡುವಾಗ ಈ ಮೇಲಿನ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲೇಬೇಕು.

Comments are closed.