ಮುಂಬೈ

ನೆಟ್ಟಿಗರ ಸಿಟ್ಟಿಗೆ ಕಾರಣವಾದ ತಾಹಿರಾ ಕಶ್ಯಪ್​ ಈ ಫೋಟೋ

Pinterest LinkedIn Tumblr

ಮುಂಬೈ: ಬಾಲಿವುಡ್​ ನಟ, ಗಾಯಕ ಆಯುಷ್ಮಾನ್​ ಖುರಾನಾ ಅವರ ಪತ್ನಿ ಲೇಖಕಿ ತಾಹಿರಾ ಕಶ್ಯಪ್​ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದ ಫೋಟೋವೊಂದರಿಂದ ತೀವ್ರ ಟ್ರೋಲ್​ಗೆ ಒಳಗಾಗಿ ಬಳಿಕ ಅದನ್ನು ಡಿಲೀಟ್​ ಮಾಡಿ, ಕ್ಷಮೆ ಕೇಳಿದ್ದಾರೆ.

ತಾಹೀರಾ ಕಶ್ಯಪ್​ ಅವರು ಕ್ಯಾನ್ಸರ್​ ರೋಗದೊಂದಿಗೆ ಹೋರಾಡಿ ಗೆದ್ದವರು. ಸದ್ಯ ಪುಣೆಯ ರೆಸಾರ್ಟ್​ವೊಂದರಲ್ಲಿ ತಮ್ಮ ಮಕ್ಕಳು, ಸ್ನೇಹಿತರು, ಅವರ ಮಕ್ಕಳೊಂದಿಗೆ ಜಾಲಿ ಮೂಡ್​ನಲ್ಲಿದ್ದಾರೆ. ಈ ಮಧ್ಯೆ ಮಂಗಳವಾರ ತಾಹಿರಾ ತಾವು ಬುದ್ಧನ ಪುತ್ಥಳಿಯ ಮೇಲೆ ಕುಳಿತಿದ್ದ ಫೋಟೋವೊಂದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದರು.

 

ಈ ಚಿತ್ರ ವಿಪರೀತ ಟ್ರೋಲ್​ ಆಗಿದ್ದಲ್ಲದೆ, ಹಲವರು ಟೀಕಿಸಿದ್ದರು. ಬುದ್ಧನ ಕೈಮೇಲೆ ಮೇಲೆ ಕುಳಿತಿದ್ದು ಸರಿಯಲ್ಲ ಎಂಬಂಥ ಹಲವು ಕಾಮೆಂಟ್​ಗಳು, ಜತೆಗೆ ಆಕ್ರೋಶವೂ ವ್ಯಕ್ತವಾಗಿತ್ತು. ಅದಾದ ಬಳಿಕ ಆ ಫೋಟೋವನ್ನು ತಾಹಿರಾ ಡಿಲೀಟ್​ ಮಾಡಿದ್ದರು.

ಬುಧವಾರ ಕ್ಷಮಾಪಣಾ ಪೋಸ್ಟ್​ ಹಾಕಿದ್ದು, ನಾನು ಯಾರಿಗೂ ನೋವು ಕೊಡಲು ಇಷ್ಟಪಡುವುದಿಲ್ಲ. ನಾನು ಅಪ್​ಲೋಡ್​ ಮಾಡಿದ ಫೋಟೋದಿಂದ ಕೆಲ ಜನರ ಭಾವನೆಗೆ ಧಕ್ಕೆಯಾಗಿದ್ದು, ಅವರೆಲ್ಲರ ಕ್ಷಮೆ ಕೇಳುತ್ತೇನೆ. ಎಲ್ಲರೂ ಶಾಂತಿಯಿಂದ, ಪ್ರೀತಿಯಿಂದ ಇರಬೇಕು ಎಂಬುದು ನನ್ನ ಆಶಯ ಎಂದು ಹೇಳಿದ್ದಾರೆ.
ಅಲ್ಲದೆ, ತಾವು ಮಕ್ಕಳೊಂದಿಗೆ ರೆಸ್ಟೋರೆಂಟ್​ನಲ್ಲಿ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Comments are closed.