
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾದ ಬಳಿಕ,ತೀವ್ರ ಹತಾಶೆಗೊಳಗಾಗಿರುವ ಪಾಕಿಸ್ತಾನ, ಭಾರತದ ಮೇಲೆ ಮತ್ತೊಂದು ಪುಲ್ವಾಮ ಮಾದರಿ ದಾಳಿ ಮಾಡೋ ಬೆದರಿಕೆ ಒಡ್ಡುವ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದೆ.
ಹೌದು ಕಾಶ್ಮೀರ ವಿಚಾರ ಸಂಬಂಧ ಆಯೋಜನೆಗೊಂಡಿದ್ದ ಪಾಕ್ ಸಂಸತ್ತಿನ ತುರ್ತು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಇಮ್ರಾನ್, ಭಾರತದ ಈ ನಡೆಯಿಂದಾಗಿ ಯುದ್ಧ ವಾತಾವರಣ ಸೃಷ್ಟಿಯಾಗಿದ್ದು, ಇದರಿಂದ ಪುಲ್ವಾಮ ಮಾದರಿ ದಾಳಿ ಸಂಭವಿಸಿದ್ರೂ ಅಚ್ಚರಿಯಿಲ್ಲ ಎಂದು ಹೇಳಿದ್ದಾರೆ.
ಇನ್ನು ನಾವು ನಮ್ಮ ಎಲ್ಲಾ ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವುದಕ್ಕೆ ಬಯಸಿದ್ದು, ಭಾರತ ಇದಕ್ಕೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ನಾನು ಭಾರತದ ಪ್ರಧಾನಿಯೊಂದಿಗೆ ನಾನು ಮಾತುಕತೆ ನಡೆಸಿದಾಗ ಕಾಶ್ಮೀರದಲ್ಲಿ ಉಪಟಳ ನೀಡುತ್ತಿರುವ ಭಯೋತ್ಪಾದಕರನ್ನು ನಿಯಂತ್ರಿಸುವ ಬಗ್ಗೆ ಮಾತು ಕೊಟ್ಟಿದ್ದೆ. ಆದರೂ ಕಾಶ್ಮೀರ್ದಲ್ಲಿ ಪ್ರಜಾಪ್ರಭುತ್ವಕ್ಕೆ ವಿರುದ್ಧ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಪುಲ್ವಾಮ ಮಾದರಿ ದಾಳಿ ಮತ್ತೊಂದು ಬಾರಿ ನಡೆದರೆ ನಮ್ಮನ್ನು ದೂರಬಾರದು ಎಂದು ಇಮ್ರಾನ್ ಹೇಳಿದ್ದು ಪರೋಕ್ಷ ಎಚ್ಚರಿಕೆ ನೀಡುವಂತೆ ಮಾತನಾಡಿದ್ದಾರೆ.
ಎರಡು ಅಣ್ವಸ್ತ್ರ ರಾಷ್ಟ್ರಗಳ ನಡುವಿನ ತಿಕ್ಕಾಟದಿಂದ ಕೇವಲ ಭಾರತ- ಪಾಕ್ ಮಾತ್ರವಲ್ಲ, ಇಡೀ ಜಗತ್ತು ಇದರಿಂದ ತೊಂದರೆ ಅನುಭವಿಸುತ್ತದೆ ಎಂದಿದ್ದಾರೆ.ಇದು ನಮ್ಮ ಅಣ್ವಸ್ತ್ರ ಬೆದರಿಕೆಯಲ್ಲ. ನಮ್ಮ ಮೇಲೆ ದಾಳಿ ಮಾಡಿದರೆ ನಾವು ಪ್ರತಿದಾಳಿ ಮಾಡುತ್ತೇವೆ. ಇದರಿಂದ ಯುದ್ಧ ಸನ್ನಿವೇಶ ಸೃಷ್ಟಿಯಾಗುತ್ತದೆ. ಯುದ್ಧದಲ್ಲಿ ಯಾರೂ ಗೆಲ್ಲುವುದಿಲ್ಲ. ಯುದ್ಧ ನಡೆದರೆ ಇಡೀ ಪ್ರಪಂಚಕ್ಕೆ ತೊಂದರೆಯಾಗುತ್ತದೆ ಎಂದು ಪರೋಕ್ಷವಾಗಿ ಯುದ್ಧದ ಮುನ್ಸೂಚನೆ ನೀಡಿದ್ದಾರೆ.
Comments are closed.