ಕರ್ನಾಟಕ

ತಿಂದ ತಿಂಡಿಗೆ ಬಿಲ್​ ಕೊಡದ ಪೇದೆ: ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ

Pinterest LinkedIn Tumblr


ಹುಬ್ಬಳ್ಳಿ: ತಿಂದ ತಿಂಡಿಗೆ ಬಿಲ್​ ಕೊಡದೇ ಪೊಲೀಸ್​​ ಪೇದೆಯೊಬ್ಬ ಗೂಂಡಾ ವರ್ತನೆ ತೋರಿದ ಆರೋಪ ಕೇಳಿಬಂದಿದ್ದು, ಪೇದೆಯ ವರ್ತನೆಗೆ ಬೇಸತ್ತು ಹೋಟೆಲ್​ ಸಿಬ್ಬಂದಿ ಠಾಣೆಯ ಮೆಟ್ಟಿಲೇರಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮೌಲಾಲಿ ಬೀಭಕ್ಕನವರ ಎಂಬ ಪೇದೆ ಗೋಕುಲ್ ಹೆಸರಿನ ಹುಬ್ಬಳ್ಳಿ ಹೋಟೆಲ್​ನಲ್ಲಿ ತಿಂಡಿ ಸವಿದಿದ್ದಾನೆ. ಬಳಿಕ ಬಿಲ್​ ಕೇಳಿದ್ದಕ್ಕೆ ಹೋಟೆಲ್​ ಸಿಬ್ಬಂದಿಗೆ ಗದರಿಸಿ, ಆಮೇಲೆ ಬಂದು ಬಿಲ್​ ಕೊಡುತ್ತೇನೆ ಎಂದು ಹೇಳಿ, ನಕಲಿ ಹೆಸರು ಹಾಗೂ ಫೋನ್​ ನಂಬರ್​ ನೀಡಿ ಹೋಟೆಲ್​ನಿಂದ ಕಾಲ್ಕಿತ್ತಿದ್ದಾನೆ ಎಂದು ಆರೋಪ ವ್ಯಕ್ತವಾಗಿದೆ.

ಗೋಕುಲ ರಸ್ತೆ ಪೊಲೀಸ್ ಠಾಣೆಯ ಪೇದೆಯಿಂದ ಹೇಳಿ, ಕೇವಲ 305 ರೂ. ಬಿಲ್ ಪಾವತಿಸಲು ಪೊಲೀಸ್​ ಪೇದೆ ರಂಪಾಟ ಮಾಡಿದ್ದಾನೆ. ಅಲ್ಲದೆ, ಈತನ ಮೇಲೆ ಇದೇ ರೀತಿಯಾದ ಇಪ್ಪತ್ತಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಹೇಳಲಾಗುತ್ತಿದ್ದು, ಪೊಲೀಸಪ್ಪನ ವಿರುದ್ಧವೇ ಗೋಕುಲ ಹೋಟೆಲ್​ ಸಿಬ್ಬಂದಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. (ದಿಗ್ವಿಜಯ ನ್ಯೂಸ್​)

Comments are closed.