ಕರ್ನಾಟಕ

ಕೆಲಸದ ಸಮಯ ಹೆಚ್ಚಾದದರೂ, ಸಂಬಳ ಏರಿಕೆಯಾಗುವುದೇ..?

Pinterest LinkedIn Tumblr

ಸರ್ಕಾರಿ ಉದ್ಯೋಗಿಗಳ ಕೆಲಸದ ಸಮಯದಲ್ಲಿ ಬದಲಾವಣೆ ಮಾಡುವ ಬಗ್ಗೆ ಆಲೋಚನೆ ಮಾಡಲಾಗ್ತಿದೆ. ಸದ್ಯ ಸರ್ಕಾರಿ ನೌಕರರು 8 ಗಂಟೆಗಳ ಕಾಲ ಕೆಲಸ ಮಾಡ್ತಾರೆ. ಕೆಲಸ ಮಾಡುವ ಸಮಯದ ಆಧಾರದ ಮೇಲೆ ಸಂಬಳ ನಿರ್ಧಾರವಾಗುತ್ತದೆ. ಇನ್ಮುಂದೆ ಕೆಲಸದ ಸಮಯ 9 ಗಂಟೆಯಾದ್ರೆ ಇದು ಸಂಬಳದ ಮೇಲೆ ಪರಿಣಾಮ ಬೀರುತ್ತಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಗಂಟೆಯ ಸಂಬಳವನ್ನು ದೈನಂದಿನ ಸಂಬಳವನ್ನು 8 ರಿಂದ ಭಾಗಿಸಿ 26 ರಿಂದ ಗುಣಿಸಿ ತಿಂಗಳ ವೇತನವನ್ನು ಲೆಕ್ಕಹಾಕಲಾಗುತ್ತದೆ. ತಿಂಗಳ 30 ದಿನಗಳಲ್ಲಿ 4 ದಿನಗಳನ್ನು ವಿಶ್ರಾಂತಿ ರಜಾ ದಿನವೆಂದು ಪರಿಗಣಿಸಲಾಗುತ್ತದೆ. ಕಾರ್ಮಿಕ ಸಚಿವಾಲಯದ ಪ್ರಾಥಮಿಕ ಕರಡಿನಲ್ಲಿ ಕೆಲವು ಹೊಸ ವಿಷಯಗಳನ್ನು ಹೇಳಲಾಗಿದೆ. ಇದರಲ್ಲಿ ಕೆಲಸದ ಸಮಯವನ್ನು ಹೆಚ್ಚಿಸುವ ಬಗ್ಗೆಯೂ ಉಲ್ಲೇಖವಿದೆ.

ಕಾರ್ಮಿಕ ಸಚಿವಾಲಯ ಮಂಡಿಸಿದ ಕರಡಿನಲ್ಲಿ 9 ಗಂಟೆಗಳಿಗಿಂತ ಹೆಚ್ಚಿನ ಸಮಯ ಕೆಲಸ ಮಾಡಿದ್ರೆ ಅಧಿಕ ಸಂಬಳ ನೀಡುವ ಬಗ್ಗೆ ಯಾವುದೆ ಉಲ್ಲೇಖವಿಲ್ಲ. ಕನಿಷ್ಠ ವೇತನ ಕಾಯ್ದೆ 1950ರ ಪ್ರಕಾರ, 9 ಗಂಟೆಗಿಂತ ಹೆಚ್ಚು ಕೆಲಸ ಮಾಡುವವರಿಗೆ ಸಾಮಾನ್ಯ ವೇತನಕ್ಕಿಂತ ಶೇಕಡಾ 150-200 ರಷ್ಟು ಹೆಚ್ಚಿನ ಸಂಬಳವನ್ನು ನೀಡಬೇಕು. ಆದ್ರೆ ಈ ಕರಡಿನಲ್ಲಿ ರಜೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮಾತ್ರ ಹೆಚ್ಚಿನ ಸಂಬಳ ನೀಡುವ ಬಗ್ಗೆ ಉಲ್ಲೇಖವಿದೆ.

Comments are closed.