ಆರೋಗ್ಯ

ಮೈಗ್ರೇನ್ ಹೋಗಿಸಲು ಸುಲಭ ಸರಳ ಉಪಾಯಗಳು.

Pinterest LinkedIn Tumblr

ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಗೊತ್ತೇ. ಮೈಗ್ರೇನ್ ತಲೆನೋವು ಇದೊಂದು ತಲೆನೋವಿನ ಜಾತಿ ಇದು ಬಂದರೆ ಸಾಕು ಅದನ್ನು ತಡೆಯುವ ಶಕ್ತಿ ಕೂಡ ಇರುವುದಿಲ್ಲ ಅಷ್ಟು ನೋವು ಬರುತ್ತದೆ ತಲೆಯನ್ನೇ ಯಾರೋ ಕಿತ್ತು ಎಸೆಯುತ್ತಿದ್ದರು ಎನ್ನುವಷ್ಟು ನೋವು ಆಗುತ್ತದೆ ಜೊತೆಗೆ ಈ ಮೈಗ್ರೇನ್ ಒಂದು ರೀತಿಯಲ್ಲಿ ವಿಚಿತ್ರ ನೋವು ಏಕೆಂದರೆ ಬಂದಷ್ಟು ಸುಲಭವಾಗಿ ಇದು ಹೋಗುವುದಿಲ್ಲ ಅಂದಾಜು ಎರಡು ದಿನ ಆದ್ರೂ ನೋವು ಇರುತ್ತದೆ ಏನನ್ನು ತಿನ್ನಲು ಆಗುವುದಿಲ್ಲ ಮಾತನಾಡಲು. ನಗಲು. ನಿದ್ರೆ ಮಾಡಲು ಕೂಡ ಆಗುವುದಿಲ್ಲ ಕತ್ತನ್ನು ಯಾವ ಕಡೆ ತಿರುಗಿಸಿದರು ಅಲ್ಲೆಲ್ಲ ನೋವು ಕಾಣಿಸುತ್ತದೆ ಜೊತೆಗೆ ವಾಂತಿ ಬರುವ ಹಾಗೆ ಆಗುತ್ತದೆ ಕತ್ತಲೆ ಅಲ್ಲಿ ಇರಬೇಕು ಎನ್ನಿಸುತ್ತದೆ ತುಂಬಾ ವಿಚಿತ್ರ ನೋವು ಈ ಮೈಗ್ರೇನ್.

ಸಾಮಾನ್ಯ ತಲೆನೋವಿಗೆ ಏನಾದರೂ ಮೇಡಿಷನ್ ತೆಗೆದುಕೊಂಡರೆ ಹೋಗುತ್ತದೆ ಆದರೆ ಇದಕ್ಕೆ ಏನೇ ತೆಗೆದುಕೊಂಡರು ಅಷ್ಟು ಸುಲಭವಾಗಿ ಹೋಗುವುದಿಲ್ಲ ಆದರೆ ಈ ಮೈಗ್ರೇನ್ ಹೋಗಿಸುವ ಸುಲಭ ಉಪಾಯ ಒಂದು ಇದೆ ಅದನ್ನು ತಿಳಿದುಕೊಳ್ಳೋಣ ಬನ್ನಿ. ಒಂದು ಲೋಟ ಉಗುರು ಬೆಚ್ಚನೆಯ ನೀರನ್ನು ತೆಗೆದುಕೊಂಡು ಅದಕ್ಕೆ ಸ್ವಲ್ಪ ಸೈನ್ಧವ ಲವಣ ಹಾಕಿ ನಂತರ ಒಂದು ಅರ್ಧ ಹೋಳು ನಿಂಬೆ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದನ್ನು ಕುಡಿಯಬೇಕು ಹೀಗೆ ಮೂರು ಗಂಟೆಗೆ ಒಮ್ಮೆ ಕುಡಿಯುತ್ತಾ ಬಂದರೆ ಮೈಗ್ರೇನ್ ತಲೆನೋವು ಕಡಿಮೆ ಆಗುತ್ತದೆ.

ಈ ಸೈನ್ಧವ ಲವಣದಲ್ಲಿ ಸುಮಾರು 90 ಕ್ಕಿಂತ ಹೆಚ್ಚು ನೈಸರ್ಗಿಕ ಅಂಶ. ಖನಿಜಗಳು. ವಿದ್ಯುದ್ವಿಚ್ಛೇದ್ಯಗಳು ಇರುತ್ತದೆ ಹಾಗಾಗಿ ಇದು ಒಳ್ಳೆಯ ಪರಿಣಾಮ ಬೀರುತ್ತದೆ.ಜೊತೆಗೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗೆಯೇ ಇದನ್ನು ಕುಡಿಯುವುದರಿಂದ ಹೇಗೆ ಮೈಗ್ರೇನ್ ಕಡಿಮೆ ಆಗುತ್ತದೆ ಎಂದು ನೋಡುವುದಾದರೆ ಬಿಸಿ ನೀರು ಇದು ನಮ್ಮ ದೇಹದಲ್ಲಿ ಇರುವ ಕೆಟ್ಟ ಅಂಶಗಳನ್ನು ಹೊರ ಹಾಕಲು ಸಹಾಯ ಮಾಡುತ್ತದೆ. ಇನ್ನೂ ನಿಂಬೆ ಹಣ್ಣಿನ ರಸ ಇದರಲ್ಲಿ ಪೊಟ್ಯಾಸಿಯಮ್ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದು ಒತ್ತಡಕ್ಕೆ ಸಂಬಂಧಿಸಿದ ತಲೆನೋವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಸೈನ್ಧವ ಲವಣ ಇದು ಇದರಲ್ಲಿ ಇರುವ ಎಲ್ಲ ರೀತಿಯ ಅಂಶಗಳು ಮೈಗ್ರೇನ್ ತಲೆನೋವನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ಇದು ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ, ಸ್ನಾಯು ಸೆಳೆತವನ್ನು ತಡೆಗಟ್ಟುತ್ತದೆ.

ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ ರಕ್ತದೊತ್ತಡವನ್ನು ಸ್ಥಿರ ಮಾಡುತ್ತದೆ. ರಕ್ತದ ಚಲನೆಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಇರುವ ಕೆಟ್ಟ ಜೀವಾಣುಗಳನ್ನೂ ತೊಡೆದು ಹಾಕಲು ಇದು ಸಹಾಯ ಮಾಡುತ್ತದೆ. ಹಾಗಾಗಿ ಇದನೆಲ್ಲ ಮಿಶ್ರಣ ಮಾಡಿಕೊಂಡು ಕುಡಿಯುವುದರಿಂದ ಮೈಗ್ರೇನ್ ತಲೆನೋವು ಬೇಗ ಗುಣ ಆಗುತ್ತದೆ ಹಾಗೂ ದೇಹದಲ್ಲಿ ಇರುವ ಕೆಟ್ಟ ಜೀವಾಣುಗಳು ಕೂಡ ಹೊರ ಹೋಗಿ ಆರೋಗ್ಯ ಸುಧಾರಿಸುತ್ತದೆ.

Comments are closed.