ಕರ್ನಾಟಕ

ಪಾಕ್ ಪರ ಘೋಷಣೆ ಕೂಗಿದವರನ್ನು ಕಂಡಲ್ಲಿ ಗುಂಡಿಕ್ಕಲಿ: ರೇಣುಕಾಚಾರ್ಯ

Pinterest LinkedIn Tumblr


ದಾವಣಗೆರೆ: ಪಾಕಿಸ್ತಾನಕ್ಕೆ ಜಿಂದಾಬಾದ್‌ ಎನ್ನುವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆಗ್ರಹಿಸಿದರು.

ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ದೇಶ ವಿರೋಧಿಗಳು ನಿರಂತರವಾಗಿ ಪಾಕ್‌ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇದರ ಹಿಂದೆ ಯಾರು ಇದ್ದಾರೆ, ಏನು ಷಡ್ಯಂತ್ರ ಇದೆ ಎಂಬ ಬಗ್ಗೆ ನಮ್ಮ ಸರಕಾರ ತನಿಖೆ ಮಾಡುತ್ತದೆ. ಆದ್ದರಿಂದ ನಿರ್ದಾಕ್ಷಿಣ್ಯವಾಗಿ ಇಂತವರ ಮೇಲೆ ಕ್ರಮ ಕೈಗೊಳ್ಳಬೇಕು. ಇಂತವರನ್ನು ಗಲ್ಲಿಗೆ ಏರಿಸಬೇಕು, ಕಂಡಲ್ಲಿಗುಂಡಿಕ್ಕಿ ಕೊಲ್ಲಬೇಕು. ಇಲ್ಲಿಯ ಅನ್ನ, ನೀರು ಕುಡಿದು ಪಾಕ್‌ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇವರನ್ನು ನಮ್ಮಲ್ಲಿಯೇ ಯಾರೋ ರಕ್ಷಣೆ ಮಾಡುತ್ತಿದ್ದಾರೆ. ದೇಶ ವಿರೋಧಿ ಘೋಷಣೆ ಕೂಗಿದವರನ್ನು, ರಕ್ಷಣೆ ಮಾಡುತ್ತಿರುವರನ್ನು ನಾವೆಲ್ಲಒಟ್ಟಾಗಿ ಖಂಡಿಸಬೇಕು’ ಎಂದರು.

ಬಿಎಸ್‌ವೈ ತಂದೆ ಇದ್ದ ಹಾಗೆ

‘ಬಿಎಸ್‌ವೈ ವಿರುದ್ಧ ಯಾರು ದೂರು ಕೊಟ್ಟಿಲ್ಲ. ಎಲ್ಲಶಾಸಕರು ಒಂದಾಗಿದ್ದೇವೆ. ಬಿಎಸ್‌ವೈ ನನಗೆ ತಂದೆ ಇದ್ದ ಹಾಗೆ. ಬಿಜೆಪಿ ರಾಷ್ಟ್ರೀಯ ಪ್ರ. ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ಹನ್ನೊಂದು ಶಾಸಕರು ದೂರು ನೀಡಿದ್ದು ಸುಳ್ಳು. ಇದು ಕೇವಲ ಮಾಧ್ಯಮಗಳ ಸೃಷ್ಟಿಯಾಗಿದೆ ಅಷ್ಟೇ’ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು.

Comments are closed.