ಕರಾವಳಿ

ಯಕ್ಷಗಾನದಂತಹ ಕಲೆಯನ್ನು ಕಲಿಯಲು ಮಕ್ಕಳಲ್ಲಿ ಆಸಕ್ತಿ ಮೂಡಿಸುವುದರಿಂದ ಮಕ್ಕಳಲ್ಲಿ ಪ್ರತಿಭೆ ಬೆಳೆಯಲು ಸಹಕಾರಿ : ಹರಿಪ್ರಸಾದ್ ಶೆಟ್ಟಿ

Pinterest LinkedIn Tumblr

ಮಂಗಳೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು (ಗ್ರಾ) ವತಿಯಿಂದ, ಗ್ರಾಮಾಂತರ ವ್ಯಾಪ್ತಿಯ ಮಂಗಳೂರು ತಾಲೂಕು ಮಟ್ಟದ ಕಲಾಶ್ರೀ ಕಾರ್ಯಕ್ರಮ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಇಲ್ಲಿ ಜರುಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೂಡುಶೆಡ್ಡೆ ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ನೆರವೇರಿಸಿ ಮಾತನಾಡುತ್ತಾ ಮಕ್ಕಳಿಗೆ ವಿದ್ಯೆಯೊಂದಿಗೆ, ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಬೇಕು ಮತ್ತು ಯಕ್ಷಗಾನದಂತಹ ಕಲೆಯನ್ನು ಕಲಿಯಲು ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ಇಂತಹ ಕಾರ್ಯಕ್ರಮದಿಂದ ಮಕ್ಕಳ ಪ್ರತಿಭೆ ಬೆಳೆಯಲು ಪೂರಕವಾಗಿದೆ ಎಂದು ಶುಭ ಹಾರೈಸಿದರು.

ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಪ್ರತಿಯೊಂದು ಮಗುವಿಗೂ ತನ್ನದೇ ಆದ ಪ್ರತಿಭೆ ಇದೆ, ನಿಮ್ಮೆಲ್ಲರ ಪ್ರತಿಭೆ ಗ್ರಾಮ, ತಾಲೂಕು, ರಾಜ್ಯ ಮಟ್ಟದಲ್ಲಿ ಬೆಳಗಿ ಹೆತ್ತವರಿಗೆ ಹೆಮ್ಮೆ ತರುವುಂತಾಗಲೀ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳ ಜ್ಯೋತಿ ಸಮಗ್ರ ಶಾಲೆಯ ಆಡಳಿತ ಸಂಚಾಲಕ ಗಣೇಶ್ ಭಟ್ ವಹಿಸಿದ್ದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲ ಸಿ.ಕೆ. ಪ್ರಾಸ್ತವಿಕ ಮಾತನಾಡುತ್ತ ತಾಲೂಕು ಮಟ್ಟದ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಶಿಬಿರವನ್ನು ಹಮ್ಮಿಕೊಂಡಿದ್ದು ಇಲ್ಲಿ ವಿಜೇತರಾದವರು ಜಿಲ್ಲಾ ಮಟ್ಟ ಮತ್ತು ರಾಜ್ಯ ಮಟ್ಟದಲ್ಲಿ ಪಾಲುಗೊಳ್ಳಲು ಅವಕಾಶವಿದೆ. ರಾಜ್ಯ ಬಾಲಭವನ ಸೊಸೈಟಿ ಮುಖಾಂತರ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಸ್ಪರ್ಧಾತ್ಮಕ ಚಟುವಟಿಕೆಗಳ ತೀರ್ಪುಗಾರರಾಗಿ ಪ್ರಮೋದ್ ಉಳ್ಳಾಲ್, ಕುಶಾಲಪ್ಪ, ಸವಿತ ಶೆಟ್ಟಿ, ವಾಸು, ದಿನೇಶ್ ವಿಶ್ವಕರ್ಮ, ರಾಘವೇಂದ್ರ, ಶಾಲಿನಿ ಪಾಲ್ಗೊಂಡಿದರು. ಸ್ಪರ್ಧಾತ್ಮಕ ಚಟುವಟಿಕೆಗಳಾದ ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ ಪ್ರದರ್ಶನ ಕಲೆ, ವಿಜ್ಞಾನದಲ್ಲಿ ನೂತನ ಆವಿಷ್ಸಾರ ಸ್ಪರ್ಧೆಯಲ್ಲಿ ಒಟ್ಟು 75 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಮೇಲ್ವಿಚಾರಕಿ ಭಾರತಿ ಕೆ, ಉಷಾ ಡಿ ಉಪಸ್ಥಿತರಿದ್ದರು. ಅಶ್ವಿನಿ ಎಂ.ಕೆ, ಕಾರ್ಯಕ್ರಮವನ್ನು ನಿರೂಪಿಸಿದರು. ಹಿರಿಯ ಮೇಲ್ವಿಚಾರಕಿ ಶೀಲಾವತಿ ವಂದಿಸಿದರು.

Comments are closed.