
ಬಿಎಸ್ವೈ ವಿರುದ್ಧ ದ್ವೇಷ ರಾಜಕಾರಣದ ಆರೋಪ ಮಾಡಿದ ಬೆನ್ನಲ್ಲೇ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ ಬಿಜೆಪಿ ನಾಟಕ ಮಂಡಳಿಗೆ ಕಾಮಿಡಿಯನ್ ಅಗತ್ಯವಿತ್ತು ಅದಕ್ಕಾಗಿ ನಳಿನ್ ಕುಮಾರ್ ಕಟೀಲ್ ರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಸಿದ್ಧರಾಮಯ್ಯ, ಕಟೀಲ್ಗೆ ಏನು ಗೊತ್ತಿಲ್ಲ. ಬಿಜೆಪಿಯ ನಾಟಕ ಮಂಡಳಿಯಲ್ಲಿ ಕಟೀಲ್ ಕಾಮೆಡಿಯನ್ ಇದ್ದಂತೆ. ಬಿಜೆಪಿಯವರೇ ಅವರನ್ನು ಸೀರಿಯಸ್ ಆಗಿ ತಗೋಳ್ತಿಲ್ಲ. ಅದಕ್ಕಾಗಿಯೇ ನಳಿನ್ ಕುಮಾರ್ ಈ ರೀತಿಯಲ್ಲ ಮಾತನಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ವ್ಯಂಗ್ಯವಾಡಿದ್ದಾರೆ.
ಕೇವಲ ವಾಗ್ದಾಳಿ ಮಾತ್ರವಲ್ಲದೇ ಟ್ವೀಟರ್ ನಲ್ಲೂ ನಳಿನ್ ಕುಮಾರ್ ಕಾಲೆಳೆದ ಮಾಜಿ ಸಿಎಂ ಸಿದ್ಧರಾಮಯ್ಯ, ನನಗೆ ಐಟಿ ಮತ್ತು ಇಡಿ ಮೇಲೆ ಅಷ್ಟೊಂದು ಹಿಡಿತ ಇರೋದು ನಿಜವಾದರೇ ನಿಮ್ಮ 56 ಇಂಚಿನ ಎದೆಯ ಪ್ರಧಾನಿ ಯಾಕೆ ಬೇಕು ರಿಸೈನ್ ಮಾಡಿ ಹೋಗಲು ಹೇಳಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಿನ್ನೆ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದ ನಳಿನ್ ಕುಮಾರ್ ಕಟೀಲ್, ಡಿ.ಕೆ.ಶಿವಕುಮಾರ್ ಅರೇಸ್ಟ್ ಆಗೋದಿಕ್ಕೆ ಸಿದ್ಧರಾಮಯ್ಯನವರೇ ಕಾರಣ ಎಂದು ಆರೋಪಿಸಿದ್ದರು. ಅಲ್ಲದೇ ಇಂದೂ ಕೂಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಕಟೀಲ್, ಕಾಂಗ್ರೆಸ್ನಲ್ಲಿ ರಾವಣರೇ ಹುಟ್ಟುತ್ತಾರೆ ಎಂದಿದ್ದಾರೆ.
Comments are closed.