ಕುಂದಾಪುರ: ಸಾಹಿತ್ಯ, ಶಿಲ್ಪ ಕಲೆಗೆ ಸಾಮ್ಯತೆ ಇದೆ. ಶಿಲ್ಪಿ ತುಂಡುಕಲ್ಲಿಗೆ ಪ್ರತಿಭೆ, ಧ್ಯಾನದ ಮೂಲಕ ಸುಂದರ ಮೂರ್ತಿ ಕೊಟ್ಟರೆ ಸಾಹಿತಿ ತನಗೆ ಸಿಕ್ಕ ವಸ್ತುವಿಗೆ ತನಗೆ ಬೇಕಾದ ಹಾಗೆ ರೂಪ ಕೊಡಲು ಭಾಷೆ, ಜ್ಞಾನ ಬಳಸುತ್ತಾನೆ. ಸಾಹಿತ್ಯ ಕ್ಷೇತ್ರಕ್ಕೆ ಬರವ ಎಲ್ಲರಿಗೂ ಭಾಷೆ ಬಳಕೆ, ನಿರೂಪಿಸುವ ತಾಕತ್ತು ಇರಬೇಕಾಗುತ್ತದೆ. ಭಾಷೆ ಹೇಗೆ ಬಳಸಬೇಕು ಹೇಗೆ ಪ್ರಸ್ತುತ ಪಡಿಸಬೇಕು ಎನ್ನುವುದು ಕೊರತೆಯಾಗಿದ್ದು, ಅಧ್ಯಯನದ ಮೂಲಕ ಕೊರೆತೆ ನೀಗಿಸಿಕೊಳ್ಳಬೇಕು ಎಂದು ಹಿರಿಯ ಸಾಹಿತಿ ಜನಾರ್ದನ ಎಸ್.ಮರವಂತೆ ಬಣ್ಣಿಸಿದ್ದಾರೆ. ಕೋಟ ಕಲಾ ಸೌರಭ ಸಂಸ್ಕೃತಿಕ ಸಂಘಟನೆ, ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜ್ ಆಶ್ರಯದಲ್ಲಿ ಕಾಲೇಜ್ ವೇದಿಕೆಯಲ್ಲಿ ಶನಿವಾರ ನಡೆದ ಉಡುಪಿ ಜಿಲ್ಲಾ ಪದವಿ ಮತ್ತು ಪದವಿಪೂರ್ವ ಕಾಲೇಜ್ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡುತ್ತಿದ್ದರು.

ಭಾಷಾ ಜ್ಞಾನ ಹಿಡಿತ ಎಲ್ಲದಿದ್ದಾಗ ನಾವು ಹೇಳಬೇಕಾದ ಸಂಗತಿ ಹೊರಗಿಡಲು ಆಗದು. ಭಾಷೆ ಮತ್ತು ಜ್ಞಾನದ ಸಂಪಾದನೆಗೆ ತಕ್ಕಮಟ್ಟಿಗಿನ ಅಧ್ಯಯನ ಬೇಕು. ಸಾಹಿತ್ಯ ಕ್ಷೇತ್ರ ಆಯ್ಕೆ ಹಲವಿದ್ದು, ಕವನ, ಕತೆಗಳು, ಕಾದಂಬರಿ, ಪ್ರವಾಸಕಥನಾ ಸಾಹಿತ್ಯ ಬರವಣಿಗೆಗೆ ಬೇಕಾದ ಭಾಷಾ ಜ್ಞಾನ ಪಡೆಯದಿದ್ದರೆ ನಾವು ಹೇಳಬೇಕದ ವಿಷಯ ಹೇಳೋದಕ್ಕೆ ಆಗೋದಿಲ್ಲ. ಸಾಹಿತ್ಯ ಅಧ್ಯಯನದ ಮೂಲಕ ಭಾಷೆ ಬಳಕೆ ಹಿಡತದ ಜೊತೆ ನಾವು ಹೇಳಬೇಕಿರುವುದು ಸಲೀಸಾಗಿ ಹೇಳಬಹುದು ಎಂದರು.
ವಿದ್ಯಾರ್ಥಿ ದಿಶೆಯಲ್ಲೇ ಓದು ಅಧ್ಯಯನ ರೂಡಿಸಿಕೊಳ್ಳಬೇಕು ಎಂದ ಅವರು, ನಮ್ಮ ಕೈಚಳಕ್ಕೆ ನಾವು ಏನು ಹೇಳಲು ಇಚ್ಛಿಸಿದ್ದೇವೋ ಅದನ್ನು ಅಕ್ಷರ ರೂಪದಲ್ಲಿ ಇಳಿಸಲು ಸಾಧ್ಯ. ಸಾಹಿತಿ, ಕವಿ, ಬರಹಗಾರ ಆಗಬೇಕಿದ್ದರೆ, ಅಂತವರು ಖಂಡಿತವಾಗಿ ಅಧ್ಯಯನ ಶೀಲರಾಗಬೇಕು. ಶಾಲಾ ಪಠ್ಯಪುಸ್ತಕ ಓದಿನಿಂದ ಸಾಹಿತಿ ಆಗಲು ಆಗದು, ಓದು, ಅಧ್ಯಯನ ಬರವಣಿಗೆ ತಾಕತ್ತು ಹೆಚ್ಚಿಸುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶಿಸಲು ವಿದ್ಯಾರ್ಥಿ ಜೀವನ ಸರಿಯಾದ ಸಮಯ ಎಂದು ಹೇಳಿದರು.
ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜ್ ಪ್ರಾಂಶುಪಾಲ ಪ್ರೊ.ಕೆ.ಉಮೇಶ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಭಾವನಾ ಆರ್.ಭಟ್ ಕೆರೆಮಠ, ಕೋಟ ಕಲಾ ಸೌರಭ ಸಾಂಸ್ಕೃತಿಕ ಸಂಘದ ಸುದರ್ಶನ ಉರಾಳ ಕೋಟ, ಡಾ.ಬಿ.ಬಿ.ಹೆಗ್ಡೆ ಕಾಲೇಜ್ ಕನ್ನಡ ವಿಭಾಗ ಮುಖ್ಯಸ್ಥ ಚೇತನ ಕುಮಾರ್ ಶೆಟ್ಟಿ ಕೊವಾಡಿ ಇದ್ದರು.
ತೆಕ್ಕಟ್ಟೆ ಕೊಮೆ ಯಶಸ್ವಿ ಕಲಾವೃಂದ ವೆಂಕಟೇಶ ವೈದ್ಯ ಸ್ವಾಗತಿಸಿದರು. ಗಂಗೊಳ್ಳಿ ಸರಸ್ವತಿ ಪದವಿಪೂರ್ವ ಕಾಲೇಜ್ ಉಪನ್ಯಾಸಕ ಸುಜಿಯೀಂದ್ರ ಹಂದೆ ಹೆಚ್. ಪ್ರಾಸ್ತಾವಿಕ ಮಾತನಾಡಿದರು. ಭಾಗವತ ಲಂಬೋಧರ ಹೆಗ್ಡೆ ನಿಟ್ಟೂರು ನಿರೂಪಿಸಿದರು. ರಾಘವೇಂದ್ರ ತುಂಗ ಪಿ.ವಂದಿಸಿದರು.
ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ನೂರಕ್ಕೂ ಹೆಚ್ಚು ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿದ್ದು, ಕಳೆದ ಐದ ವರ್ಷದಿಂದ ಕಾಲೇಜ್ ಹೊರತರುತ್ತಿವ ಸಂಚಿಕ ಪ್ರಥಮ ಸ್ಥಾನ ಪಡೆಯುವ ಮೂಲಕ ವಿದ್ಯಾರ್ಥಿಗಳ ಸಾಹಿತ್ಯ ಶಕ್ತಿ ಅನಾವರಣ ಮಾಡಿದೆ. ಕಾಲೇಜ್ ಕೂಡಾ ಓದಿಗೆಷ್ಟು ಪ್ರಾಮುಖ್ಯತೆ ನೀಡುತ್ತದೆಯೋ ಅಷ್ಟು ಸಾಹಿತ್ಯ ಕೃಷಿಗೂ ನೀಡುತ್ತದೆ. ನೋಡಿದ, ನಮ್ಮಲ್ಲಿ ಮೂಡಿದ ಹೊಸ ಹೊಸ ಚಿಂತನೆಗಳ ಅಕ್ಷರ ರೂಪಕ್ಕೆ ಇಳಿಸುವ ಮೂಲಕ ವಾರ್ಷಿಕ ಸಂಚಿಕೆ ಸಾಹಿತ್ಯ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.
– ಪ್ರೊ.ಕೆ.ಉಮೇಶ್ ಶೆಟ್ಟಿ, ಪ್ರಾಂಶುಪಾಲ, ಡಾ.ಬಿ.ಬಿ.ಹೆಗ್ಡೆ ಕಾಲೇಜ್ ಕುಂದಾಪುರ.
ಸಾಹಿತ್ಯ, ಓದಿಂದ ದೂವಾಗುತ್ತಿದ್ದಾರೆ ಎನ್ನುವ ಆರೋಪ, ವಿಷಾದ ನಡುವಿನ ಕಾಲ ಘಟ್ಟದಲ್ಲಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಆಶಾಕಿರಣವಾಗಿ ಕಾಣುತ್ತಿದೆ. ನೂರಾರು ಸಾಹಿತ್ಯಾಸಕ್ತಿಯಿರುವ ವಿದ್ಯಾರ್ಥಿಗಳಿಗೆ ಸಮ್ಮೇಳನ ಹೊಸಾ ಸಾಹಿತ್ಯಾಸಕ್ತರ ಸೃಷ್ಟಿಗೆ ಹಾಗೂ ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಆಗಲಿದೆ. ವಿದ್ಯಾರ್ಥಿಗಳಿಗೆ ಸಾಹಿತ್ಯ ತಿಳಿಯಲು ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳಲು ಉತ್ತಮ ವೇದಿಕೆ.
– ಜನಾರ್ದನ್ ಎಸ್.ಮರವಂತೆ, ನಿವೃತ್ತ ಉಪನ್ಯಾಸಕ ಮರವಂತೆ
Comments are closed.