ಅಂತರಾಷ್ಟ್ರೀಯ

ತೈಲ ರಾಷ್ಟ್ರಗಳ ಸಂಪತ್ತು 15 ವರ್ಷಗಳಲ್ಲಿ ಖಾಲಿ!

Pinterest LinkedIn Tumblr


ವಿಶ್ವಸಂಸ್ಥೆ: ಜಗತ್ತಿನ ರಾಷ್ಟ್ರಗಳಿಗೆ ತೈಲ ಸರಬರಾಜು ಮಾಡುವ ಮೂಲಕ ಮಧ್ಯಪ್ರಾಚ್ಯದ ತೈಲ ರಾಷ್ಟ್ರಗಳು ಸಂಪಾದಿಸಿರುವ ಅಂದಾಜು 142 ಲಕ್ಷ ಕೋಟಿ ರೂ. ಮೊತ್ತದ ಆರ್ಥಿಕ ಸಂಪತ್ತು 15 ವರ್ಷಗಳಲ್ಲೇ ಕರಗುತ್ತದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಅಧ್ಯಯನ ವರದಿ ಯೊಂದು ಹೇಳಿದೆ.

ಜಾಗತಿಕ ಮಟ್ಟದಲ್ಲಿ ಈಗಿರುವ ಕಚ್ಚಾ ತೈಲದ ಬೇಡಿಕೆ ಊಹೆಗೂ ಮೀರಿ ಕಡಿಮೆಯಾಗುತ್ತಾ ಹೋಗುತ್ತದೆ. ಇದು ವಿಶ್ವದ ಪ್ರಮುಖ ಕಚ್ಚಾ ತೈಲ ಉತ್ಪಾದನಾ ಒಕ್ಕೂಟವಾದ ‘ಗಲ್ಫ್ ಕೋಆಪರೇಷನ್‌ ಕೌನ್ಸಿಲ್‌’ನ (ಜಿಸಿಸಿ) ಕಾರ್ಯಚಟುವಟಿಕೆಗಳ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆ.

ವ್ಯಾಪಾರ ಕುಂಠಿತವಾಗಿ ರಾಜಪ್ರಭುತ್ವ ಹೊಂದಿರುವ ಆರು ತೈಲ ಸಂಪದ್ಭರಿತ ರಾಷ್ಟ್ರಗಳು ನಡೆಸುತ್ತಿರುವ ಜಿಸಿಸಿ ಒಕ್ಕೂಟ ನಷ್ಟ ಹಾಗೂ ಸಾಲದ ಸುಳಿಗೆ ಸಿಲುಕುತ್ತದೆ. ಅದರಿಂದ 2034ರ ವೇಳೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿರುವ 142 ಲಕ್ಷ ಕೋಟಿ ರೂ.ಗಳಷ್ಟು ಆರ್ಥಿಕ ಸಂಪತ್ತು ಕರಗುತ್ತದಲ್ಲದೆ, ಅಲ್ಲಿಂದ ಮುಂದಕ್ಕೆ 10 ವರ್ಷಗಳಲ್ಲಿ ತೈಲೇತರ ಮೂಲಗಳಿಂದ ಆ ದೇಶಗಳು ಗಳಿಸಿದ್ದ ಸಂಪತ್ತು ಕೂಡ ಮಾಯವಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.

Comments are closed.