
ಒಗ್ಗರಣೆ ಅಥವಾ ಆಹಾರದ ಪರಿಮಳ ಹೆಚ್ಚಿಸುವ ಕರಿಬೇವನ್ನು ತಿನ್ನುವವರು ತುಂಬಾ ವಿರಳ. ಸಾಮಾನ್ಯ ಮಸಾಲೆಯುಕ್ತ ಎಲ್ಲ ಆಹಾರ ಪದಾರ್ಥಗಳಲ್ಲೂ ಕರಿಬೇವು ಎಲೆಗಳನ್ನು ಬಳಸಲಾಗುತ್ತಿದೆ. ಕರಿಬೇವು ಕೇವಲ ಆಹಾರದ ರುಚಿಗೆ ಮಾತ್ರವಲ್ಲ, ಆರೋಗ್ಯಕ್ಕೂ ಒಳ್ಳೆಯದು. ನಮ್ಮ ದಿನನಿತ್ಯದ ಆಹಾರದಲ್ಲಿ ಕರಿಬೇವು ಬಳಸುವುದರಿಂದ ಸಿಗುವ ಪ್ರಯೋಜನಗಳಾವುವು ಎಂಬುದನ್ನು ತಿಳಿಯೋಣ.
ಅತಿಸಾರಕ್ಕೆ ಪರಿಹಾರ:
ಕರಿಬೇವಿನಲ್ಲಿ ಕಾರ್ಬಜೋಲ್ ಅಲ್ಕಾಲೋಯ್ಡ್ ಅಂಶವಿದೆ. ಈ ಅಂಶವು ದೇಹದಲ್ಲಿ ಸಾಮಾನ್ಯ ಪ್ರಮಾಣದಲ್ಲಿದ್ದರೆ ಅತಿಸಾರದ ಸಮಸ್ಯೆ ತಲೆದೊರುವುದಿಲ್ಲ. ಹೀಗಾಗಿ ಕರಿಬೇವನ್ನು ಅತಿಸಾರದ ಮನೆಮದ್ದು ಎನ್ನಬಹುದು.
ಕೆಮ್ಮು, ನೆಗಡಿಗೆ ಪರಿಹಾರ :
ಆಹಾರದಲ್ಲಿ ಕರಿಬೇವಿನ ಬಳಕೆಯಿಂದ ಶ್ವಾಸಕೋಶದ ಆರೋಗ್ಯ ವೃದ್ಧಿಯಾಗುತ್ತದೆ. ಇದರಿಂದ ಕೆಮ್ಮು, ನೆಗಡಿ ಅಸ್ತಮಾದಂತಹ ಸಮಸ್ಯೆಗಳು ದೂರವಾಗುತ್ತವೆ.
ಕೊಲೆಸ್ಟ್ರಾಲ್ ನಿಯಂತ್ರಣ:
ಆಹಾರದಲ್ಲಿ ಕರಿಬೇವಿನ ಬಳಕೆಯು ದೇಹದಲ್ಲಿನ ಕೊಲೆಸ್ಟ್ರಾಲ್ನ್ನು ನಿಯಂತ್ರಿಸುವುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಮೂತ್ರ ಸಂಬಂಧಿ ಕಾಯಿಲೆಗೆ ಪರಿಹಾರ:
ಕರಿಬೇವನ್ನು ಕುದಿಸಿ, ಕಷಾಯ ಮಾಡಿ ಕುಡಿಯುವುದು ಕೂಡ ಉತ್ತಮ. ಕರಿಬೇವಿನ ಕಷಾಯ ಕುಡಿಯುವುದರಿಂದ ಮೂತ್ರ ಸಂಬಂಧಿಸಿ ಕಾಯಿಲೆಗಳು ದೂರವಾಗುತ್ತವೆ.
ಕಬ್ಬಿಣದ(ಐರನ್) ಅಂಶ ಹೆಚ್ಚಿಸುತ್ತದೆ :
ಕರಿಬೇವು ಕಬ್ಬಿಣದ(ಐರನ್) ಅಂಶ ಮತ್ತು ಫೋಲಿಕ್ ಆಮ್ಲದ ಮೂಲವಾಗಿದೆ. ಹಾಗಾಗಿ ಕರಿಬೇವು ಸೇವನೆ ದೇಹದಲ್ಲಿ ಐರನ್ ಕೊರತೆ ಇದ್ದರೆ ಅದನ್ನು ಪರಿಹರಿಸಿ ರಕ್ತಹೀನತೆಯಿಂದ ನಮ್ಮನ್ನು ರಕ್ಷಿಸುತ್ತದೆ.
ಬ್ಲಡ್ ಶುಗರ್ ಕಂಟ್ರೋಲ್:
ಕರಿಬೇವಿನಲ್ಲಿರುವ ಫೈಬರ್ ರಕ್ತದಿಂದ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುತ್ತದೆ ಮತ್ತು ರಕ್ತದಲ್ಲಿ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ. ಕರಿಬೇವಿನ ಎಲೆ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
ಕರಿಬೇವಿನಲ್ಲಿ ಫೋಲಿಕ್ ಆಮ್ಲ ಅಧಿಕವಾಗಿರುತ್ತದೆ. ಹಾಗೆಯೇ ಐರನ್ ಅಂಶವು ಈ ಎಲೆಗಳಿರುತ್ತವೆ. ಹೀಗಾಗಿ ಇದನ್ನು ಪ್ರತಿನಿತ್ಯದ ಆಹಾರದಲ್ಲಿ ಬಳಸಿ ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆ ನಿವಾರಿಸಬಹುದು.
– ಕರಿಬೇವಿನ ಸೊಪ್ಪಿನಲ್ಲಿ ವಾಯುಕಾರಕವನ್ನು ತೆಗೆದುಹಾಕುವ ನಾರಿನಂಶ ಇದ್ದು, ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಅನಗತ್ಯ ವಿಷ ಪದಾರ್ಥವನ್ನು ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ.
– ಕೂದಲಿನ ಆರೋಗ್ಯ ಕಾಪಾಡುವಲ್ಲಿ ಕರಿಬೇವು ಪ್ರಮುಖ ಪಾತ್ರವಹಿಸುತ್ತದೆ.
Comments are closed.