
ಬೆಂಗಳೂರು: ನಾನು ಸಲಹೆಯನ್ನು ಕೊಡೋದಿಲ್ಲ ನಾನೇ ಚುನಾವಣೆಯನ್ನು ಕಳೆದುಕೊಂಡಿದ್ದೇನೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನಲ್ಲಿಂದು ಮುಖ್ಯಮಂತ್ರಿ ಭೇಟಿ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಈಗ ಸಲಹೆ ಕೊಡೋದು ಸಮಂಜಸ ಅಲ್ಲ ಎಂದು ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದರು.
ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಅವರ ಅಮಾನತು ವಿಚಾರವಾಗಿ ಮಾತನಾಡಿದ ಅವರು, ಅವರು ಈಗಾಗಲೇ ಸಮಜಾಯಿಷಿ ಕೊಟ್ಟಿದ್ದಾರೆ. ನನಗೆ ಪಕ್ಷದ ವಿರುದ್ಧ ಮಾತಾಡುವ ಹಕ್ಕು ಇಲ್ಲ. ಪಕ್ಷದಲ್ಲಿ ಸಣ್ಣ-ಪುಟ್ಟ ಅಸಮಾಧಾನ ಇರುತ್ತೆ. ಹಾಗಾಂತ ಅದನ್ನು ಮಾಧ್ಯಮದ ಮುಂದೆ ಹೇಳೋದು ಅಲ್ಲ. ನಮ್ಮ ನಮ್ಮಲ್ಲಿ ಕೂತು ಆ ಸಮಸ್ಯೆ ಬಗೆಹರಿಸಬೇಕು ಎಂದರು.
ಅಷ್ಟೇ ಅಲ್ಲದೇ ರೋಷನ್ ಬೇಗ್ ಸೇರಿದಂತೆ ಹಲವರು ಪಕ್ಷದ ವಿರುದ್ಧವಾಗಲೀ, ಹೈಕಮಾಂಡ್ ವಿರುದ್ಧವಾಗಲೀ ಮಾತಾಡಬಾರದು. ಬಹಿರಂಗವಾಗಿ ಪಕ್ಷದ ವಿರುದ್ಧ ಯಾರೂ ಮಾತಾಡಬೇಡಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರು ನುಡಿದರು.
Comments are closed.