
ಮುಂಬೈ: ಬಾಲಿವುಡ್ನ ಬೋಲ್ಡ್ ನಟಿ ಹಾಗೂ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜೀವನ ಆಧಾರಿತ ಚಿತ್ರದಲ್ಲಿ ನೆಹ್ವಾಲ್ ಪಾತ್ರಕ್ಕೆ ಬಣ್ಣ ಹಚ್ಚಿರುವ ಪರಿಣಿತಿ ಚೋಪ್ರಾ ತಮ್ಮ ಸಹನಟರಾದ ಅರ್ಜುನ್ ಕಪೂರ್ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರಲ್ಲಿ ಯಾರು ಉತ್ತಮ ಕಿಸ್ಸರ್ ಎಂಬುದನ್ನು ಕಾರ್ಯಕ್ರಮವೊಂದರಲ್ಲಿ ಬಹಿರಂಗಪಡಿಸಿದ್ದಾರೆ.
ನಟಿ ನೇಹಾ ಧೋಪಿಯಾ ನಡೆಸಿಕೊಡುವ ಬಿಎಫ್ಎಫ್ ವಿತ್ ವೋಗ್(BFFs with Vogue) ಎಂಬ ಚಾಟ್ ಶೋನಲ್ಲಿ ನಟಿ ಪರಿಣಿತಿ ಚೋಪ್ರಾ ತಮ್ಮ ಸ್ನೇಹಿತೆ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಜತೆಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಪರಿಣಿತಿ ಇಂಡಸ್ಟ್ರಿಯಲ್ಲಿ ಒಬ್ಬ ನಟನೊಂದಿಗೆ ಡೇಟಿಂಗ್ನಲ್ಲಿದ್ದರು ಎಂಬ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಾನಿಯಾ ಮಿರ್ಜಾ, ನಟನ ಹೆಸರನ್ನು ಮಾತ್ರ ಬಹಿರಂಗಪಡಿಸಲಿಲ್ಲ.
ಕಾರ್ಯಕ್ರಮದಲ್ಲಿ ಅರ್ಜುನ್ ಕಪೂರ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರಲ್ಲಿ ಯಾರು ಉತ್ತಮ ಕಿಸ್ಸರ್ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪರಿಣಿತಿ, ಅರ್ಜುನ್ ಮತ್ತು ನಾನು ತುಂಬಾ ವಿಶೇಷ ಹಾಗೂ ವಿರಳವಾದ ಸಂಬಂಧವನ್ನು ಹೊಂದಿದ್ದೇವೆ. ನಾನು ಹೇಗಿರಬೇಕೆಂದುಕೊಂಡಿದ್ದೇನೆ ಆಗಿರಲು ಅರ್ಜುನ್ ಸಹಕರಿಸುತ್ತಾರೆ. ಹೀಗಾಗಿ ಅರ್ಜುನ್ ಮತ್ತು ಸಿದ್ಧಾರ್ಥ್ ಇಬ್ಬರಲ್ಲಿ ನಾನು ಅರ್ಜುನ್ ಹೆಸರನ್ನು ಹೇಳ ಬಯಸುತ್ತೇನೆ ಎಂದು ತಿಳಿಸಿದ್ದಾರೆ.
ಪರಿಣಿತಿ, ನಟ ಅರ್ಜುನ್ ಜತೆ ನಮಸ್ತೆ ಇಂಗ್ಲೆಂಡ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಬಳಿಕ ಯಾವ ಚಿತ್ರದಲ್ಲಿಯೂ ಅವರು ಒಂದಾಗಿಲ್ಲ. ಜಬಾರಿಯಾ ಜೋಡಿ ಎಂಬ ಚಿತ್ರದಲ್ಲಿ ಸಿದ್ಧಾರ್ಥ್ ಜತೆ ನಟಿಸಿದ್ದು, ಆಗಸ್ಟ್ 2 ಕ್ಕೆ ಚಿತ್ರ ತೆರೆ ಕಾಣಲಿದೆ.
Comments are closed.