ಮಂಗಳೂರು/ ಸುರತ್ಕಲ್ : ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿರುವ ಅಷ್ಟಬಂಧಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ ಹಾಗೂ ಧರ್ಮನೇಮೋತ್ಸವದ ಅಂಗವಾಗಿ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಮರ್ಪಿಸಲಿರುವ ಹೊರೆಕಾಣಿಕೆಯ ಮೆರವಣಿಗೆಯು ಜರುಗಿತು.
ಕೃಷ್ಣಾಪುರ, ಸೂರಿಂಜೆ, ಕಾಟಿಪಳ್ಳ, ಪಡುಪದವು, ಸುರತ್ಕಲ್, ಮುಕ್ಕ ಭಾಗದಿಂದ ಹೊರೆಕಾಣಿಕೆಯನ್ನು ಇಡ್ಯಾ ಸನ್ನಿಧಾನಕ್ಕೆ ವಿಜೃಂಭನೆಯುಂದ ಮೆರವಣಿಗೆಯ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಇಡ್ಯಾ ಮಹಾಲಿಂಗೇಶ್ವರ ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಮಹಿಳಾ ಸಮಿತಿ ಪದಾಧಿಕಾರಿಗಳು ಹಾಗೂ ಇಡ್ಯಾ ಕ್ಷೇತ್ರ ಭಕ್ತರುಗಳು ಉಪಸ್ಥಿತರಿದ್ದರು.
ಹೊರೆಕಾಣಿಕೆಯ ಮೆರವಣಿಗೆಯ ಬಳಿಕ ಇಡ್ಯಾ ಸನ್ನಿಧಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮಾತನಾಡಿದ ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೇಸರ ಐ ರಮಾನಂದ ಭಟ್ ಮಾತನಾಡಿ ಇಡ್ಯಾ ದೇವರ ಬ್ರಹ್ಮಕಲಶೋತ್ಸವಕ್ಕೆ ಹಸಿರು ಹೊರೆಕಾಣಿಕೆಯನ್ನು ನೀಡುವ ಮೂಲಕ ಭಕ್ತರು ತಮ್ಮ ಕಷ್ಟದ ಕಾರ್ಪಾಣ್ಯದ ಹೊರೆಯನ್ನು ದೇವರಿಗೆ ಅರ್ಪಿಸಿ ಕೃತಾರ್ಥರಾಗಿದ್ದೇರೆ. ದೇವರು ಎಲ್ಲರ ಕಷ್ಟದ ಹೊರೆಯನ್ನು ಕಡಿಮೆ ಮಾಡಲಿ ಎಂದು ಆಶೀರ್ವಚನ ನೀಡಿದರು.
ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಕಾರ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಸಂತೋಷ್ ಕುಮಾರ್ ಶೆಟ್ಟಿ, ಅಗರಿ ರಾಘವೇಂದ್ರ ರಾವ್,ಟಿ ಎನ್ ರಮೇಶ್, ಮಹೇಶ್ ಮೂರ್ತಿ ಸುರತ್ಕಲ್ ಉಪಸ್ಥಿತರಿದ್ದರು.


Comments are closed.