
ಬೆಂಗಳೂರು: ಜೆಡಿಎಸ್ ಪಕ್ಷ ಬಹಳ ಬಿಕ್ಕಟ್ಟಿನಲ್ಲಿದೆ ಅಧಿಕಾರದಿಂದ ಹೊರಬಂದ ಮೇಲೆ ಎಲ್ಲವನ್ನೂ ಗಮನಿಸಿದ್ದೇನೆ ಎಂದು ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಬುಧವಾರ ಹೇಳಿದರು.
ನಗರದದಲ್ಲಿಂದು ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರಕ್ಕೆ ಸಪೋರ್ಟ್ ಮಾಡಿದ್ದೆವು, ಸಪೋರ್ಟ್ ಮಾಡಿದ್ದನ್ನ ಕಾರ್ಯಕರ್ತರು ವಿರೋಧಿಸಿದ್ದರು ಹೌದು, ನಾನು ತಪ್ಪು ಮಾಡಿದ್ದೇನೆ ಎಂದು ಅವರು ಸಮ್ಮಿಶ್ರ ಸರ್ಕಾರದ ಬೆಂಬಲದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡರು.
ಅಲ್ಲದೇ ಯಾರು ಹೋದರು, ಅವರ ಬಗ್ಗೆ ನಾನು ಮಾತನಾಡಲ್ಲ, ಹೋಗಿರುವ ಮೂವರ ಬಗ್ಗೆಯೂ ಚಕಾರವೆತ್ತಲ್ಲ, ಆ ಕ್ಷೇತ್ರದಲ್ಲಿ ಬೇರೆ ಅಭ್ಯರ್ಥಿಗಳನ್ನ ಹಾಕುತ್ತೇವೆ, ಆಗಸ್ಟ್, ಸೆಪ್ಟಂಬರ್ನಲ್ಲಿ ಸಮಾವೇಶ ಆಯೋಜನೆ ಮಾಡುತ್ತೇವೆ ಎಂದರು.
ಇನ್ನು ದಲಿತ, ಎಸ್ಟಿ, ಒಬಿಸಿ, ಮುಸ್ಲಿಂ ಸಮಾವೇಶ ಆಯೋಜನೆ ಮಾಡುತ್ತೇವೆ. ಪ್ರತ್ಯೇಕವಾಗಿ ರೈತರ ಸಮಾವೇಶ ಕೂಡ ಆಯೋಜನೆ ಮಾಡಲಾಗುತ್ತದೆ ಆ ಸಮಾವೇಶಕ್ಕೆ ಶೀಘ್ರದಲ್ಲೇ ದಿನಾಂಕ ನಿಗದಿ ಸಹ ಮಾಡುತ್ತೇವೆ ಎಂದು ಜೆಡಿಎಸ್ ಪಕ್ಷದ ವರಿಷ್ಠರು ಸ್ಪಷ್ಟಪಡಿಸಿದರು.
ಸದ್ಯ ಪದಾಧಿಕಾರಿಗಳ ಬದಲಾವಣೆಯನ್ನೂ ಮಾಡುತ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಹೇಳಿದರು.
Comments are closed.