
ಇಸ್ಲಾಮಾಬಾದ್: ನಮ್ಮ ಬಳಿ 125-250 ಗ್ರಾಂ ತೂಕದ ಅಣುಬಾಂಬ್ಗಳಿವೆ. ಇವನ್ನು ಪ್ರಯೋಗಿಸುವ ಮೂಲಕ ಭಾರತದ ನಿರ್ದಿಷ್ಟ ನಗರದಲ್ಲಿ ಇಚ್ಛಿಸಿದಷ್ಟು ಪ್ರಮಾಣದ ಹಾನಿಯನ್ನುಂಟು ಮಾಡಬಲ್ಲೆವು ಎಂದು ಪಾಕ್ ರೈಲ್ವೆ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿದ್ದಾರೆ.
ಪಾಕ್ನ ಪಂಜಾಬ್ ಪ್ರಾಂತ್ಯದ ನಾನಾಖಾನಾ ಸಾಹೀಬ್ನಲ್ಲಿ ನಿರ್ಮಿಸಲಾಗುತ್ತಿರುವ ರೈಲ್ವೆ ನಿಲ್ದಾಣದ ಕಾಮಗಾರಿ ಪರಿಶೀಲಿಸಿ ಮಾತನಾಡಿದರು. ಪಾಕ್ ಮೇಲೆ ದಾಳಿ ಮಾಡುವ ದುಸ್ಸಾಹಸ ಮಾಡಿದರೆ, ಇಂತಹ ಅನಾಹುತಗಳನ್ನು ಎದುರಿಸುವ ಅನಿವಾರ್ಯತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಿಲುಕಿಕೊಳ್ಳುತ್ತಾರೆ ಎಂದರು.
ಕೆಲವು ದಿನಗಳ ಹಿಂದಷ್ಟೇ ಶೇಖ್ ರಶೀದ್ ಅಹ್ಮದ್ ಅಕ್ಟೋಬರ್ ಅಥವಾ ಡಿಸೆಂಬರ್ನಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಪೂರ್ಣ ಪ್ರಮಾಣದ ಯುದ್ಧವಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಎರಡು ರಾಷ್ಟ್ರಗಳ ನಡುವೆ ನಡೆಯಲಿರುವ ಕೊನೆಯ ಯುದ್ಧ ಇದಾಗಿರಲಿದೆ ಎಂದು ಹೇಳಿದ್ದರು.
ಭಾರತ ವಿರುದ್ಧ ಯುದ್ಧದ ಮಾತನಾಡುವುದರಿಂದಲೇ ಸಚಿವನಾಗಿದ್ದೇನೆ
ಭಾರತದ ವಿರುದ್ಧ ಯುದ್ಧದ ಮಾತನಾಡುತ್ತಿರುವುದರಿಂದಲೇ ತಮ್ಮ ಮೇಲೆ ಪಾಕಿಸ್ತಾನದ ಕೃಪಕಟಾಕ್ಷ ಬಿದ್ದಿದೆ. ಇದರಿಂದಾಗಿ ತಾವು ಸಚಿವನಾಗಿ ಮುಂದುವರಿಯಲು ಸಾಧ್ಯವಾಗಿದೆ ಎಂದು ಹೇಳುವ ಮೂಲಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ಗೆ ಶೇಖ್ ರಶೀದ್ ಅಹ್ಮದ್ ತೀವ್ರ ಮುಜುಗರ ಉಂಟು ಮಾಡಿದ್ದಾರೆ.
Comments are closed.