
ಬೆಂಗಳೂರು: ನಮ್ಮ ಎಲ್ಲಾ ಶಾಸಕರು ಇವತ್ತು ರೇಸಾರ್ಟ್ಗೆ ಬರಬೇಕು ಇವತ್ತು ರಾತ್ರಿ ಜೊತೆಯಲ್ಲಿ ಉಳಿದುಕೊಳ್ಳಬೇಕು ಅಂತಾ ಹೇಳಿದ್ದಾರೆ. ಹೀಗಾಗಿ ಕಾರಜೋಳ, ನಾನು, ಮಾಧುಸ್ವಾಮಿ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.
ನಗರದ ತಮ್ಮ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸದಲ್ಲಿ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಆರುವರೆ ಕೋಟಿ ಕನ್ನಡಿಗರು ಆಶೀರ್ವಾದ ಮಾಡಿದ್ದಾರೆ ಕನ್ನಡಿಗರಿಗೆ ಈ ಸರ್ಕಾರ ಬದಲಾಗಬೇಕು ಬಿಜೆಪಿ ಅಧಿಕಾರಕ್ಕೆ ಬರಬೇಕು ಅನ್ನೋ ಆಸೆ ಇದೆ ಅವರ ಆಸೆಯಂತೆ ನಾವು ಅಧಿಕಾರಕ್ಕೆ ಬರುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಅಧಿಕಾರಕ್ಕೆ ಬರುತ್ತೆ, ಕುಮಾರಸ್ವಾಮಿ ಗುರುವಾರ ಬಹುಮತ ಸಾಬೀತುಪಡಿಸುವುದಿಲ್ಲ, ಇನ್ನೂ ನಾಲ್ಕೈದು ದಿನಗಳ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಎಸ್ ಯಡಿಯೂರಪ್ಪ ಅವರು ತಿಳಿಸಿದರು.
Comments are closed.