ಕರ್ನಾಟಕ

ಒಂದೇ ಬೈಕ್ ನಲ್ಲಿ 9 ಜೀವಗಳ ಪ್ರಯಾಣ

Pinterest LinkedIn Tumblr


ಬೈಕ್ ಅಲ್ಲಿ ಸಾಮಾನ್ಯವಾಗಿ ಎಷ್ಟು ಜನ ಪ್ರಯಾಣಿಸಬಹುದು? ಒಂದು ತಪ್ಪಿದ್ರೆ ಎರಡು. ಅದಕ್ಕೂ ಹೆಚ್ಚಾಗಿ ಮಕ್ಕಳು ಮರಿ ಸೇರಿ ನಾಲ್ಕು. ಆದರೆ ಇಲ್ಲೊಬ್ಬ ಭೂಪ ತನ್ನ ಬೈಕ್ ನಲ್ಲಿ ಮಾಡಿದ ಕಾರುಬಾರು ನೋಡಿದರೆ ಅಚ್ಚರಿ ಪಡ್ತೀರ.

ಇಲ್ಲೊಬ್ಬ ವ್ಯಕ್ತಿ ತನ್ನ ಬೈಕ್ ನಲ್ಲಿ ಏಳು ಮಂದಿಯನ್ನು ಕೂರಿಸಿಕೊಂಡು ಹೋಗಿದ್ದಾನೆ.! ಹೌದು ರಿಷಾದ್ ಕೂಪರ್ ಎನ್ನುವ ವ್ಯಕ್ತಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನ್ನ ಬೈಕ್ ಅಲ್ಲಿ ಈ ವ್ಯಕ್ತಿ ಏಳು ಮಂದಿಯನ್ನು ಕೂರಿಸಿಕೊಂಡು ಹೋಗುವುದರ ಜೊತೆಗೆ ತನ್ನ ಮನೆಯ ಎರಡು ನಾಯಿಗಳನ್ನೂ ನಡುವೆ ಕೂರಿಸಿಕೊಂಡು ಹೋಗಿದ್ದಾನೆ.

ಬೈಕ್ ನಲ್ಲಿ ಎರಡು ನಾಯಿಗಳನ್ನು ಸೇರಿಸಿ ಒಟ್ಟು ಒಂಬತ್ತು ಜೀವಗಳಿದ್ದು, ಹಿಂಭಾಗದಲ್ಲಿ ವ್ಯಕ್ತಿಯ ಹೆಂಡತಿ ಜೊತೆಗೆ ಮೂರು ಮಕ್ಕಳು ಹಾಗೂ ಮುಂಭಾಗದಲ್ಲಿ ಎರಡು ಮಕ್ಕಳು ನಡುವೆ ಕೂತ ಎರಡು ನಾಯಿ ಮರಿಗಳು.! ಇಷ್ಟು ಮಾತ್ರವಲ್ಲದೆ ಮನೆಯ ದಿನಾಸಿ ಸಾಮಾನುಗಳನ್ನು ಹೊತ್ತು ಈತ ಬೈಕ್ ಅಲ್ಲಿ ಹಾಯಾಗಿ ಪಯಣ ಬೆಳೆಸಿದ್ದಾನೆ.

Comments are closed.