
ಮ್ಯಾಂಚೆಸ್ಟರ್: ಬಾಲಿವುಡ್ ನಟ ರಣ್‍ವೀರ್ ಸಿಂಗ್ ಭಾನುವಾರ ಇಂಡೋ- ಪಾಕ್ ಪಂದ್ಯದ ನಂತರ ಅಳುತ್ತಿದ್ದ ಪಾಕಿಸ್ತಾನದ ಅಭಿಮಾನಿಯನ್ನು ಸಮಾಧಾನ ಮಾಡಿದ್ದಾರೆ. ಅಲ್ಲದೆ ರಣ್‍ವೀರ್ ಸಮಾಧಾನ ಮಾಡಿದ ವಿಡಿಯೋ ವೈರಲ್ ಆಗುತ್ತಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಡಕ್ವರ್ಥ್ ಲೂಯಿಸ್ ನಿಯಮದನ್ವಯ 89 ರನ್‍ಗಳ ಭರ್ಜರಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಪಾಕ್ ತಂಡ ಕಳಪೆ ಪ್ರದರ್ಶನ ತೋರಿದ್ದಕ್ಕೆ ಅವರ ಅಭಿಮಾನಿಗಳು ತಂಡದ ವಿರುದ್ಧ ಗರಂ ಆಗಿದ್ದರು. ಈ ವೇಳೆ ಪಾಕ್ ಪಂದ್ಯ ಸೋತಿದ್ದಕ್ಕೆ ಅಭಿಮಾನಿಯೊಬ್ಬರು ಕಣ್ಣೀರು ಹಾಕುತ್ತಿದ್ದರು.
ಅಭಿಮಾನಿ ಕಣ್ಣೀರು ಹಾಕುತ್ತಿರುವುದನ್ನು ಗಮನಿಸಿದ ರಣ್‍ವೀರ್ ಸಿಂಗ್, ಆತನನ್ನು ತಬ್ಬಿಕೊಂಡು ಸಮಾಧಾನ ಮಾಡಿದ್ದಾರೆ. ಅಲ್ಲದೆ ‘ಸಮಾಧಾನ ಮಾಡಿಕೋ. ಎಲ್ಲದಕ್ಕೂ ಮತ್ತೊಂದು ಅವಕಾಶ ಎಂಬುದು ಇರುತ್ತದೆ. ನೀನು ನಿರಾಶನಾಗಬೇಡ. ನಿಮ್ಮ ತಂಡ ಅದ್ಭುತವಾಗಿ ಆಡಿದೆ. ನಿಮ್ಮ ತಂಡದ ಆಟಗಾರರು ಮತ್ತೆ ಫಾರ್ಮ್ ಗೆ ಬರುತ್ತಾರೆ’ ಎಂದು ರಣ್‍ವೀರ್ ಸಮಾಧಾನ ಮಾಡಿದ್ದಾರೆ.
ರಣ್‍ವೀರ್ ಸಮಾಧಾನ ಮಾಡಿದ ವ್ಯಕ್ತಿಯ ಹೆಸರು ಆತಿಫ್ ನವಾಜ್ ಆಗಿದ್ದು, ಮೂಲತಃ ಲಂಡನ್‍ನವರು ಎಂಬುದು ತಿಳಿದು ಬಂದಿದೆ. ರಣ್‍ವೀರ್ ಸಮಾಧಾನ ಮಾಡುತ್ತಿರುವ ವಿಡಿಯೋ ಹಾಕಿ ಅದಕ್ಕೆ, ‘ಭಾರತದ ಅಭಿಮಾನಿಗಳು ತುಂಬಾ ಒಳ್ಳೆಯವರು. ಧನ್ಯವಾದಗಳು ರಣ್‍ವೀರ್’ ಎಂದು ಆತಿಫ್ ಟ್ವೀಟ್ ಮಾಡಿದ್ದಾರೆ. ಆತಿಫ್ ನಟ ಹಾಗೂ ಹಾಸ್ಯ ನಟನಾಗಿದ್ದು, ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.
Comments are closed.