ಮನುಷ್ಯರಿಗೆ ಅಂಟಿಕೊಳ್ಳುವ ಮೂಲಕ ತನ್ನ ಬೀಜಗಳನ್ನು ಪ್ರಸರಣ ಮಾಡುವ ಈ ಒಂದು ಗಿಡದ ಬಗ್ಗೆ ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ ಬನ್ನಿ ಹಾಗಾದ್ರೆ ಅದು ಯಾವ ಗಿಡ ನೋಡೋಣ. ಒಮ್ಮೋಗ್ಗು ಅಥವಾ ಕಾಡು ಹುಚ್ಚೆಳ್ಳು ಗಿಡ ತೋಟಗಳಲ್ಲಿ ರಸ್ತೆ ಹಾಗೂ ಹೊಲಗಳ ಬದುಗಳಲ್ಲಿ ಕಂಡು ಬರುವ ಒಂದು ಸುಂದರವಾದ ಸಸ್ಯ ಮಳೆಗಾಲದಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಸಾಂಪ್ರದಾಯಿಕ ಔಷಧಿಯ ಸಸ್ಯ ಈ ಸಸ್ಯದ ಮೂಲ ಸ್ಥಾನ ಅಮೆರಿಕ ರಾಷ್ಟ್ರವಾಗಿದ್ದು ಅಮೆರಿಕಾ ಸೇರಿದಂತೆ ದಕ್ಷಣ ಆಫ್ರಿಕಾ ಭಾರತ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಕಂಡುಬರುತ್ತದೆ.
ಆಸ್ಟೇರೆಸಿಯೇ ಕುಟುಂಬಕ್ಕೆ ಸೇರಿದ ಇದರ ವೈಜ್ಞಾನಿಕ ಹೆಸರು ಬಿಡೆನ್ ಸ್ಟಿಲೋಸಾ ಆಂಗ್ಲಭಾಷೆಯಲ್ಲಿ ಬೆಗ್ಗರ್ ಸ್ಟಿಕ್ಸ, ಬ್ಲ್ಯಾಕ್ ಜಾಕ್ ಕೋಬೆಲೆರ್ಸ್ ಸ್ಪೆಗ್ಸ್, ಪ್ಯಾನಿಶ್ ನೀಡಲ್ ಎಂದೆಲ್ಲ ಕರೆದರೆ ಕನ್ನಡದಲ್ಲಿ ಒಮ್ಮೋಗ್ಗು ಕಾಡುಹುಚ್ಚೆಳ್ಳು ಉಬ್ಬಲುಗಿಡ ಕಪ್ಪುಜಿರಿಗೆ ಸಿಲುಬು ಮುಂತಾದ ಹೆಸರುಗಳಿವೆ. ಸುಮಾರು 1 ರಿಂದ 3 ಅಡಿ ಎತ್ತರಕ್ಕೆ ಬೆಳೆಯಬಲ್ಲ ಈ ಸಸ್ಯದಲ್ಲಿ ಒಂದೇ ಬುಡದಿಂದ ಕುಡಿಯೊಡೆದ ನೀಳವಾದ 3 ಹಸಿರು ಎಲೆಗಳಿದ್ದು ಮಧ್ಯದ ಎಲೆ ಉದ್ಧವಾಗಿದ್ದು ಕೆಳಬಾಗದ 2 ಎಲೆಗಳು ಚಿಕ್ಕದಾಗಿರುತ್ತವೆ ಈ ಎಲೆಗಳ ಅಂಚುಗಳು ಗರಗಸದ ಅಂಚಿನಂತಿರುತ್ತವೆ. ಹಳದಿ ಬಣ್ಣದ ಅಸಂಖ್ಯಾತ ಕೇಸರಗಳ ಸುತ್ತ ಮಾಸಲು ಬಿಳಿ ಬಣ್ಣದ ಪುಟ್ಟ ದಳಗಳಿಂದ ಕುಡಿದ ಹೂವುಗಳಿದ್ದು ಈ ಹೂವುಗಳು ಒಣಗಿದ ಬಳಿಕ ಮುಳ್ಳಿನಂತಹ ಬೀಜಗಳಾಗಿ ಮಾರ್ಪಾಡುತ್ತವೆ. ಇದರ ಅಕ್ಕ ಪಕ್ಕ ಸುಳಿದಾಡಿದವರಿಗೆಲ್ಲ ಅಂಟಿಕೊಳ್ಳುವ ಮೂಲಕ ಈ ಬೀಜಗಳ ಪ್ರಸರಣ ವಾಗುತ್ತವೆ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಗಳಲ್ಲಿ ಬಳಸಲ್ಪಡುವ ಈ ಸಸ್ಯದಲ್ಲಿ ಆಂಟಿ ಇನ್ ಪಾಮ್ಯಾಟರಿ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳು ಇದ್ದು ಈ ಗಿಡವನ್ನು ನೋವು ನಿವಾರಕವಾಗಿ ಹಾಗೂ ರೋಗನಿರೋಧಕ ಪೆಯವಾಗಿ ಬಳಸಲಾಗುತ್ತದೆ ಸಂಪೂರ್ಣ ಸಸ್ಯವೇ ಆಂಟಿ ರೊಮ್ಯಾಟಿಕ್ ಗುಣಗಳಿಂದ ಕೂಡಿದ್ದು ಈ ಗೀಡದ ತಾಜಾ ಎಲೆಗಳನ್ನು ತರಕಾರಿಯಂತೆ ಬಳಸಲಾಗುತ್ತದೆ
ಇದರ ಎಲೆಗಳಿಂದ ಚಹಾವನ್ನು ಸಹ ತಯಾರಿಸಲಾಗುತ್ತದೆ ಇದರ ಎಲೆಯ ಪಾನೀಯವನ್ನು ಹೊಟ್ಟೆನೋವು ಮಲಬದ್ಧತೆ ಅತಿಸಾರ ಜಂತುಹುಳುವಿನ ಸಮಸ್ಯೆ ಕೆಮ್ಮು ಮುಂತಾದ ಸಮಸ್ಯೆಗಳಲ್ಲಿ ಟಾನಿಕ್ ನಂತೆ ಬಳಸಲಾಗುತ್ತದೆ ತಲೆನೋವು ಜ್ವರ ಮಧುಮೇಹ ಸ್ನಾಯುಸೆಳೆತಗಳಲ್ಲಿ ಸಹಾಯಕವಾಗುವ ಈ ಸಸ್ಯದ ಎಲೆಗಳನ್ನು ನಿತ್ಯ ಆಹಾರದಲ್ಲಿ ಬಳಸಬಹುದಾಗಿದೆ ಇದರ ಎಲೆಯ ರಸವನ್ನು ಹುಣ್ಣುಗಳು ಹಾಗೂ ಗಾಯಗಳಿಗೂ ಹಚ್ಚಬಹುದಾಗಿದೆ ತುರಿಕೆ ಹಾಗೂ ಚರ್ಮದ ನವೆಗೂ ಸಹ ಇದರ ಎಲೆಯ ರಸವನ್ನು ಲೇಪಿಸಬಹುದು ಇದರ ಬೇರನ್ನು ಮಲೇರಿಯಾ ಹಾಗೂ ಮಲಬದ್ಧತೆಗಳಲ್ಲಿ ಔಷಧಿಗಾಗಿ ಬಳಸುವುದಲ್ಲದೆ ಹಲ್ಲು ನೋವಿನ ನಿವಾರಣೆಗಾಗಿ ಇದರ ಬೇರನ್ನು ಜಗಿಯುತ್ತಾರೆ ಸಹ ಇದರ ಬೇರುಗಳನ್ನು ತೊಳೆದು ಒಣಗಿಸಿ ಚಿತ್ರಕಲಾ ಕುಂಚಗಳಾಗಿಯೂ ಸಹ ಬಳಸಬಹುದಾಗಿದೆ. ಈ ಸಸ್ಯದ ಅಡ್ಡಪರಿಣಾಮದ ವರದಿಗಳು ಇಲ್ಲದಿದ್ದರೂ ಸಹ ಗರ್ಭಿಣಿಯರು ಹಾಗೂ ಸ್ತನ್ಯಪಾನ ಮಾಡಿಸುತ್ತಿರುವ ಸ್ತ್ರೀಯರು ಬಳಸುವಂತಿಲ್ಲ

Comments are closed.