
ಬೆಂಗಳೂರು: ರೆಸಾರ್ಟ್‌ನಲ್ಲಿರುವ ಕೆಲ ಕಾಂಗ್ರೆಸ್ ನಾಯಕರಿಗೆ ಊರಿಗೆ ಹೋಗುವ ಅವಶ್ಯಕತೆ ಇದ್ದು, ಅಂಥವರನ್ನ ಹೋಗಲು ಬಿಡಿ, ಹೋಗುವವರು ಯಾವಾಗಾದರೂ ಹೋಗುತ್ತಾರೆ ಎಂದು ನಾಯಕರ ವಿರುದ್ಧ ಪಕ್ಷದ ಕೆಲ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಟ್ಟು ಹೋಗುವವರನ್ನ ತಡೆಯಲು ಸಾಧ್ಯವಿಲ್ಲ. ಸೋಮವಾರ ವಿಶ್ವಾಸಮತಯಾಚನೆ ಮಾಡಬೇಕು. ಆಗಲೂ ಸರ್ಕಾರ ಉಳಿಯುವುದು ಡೌಟು. ಅನವಶ್ಯಕವಾಗಿ ರೆಸಾರ್ಟ್‌ನಲ್ಲಿ ಕೂಡಿಹಾಕುವುದು ಬೇಡ. ಹೋಗುವವರು ಯಾವಾಗಿದ್ದರೂ ಹೋಗುತ್ತಾರೆ. ಹೋಗುವವರನ್ನ ತಡೆಯಲು ಸಾಧ್ಯವಿದೆಯೇ? 10 ದಿನಗಳಿಂದ ನಾವು ರೆಸಾರ್ಟ್‌ನಲ್ಲಿಯೇ ಇದ್ದೇವೆ. ಮನೆ, ಮಠ, ಕ್ಷೇತ್ರ ಬಿಟ್ಟು ಇಲ್ಲಿದ್ದರೆ ಜನ ಏನಂದಾರು..? ಊರಿಗೆ ತೆರಳಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.
ಅಲ್ಲದೇ, ನಾವ್ಯಾರು ಪಕ್ಷ ಬಿಟ್ಟು ಓಡಿಹೋಗುವವರಲ್ಲ ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಆದ್ದರಿಂದ ಅವಶ್ಯಕತೆ ಇದ್ದವರು ಹೋಗಿ ಬನ್ನಿ ಎಂದು ಶಾಸಕರಿಗೆ ಒಪ್ಪಿಗೆ ನೀಡಿದ್ದು, ಕೆಲವು ಶಾಸಕರು ಊರುಗಳಿಗೆ ತೆರಳಿದ್ದಾರೆ. ಸದ್ಯ ಯಶವಂತಪುರದ ತಾಜ್ ವೀವಾಂತ್‌ನಲ್ಲಿ 24 ಮಂದಿ ಶಾಸಕರು ವಾಸ್ಯವ್ಯ ಹೂಡಿದ್ದಾರೆ.
Comments are closed.