ಹಿಂದಿನ ಕಾಲದಲ್ಲಿ ಜನರು ಒಂದು ಒತ್ತಿನ ಊಟಕ್ಕೂ ಕೂಡ ತುಂಬಾ ಕಷ್ಟ ಪಡುತ್ತಿದ್ದರು ಆದರೂ ಕೂಡ ಜನರು ಒಂದೇ ಒತ್ತು ಊಟ ಮಾಡಿದರು ಕೂಡ ಆರೋಗ್ಯವಾದ ಪೌಷ್ಟಿಕ ಆಹಾರವನ್ನೇ ಸೇವನೆ ಮಾಡುತ್ತಿದ್ದರು ಒಂದು ಒತ್ತು ಮಾಡಿದ ಊಟ ಅವರ ಆ ದಿನಕ್ಕೆ ಬೇಕಾದ ಶಕ್ತಿಯನ್ನೆಲ್ಲ ನೀಡುತ್ತಿತ್ತು ಅಷ್ಟೇ ಶಕ್ತಿ ವಂತರಾಗಿ ಇದ್ದರು. ಆದರೆ ಇಂದಿನ ಪರಿಸ್ಥಿತಿ ಹೇಗಿದೆ ಎಂದರೆ ಹಸಿವು ಅದಗೆಲ್ಲ ತಿನ್ನಲು ಆಹಾರ ಇದ್ದರು ಕೂಡ ಅವರ ಆಹಾರ ಮಾತ್ರ ಪೌಷ್ಟಿಕವಾಗಿ ಇರುವುದಿಲ್ಲ ಹಾಗೂ ಇಂದಿನ ಜನರಿಗೆ ಅಷ್ಟು ಶಕ್ತಿಯು ಇಲ್ಲ ಅವರ ಆರೋಗ್ಯವು ಕೂಡ ಸರಿ ಇರುವುದಿಲ್ಲ ಅದು ಏಕೆಂದರೆ ಅವರು ಸೇವಿಸುವ ಆಹಾರದಿಂದ.
ಹೌದು ಇತ್ತೀಚೆಗೆ ಜನರು ಎಷ್ಟೇ ದುಡಿದರು ಕೂಡ ಅವರ ಆಹಾರ ಮಾತ್ರ ಪೌಷ್ಟಿಕ ಅಂಶಗಳಿಂದ ಕೊಡಿರುವುದಿಲ್ಲ ಬೆಳಿಗ್ಗೆ ಎದ್ದ ತಕ್ಷಣ ಮತ್ತು ಸಂಜೆಯ ಸಮಯದಲ್ಲಿ ಟೀ ಅಥವಾ ಕಾಫಿ ಜೊತೆಯಾಗಿ ಬ್ರೆಡ್ ತಿನ್ನುವ ಅಭ್ಯಾಸವನ್ನ ರೂಢಿಸಿ ಕೊಂಡಿರುತ್ತಾರೆ. ಇನ್ನು ಕೆಲವರಂತೂ ಬೆಳಗಿನ ಉಪಹಾರಕ್ಕೆ ಬ್ರೆಡ್ ಜೊತೆಗೆ ಜಾಮ್ ಹಾಕಿಕೊಂಡು ತಿನ್ನುತ್ತಾರೆ. ಆದರೆ ಬ್ರೆಡ್ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು, ಎಷ್ಟು ಕೆಟ್ಟದು ಎಂಬುದು ನಮಗೆ ತಿಳಿದೇ ಇರುವುದಿಲ್ಲ ಆದರೆ ಮೊದಲು ಅದರ ಬಗ್ಗೆ ತಿಳಿಯೋಣ ಬನ್ನಿ.
ಬ್ರೆಡ್ ತಿನ್ನಲು ತುಂಬಾ ರುಚಿಯಾಗಿ ಇರುತ್ತದೆ. ಮತ್ತು ಅದು ನಮ್ಮ ಹಲವು ಆಹಾರ ಪದಾರ್ಥಗಳಲ್ಲಿ ಒಂದಾಗಿ ಬೆರೆತು ಹೋಗಿ ಬಿಟ್ಟಿದೆ ಆದರೆ ಬ್ರೆಡ್ ಅನ್ನು ಸೇವನೆ ಮಾಡುವುದು ತುಂಬಾ ಒಳ್ಳೆಯದಲ್ಲ. ಏಕೆಂದರೆ ಈ ಬ್ರೆಡ್ ಅನ್ನು ಮೈದಾದಿಂದ ಮಾಡಿರುತ್ತಾರೆ. ಮೈದಾವನ್ನ ಬಳಸಿ ಮಾಡಿರುವ ಬ್ರೆಡ್ ಅಂದರೆ ಬಿಳಿ ಬ್ರೆಡ್ ಇದರಲ್ಲಿ ಪೋಷಕಾಂಶ ಎಂಬುದು ಇರುವುದಿಲ್ಲ. ಮೈದಾದಿಂದ ಮಾಡಿದ ಬಿಳಿ ಬ್ರೆಡ್ ಅನ್ನು ಸೇವಿಸುವ ಬದಲು ಗೋಧಿ ಅಥವಾ ಮೊಟ್ಟೆ ಬಳಸಿ ಮಾಡಿದ ಬ್ರೆಡ್ ಅನ್ನು ಸೇವಿಸುವುದು ಒಳ್ಳೆಯದು.
ಬಿಳಿ ಬ್ರೆಡ್ ಅನ್ನು ತಿನ್ನುವಾಗ ಅದರಲ್ಲಿ ಉಪ್ಪು ಇದಿಯೋ ಅಥವಾ ಇಲ್ಲವೋ ಎಂಬುದನ್ನ ಮೊದಲು ಗಮನಿಸ ಬೇಕು. ಏಕೆಂದರೆ ಉಪ್ಪು ಕಡಿಮೆ ಇರುವ ಬ್ರೆಡ್ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಉಪ್ಪು ಜಾಸ್ತಿ ಇರುವ ಬ್ರೆಡ್ ಅನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಪ್ರಮಾಣದಲ್ಲಿ ಏರುಪೇರಾಗುತ್ತದೆ. ಇದರಿಂದ ಆರೋಗ್ಯವು ಹಾಳಾಗುತ್ತದೆ. ಮೈದಾ ಬಳಸಿ ಮಾಡಿದ ಬ್ರೆಡ್ ಅನ್ನು ಸೇವನೆ ಮಾಡುವುದರಿಂದ ನಾವು ತುಂಬಾ ಬೇಗ ದಪ್ಪಗಾಗುವ ಸಾಧ್ಯತೆ ಹೆಚ್ಚು ಇರುತ್ತದೆ. ಮೈದಾ ತಿಂಡಿ ತಿನಿಸು ಕ್ಯಾನ್ಸರ್ ಖಾಯಿಲೆ ಬರುವ ಸಾಧ್ಯತೆ ಇದೆ.
ಈ ಮೈದಾ ಬ್ರೆಡ್ ನಲ್ಲಿ ಉಪ್ಪು ಹಾಗೂ ಸಕ್ಕರೆ ಅಂಶ ಎರಡು ಕೂಡ ಹೆಚ್ಚಾಗಿರುತ್ತದೆ. ಇಂತಹ ಬ್ರೆಡ್ ತಿನ್ನುವುದರಿಂದ ತುಂಬಾ ಬೇಗ ಹಸಿವಾಗುತ್ತದೆ. ಮೈದಾ ಬಳಸಿ ಮಾಡಿದ ಬ್ರೆಡ್ ಅನ್ನು ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಇರುತ್ತದೆ. ಬ್ರೆಡ್ ಅನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಇನ್ನು ಮುಂದೆ ಯಾವುದೇ ಕಾರಣಕ್ಕೂ ಕೂಡ ಬ್ರೆಡ್ ಅನ್ನು ಸೇವನೆ ಮಾಡುವುದನ್ನು ನಿಲ್ಲಿಸಿ ಅದರಲ್ಲು ಮೈದಾವನ್ನು ಬಳಕೆ ಮಾಡಿ ಮಾಡಿರುವಂತಹ ಬಿಳಿ ಬ್ರೆಡ್ ನ ಸೇವನೆಯನ್ನು ಮೊದಲು ನಿಲ್ಲಿಸಿ. ನೀವು ಬ್ರೆಡ್ ಸೇವನೆ ಮಾಡಲೇ ಬೇಕು ಅಂದ್ರೆ ಮೈದಾ ರಹಿತ ಹಲವು ರೀತಿಯ ಬ್ರೆಡ್ ಮಾರುಕಟೆಯಲ್ಲಿ ಸಿಗಲಿದೆ ಅದನ್ನ ನಿಯಮಿತವಾಗಿ ಬಳಕೆ ಮಾಡಬಹುದು. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಳ್ಳೆಯದು

Comments are closed.