ಮಂಗಳೂರು/ ಪೆರ್ಲ, ಫೆಬ್ರವರಿ.05: ಕರ್ನಾಟಕ-ಕೇರಳ ಗಡಿಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಅಡ್ಕಸ್ಥಳ ಬಹು:ಮಶ್ಹೂರ್ ವಲಿಯುಲ್ಲಾಹಿ(ರ.ಅ) ದರ್ಗಾಶರೀಫ್ನಲ್ಲಿ ಎರಡು ವರ್ಷಗಳಿಗೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಮಂಗಳವಾರ ಆರಂಭಗೊಂಡಿದ್ದು, 8ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಮಂಗಳವಾರ ಬೆಳಗ್ಗೆ ಜಮಾಅತ್ ಕಮಿಟಿಯ ಅಧ್ಯಕ್ಷ ಸಿಎ ಅಬ್ದುಲ್ಲ ಮಾದುಮೂಲೆ ಧ್ವಜಾರೋಹಣ ನೆರವೇರಿಸಿದರು. ರಾತ್ರಿ 7 ಗಂಟೆಗೆ ಮಖಾಂ ಝಿಯಾರತ್ ನಡೆಯಿತು. ಬಳಿಕ ಸೈಯದ್ ಕೆ.ಎಸ್.ಅಲಿ ತಂಙಳ್ ಕುಂಬೋಳ್ ಉರೂಸ್ ಅಂಗವಾಗಿ ನಡೆಯಲಿರುವ 5 ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಡ್ಕಸ್ಥಳ ಜಮಾಅತ್ ಕಮಿಟಿಯ ಗೌರವಾಧ್ಯಕ್ಷ ಸೈಯದ್ ಮೀರ್ಝಾಹೀದ್ ತಂಙಳ್ ಮಂಜೇಶ್ವರ ಅಧ್ಯಕ್ಷತೆುಲ್ಲಿ ನಡೆದ ಸಮಾರಂಭದಲ್ಲಿದಲ್ಲಿ ಅಡ್ಕಸ್ಥಳದ ಮುದರ್ರಿಸ್ ಅಲ್ಹಾಜ್ ಕೆ.ಬಿ.ಅಬ್ದುರ್ರಝಾಕ್ ಮಿಸ್ಬಾಹಿ ಪ್ರವಚನ ನೀಡಿದರು.
ಇಂದು (ಫೆ.5) ಮುಹಮ್ಮದ್ ಅಝ್ಹರಿ ಪೆರೋಡ್, ಜ.6ರಂದು ಅಬೂಬಕರ್ ಸಿದ್ದೀಖ್ ಅಹ್ಮದ್ ಅಲ್ಜಲಾಲಿ ಕಲ್ಲೇಗ, ಫೆ.7ರಂದು ಅಬ್ದುಲ್ ಕರೀಂ ಫೈಝಿ ಕುಂತೂರು ಪ್ರವಚನ ನೀಡಲಿದ್ದಾರೆ.
ಫೆ.8ರಂದು ಉರೂಸ್ನ ಸಮಾರೋಪ ಸಮಾರಂಭ ನಡೆಯಲಿದ್ದು, ಅಲ್ಹಾಫಿಳ್ ಶಮೀಸ್ಖಾನ್ ನಾಫಿಈ ಇಡುಕ್ಕಿ ಪ್ರವಚನ ನೀಡಲಿರುವರು. ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೋಸಿ ಕಲ್ಲರಕಲ್ ನೇತೃತ್ವದಲ್ಲಿ ಕೂಟ ಝಿಯಾರತ್ ನಡೆಯಲಿದೆ.

Comments are closed.