
ದುಬೈ : ಯು .ಎ .ಇ ಯಲ್ಲಿ ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಧ್ವನಿ ಪ್ರತಿಷ್ಠಾನ 35ವಸಂತಗಳನ್ನು ಪೂರೈಸಿದ ಸಂತಸದ ಆಚರಣೆಗಾಗಿ “ಧ್ವನಿ ಸಾಂಸ್ಕೃತಿಕ ಉತ್ಸವ -2020 ಯನ್ನು ಫೆಬ್ರವರಿ 14, 2020 ರ ಶುಕ್ರವಾರ ಸಂಜೆ ಎಮಿರೇಟ್ಸ್ ಥಿಯೇಟರ್ ಜುಮೇರಾ ದುಬೈ ಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಉತ್ಸವದ ಅಂಗವಾಗಿ ವಿಶ್ವ ಮಾನ್ಯತೆ ಪಡೆದ ನಾಟಕಗಾರ ಡಾ ಗಿರೀಶ್ ಕಾರ್ನಾಡರ ಕನ್ನಡ ಸಾಮಾಜಿಕ ನಾಟಕ ” ವೆಡ್ಡಿಂಗ್ ಆಲ್ಬಮ್ “ಅನ್ನು ಧ್ವನಿ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ . ಹೊರನಾಡಿನ ಪ್ರಖ್ಯಾತ ರಂಗ ನಿರ್ದೇಶಕ ಪ್ರಕಾಶ್ ರಾವ್ ಪಯ್ಯಾರ್ ಅವರು ನಾಟಕ ವನ್ನು ನಿರ್ದೇಶಿಸಲಿರುವರು.
ಶೀಘ್ರದಲ್ಲೇ ಕಾರ್ಯಕ್ರಮದ ಪಟ್ಟಿ ಹಾಗು ಹೆಚ್ಚಿನ ವಿವರಗಳನ್ನು ನೀಡಲಾಗುತ್ತದೆ. ಯು .ಎ .ಇ ಯ ಕನ್ನಡ ನಾಟಕ ಆಸಕ್ತರು ಕಾರ್ಯಕ್ರಮವನ್ನು ಪ್ರೋತ್ಸಾಹಿಸಿ ಹೆಚ್ಚಿನ ಸಂಖ್ಯೆಯಲ್ಲಿಭಾಗವಹಿಸಬೇಕಾಗಿ ಧ್ವನಿ ಯ ಸದಸ್ಯರು ಹಾಗು ಕಲಾವಿದರು ವಿನಂತಿಸಿ ಕೊಂಡಿದ್ದಾರೆ.
Dhwani Cultural Fest 2020 to be held on Feb 14th 2020

Dhwani Pratishthana one of the well-known Kannada theater and literature enthusiast organization outside Karnataka established in the year 1985 in Mumbai is celebrating 35 successful years. To mark this occasion Dhwani has organized “Dhwani Cultural Fest-2020” on February 14th 2020 Friday evening at Emirates Theater, Jumeirah-Dubai.
Internationally acclaimed play writer Dr. Girish Karnad’s well-known social play “WEDDING ALBUM” will be staged in Kannada by Dhwani Artists as part of the Fest. Play will be directed by renowned stage director Shri Prakash Rao Payyar.
The further details and programs of the Fest will be released soon, Dhwani artists requested UAE’s kannada theater followers to mark this date to make the program grand success.
Comments are closed.