ಕರ್ನಾಟಕ

ವಾಟ್ಸ್​ಆ್ಯಪ್​ನಲ್ಲಿ ಫಿಂಗರ್​ ಪ್ರಿಂಟ್​ ಲಾಕ್​ ಪೀಚರ್​

Pinterest LinkedIn Tumblr


ಜನಪ್ರಿಯ ಮೆಸೆಜಿಂಗ್​ ಆ್ಯಪ್​​ ‘ವಾಟ್ಸ್​ಆ್ಯಪ್‘​ ಬಳಕೆದಾರರ ಸುರಕ್ಷತೆಗಾಗಿ ಈಗಾಗಲೇ ಹಲವು ಫೀಚರ್​ಗಳನ್ನು ಬಿಡುಗಡೆ ಮಾಡಿದೆ. ಇದೀಗ ‘ಫಿಂಗರ್​ ಪ್ರಿಂಟ್‘​​ ಫೀಚರ್​ ಅನ್ನು ಪರಿಚಯ ಮಾಡುವ ಮೂಲಕ ಬಳಕೆದಾರರಿಗೆ ಮತ್ತಷ್ಟು ರಕ್ಷಣೆ ಕೊಡಲು ಮುಂದಾಗಿದೆ.

ವಾಟ್ಸ್​ಆ್ಯಪ್​​​ ಬಿಡುಗಡೆ ಮಾಡಿದ ‘ಫಿಂಗರ್​ ಪ್ರಿಂಟ್‘​ ಫೀಚರ್​ ಆ್ಯಂಡ್ರಾಯ್ಡ್​ ಮತ್ತು ಐಒಎಸ್​ ಸ್ಮಾರ್ಟ್​ಫೋನ್​ಗಳಿಗೆ ಲಭ್ಯವಿದೆ. ಈ ಕಾರಣಕ್ಕಾಗಿ ವಾಟ್ಸ್​ಆ್ಯಪ್​ ತನ್ನ ಬೀಟಾ ಪ್ರೊಗ್ರಾಮ್​​ ಅನ್ನು ಅಭಿವೃದ್ಧಿ ಪಡಿಸಿದೆ. ಆ್ಯಂಡ್ರಾಯ್ಡ್​ ಬಳಕೆದಾರರು ವಾಟ್ಸ್​ಆ್ಯಪ್​ 2.19.221ಗೆ ಅಪ್ಡೇಟ್​ ಮಾಡುವ ಮೂಲಕ ನೂತನ ‘ಫಿಂಗರ್​ ಪ್ರಿಂಟ್​‘ ಫೀಚರ್​ ಸಿಗಲಿದೆ.

ಹೈ ಎಂಡ್​ ಮಾದರಿಯ ಆಪಲ್​ ಐಫೋನ್​ಗಳು ಟಚ್​ ಈಡಿ, ಫೇಸ್​ ಐಡಿ ಸೇರಿದಂತೆ ಕೆಲವು ಹೊಸ ಫೀಚರ್ಸ್​ಗಳನ್ನು ಹೊಂದಿವೆ. ಹಾಗೆಯೇ, ಇನ್ನಷ್ಟು ಫೀಚರ್​ಗಳು ವಾಟ್ಸ್​ಆ್ಯಪ್​ ಬೇಟಾ ವರ್ಷನ್​ನಲ್ಲಿ ಲಭ್ಯವಿದೆ. ಇದರೊಂದಿಗೆ ಆ್ಯಂಡ್ರಾಯ್ಡ್​ ಬಳಕೆದಾರರಿಗೂ ‘ಫಿಂಗರ್​​ಪ್ರಿಂಟ್‘​ ಲಾಕ್​​ ಫೀಚರ್​ ಆಯ್ಕೆಯನ್ನು ನೀಡುತ್ತಿದೆ.

ಈ ನೂತನ ಫೀಚರ್​ ವಿದೇಶಿಗರಿಗೆ ಲಭ್ಯವಾಗಿದೆ. ಆದರೆ ಭಾರತದಲ್ಲಿ ವಾಟ್ಸ್​ಆ್ಯಪ್​ ಬಳಕೆದಾರಿಗೆ ‘ಫಿಂಗರ್​ ಪ್ರಿಂಟ್​​‘ ಫೀಚರ್​​ ಸದ್ಯದಲ್ಲೇ ದೊರಕಲಿದೆ.

ಫಿಂಗರ್​ ಪ್ರಿಂಟ್​ ಲಾಕ್​ ಪೀಚರ್​:

ವಾಟ್ಸ್​ಆ್ಯಪ್​ 2.19.221 ಅಪ್ಡೇಟ್​ ವರ್ಷನ್​ ಬಳಕೆದಾರರಿಗೆ ‘ಫಿಂಗರ್​ಪ್ರಿಂಟ್‘​ ಲಾಕ್​​ ಫೀಚರ್​ ಲಭ್ಯವಾಗಲಿದೆ.

1. ಮೊದಲಿಗೆ ವಾಟ್ಸ್​ಆ್ಯಪ್ 2.19.221ಗೆ ಅಪ್ಡೇಟ್​ ಮಾಡಿಕೊಳ್ಳಿ.

​2. ನಂತರ ವಾಟ್ಸ್​ಆ್ಯಪ್​ ತೆರೆದು ಸೆಟ್ಟಿಂಗ್ ಆಯ್ಕೆಯ ಮೇಲೆ ಕ್ಲಿಕ್​ ಮಾಡಿ​.

3. ಅಕೌಂಟ್​ ಸೆಕ್ಷನ್​ನಲ್ಲಿರುವ ಪ್ರೈವಸಿ ಸೆಟ್ಟಿಂಗ್ಸ್​​ ಆಯ್ಕೆಯನ್ನು ತೆರೆಯಿರಿ.

4. ನಂತರ ಕಾಣಿಸಿಕೊಳ್ಳುವ ‘ಫಿಂಗರ್​ ಪ್ರಿಂಟ್‘​ ಆಯ್ಕೆಯನ್ನು ವಾಟ್ಸ್​ಆ್ಯಪ್​ಗೆ ಅಳವಡಿಸಿಕೊಳ್ಳಿ.

Comments are closed.