
ಬಾಗಲಕೋಟೆ : ಯುವಕ-ಯುವತಿಗೆ ಟಂಟಂ ( ಆಟೋ) ನಲ್ಲಿ ಶುರುವಾದ ಪ್ರೇಮಾಂಕುರ ಇದೀಗ ಎಸ್ಪಿ ಕಚೇರಿವರೆಗೂ ಬಂದು ನಿಂತಿದೆ.
ಬಾಗಲಕೋಟೆ ಜಿಲ್ಲೆಯ ಪ್ರೇಮ ಪ್ರಕರಣವೊಂದು ಎಸ್ಪಿ ಕಚೇರಿ ಮೆಟ್ಟಿಲೇರಿದೆ. ನಿಖಿಲ್ ಮತ್ತು ಶಿಲ್ಪಾ. ಇಬ್ಬರೂ ಬಾಗಲಕೋಟೆ ನವನಗರದ ನಿವಾಸಿಗಳು. ಕಳೆದ ಮೂರು ವರ್ಷಗಳಿಂದ ಒಬ್ಬರಿಗೊಬ್ಬರು ಪರಸ್ಪರ ಪ್ರೀತಿಸುತ್ತಿದ್ದಾರಂತೆ. 22 ವರ್ಷದ ನಿಖೀಲ್ ಟಂಟಂ (ಆಟೋ) ಚಾಲಕನಾಗಿದ್ದು, ಟಂಟಂ ಓಡಿಸಿಕೊಂಡು ಜೀವನಸಾಗಿಸುತ್ತಿದ್ದಾನೆ. ಇನ್ನು 19 ವರ್ಷದ ಶಿಲ್ಪಾ ಬಿ.ಕಾಂ ಓದುತ್ತಿದ್ದಾಳೆ. ಕಾಲೇಜಿಗೆ ತೆರಳೋ ವೇಳೇ ಶಿಲ್ಪಾಳಿಗೆ ನಿಖಿಲ್ ಡ್ರಾಪ್ ಕೊಡುವ ಮೂಲಕ ಇಬ್ಬರಿಗೂ ಪರಿಚಯವಾಗಿತ್ತಂತೆ. ಆಮೇಲೆ ಪರಿಚಯದ ಮಧ್ಯೆ ಪ್ರೇಮಾಂಕುರವಾಗಿ, ಪ್ರೀತಿಯಾಗಿ ಬೆಳೆದು ಇದೀಗ ಮದುವೆ ಹಂತಕ್ಕೆ ಬಂದು ತುಲಿಪಿದ್ದು, ಎಸ್ಪಿಯವರ ಕಚೇರಿವರೆಗೂ ಬಂದಿದೆ.
ಇವರಿಬ್ಬರು ಅಂತರ್ಜಾತಿಯವರಾಗಿದ್ದು, ಇವರ ಪ್ರೀತಿಗೆ ಶಿಲ್ಪಾಳ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಳೆದ ಕೆಲ ದಿನಗಳ ಹಿಂದೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶಿಲ್ಪಾಳ ಪೋಷಕರು ತಮ್ಮ ಮಗಳಿಗೆ ಬುದ್ದಿವಾದ ಹೇಳೋದಾಗಿ ಇಬ್ಬರನ್ನ ಬೆರ್ಪಡಿಸಿದರು. ಬಳಿಕ ಶಿಲ್ಪಾಳನ್ನು ತಮ್ಮ ಸಂಬಂಧಿಕರ ಮನೆಗೆ ಕಳಿಸಿದರು. ಆದರೆ, ಶಿಲ್ಪಾ ಇಂದು ಬೆಳಗಿನ ಜಾವ ಯಾರಿಗೂ ಹೇಳದೇ ಪ್ರೀಯತಮನಿಗಾಗಿ ಮನೆ ಬಿಟ್ಟು ಓಡಿ ಬಂದಿದ್ದು, ಮದುವೆ ಮಾಡಿಸುವಂತೆ ನಿಖಿಲ್ ನ ತಾಯಿಯ ಬಳಿ ಹೋಗಿದ್ದಳಂತೆ. ಹೀಗಾಗಿ ನಿಖಿಲ್ ನ ತಾಯಿ ರುಕ್ಮವ್ವ ಇಬ್ಬರನ್ನು ಎಸ್ಪಿ ಕಚೇರಿಗೆ ಕರೆ ತಂದಿದ್ದು, ಪ್ರೇಮಿಗಳಿಗೆ ಜೀವಭಯವಿದೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಪ್ರೇಮಿಗಳಿಬ್ಬರು ಎಸ್ ಪಿಯವರನ್ನು ಭೇಟಿಯಾಗಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಇಬ್ಬರ ಪ್ರೀತಿಗೆ ಜಾತಿ ಅಡ್ಡ ಬಂದಿದ್ದು, ಶಿಲ್ಪಾಗೆ ಮನೆಯವರು ಸೇರಿದಂತೆ ಸಂಭದಿಕರು ಪ್ರೀತಿ, ಪ್ರೇಮದ ವಿಚಾರವನ್ನು ತೆಲೆಯಿಂದ ತೆಗೆದು ಹಾಕುವಂತೆ ಸಾಕಷ್ಟು ಬುದ್ದಿವಾದ ಹೇಳಿದ್ದಾರೆ. ಆದರೆ, ಅದ್ಯಾವುದು ಪ್ರಯೋಜನವಾಗಿಲ್ಲ. ಶಿಲ್ಪಾ ಮೇಲ್ವರ್ಗಕ್ಕೆ ಸೆರಿದ್ದು ನಿಖಿಲ್ ಕೆಳವರ್ಗದ ಸಮುದಾಯಕ್ಕೆ ಸೇರಿದ್ದರಿಂದ ಹುಡುಗಿ ಮನೆಯರು ಅಂತರರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರಂತೆ. ಈ ಎಲ್ಲ ವಿಚಾರಗಳ ಬಗ್ಗೆ ಶಿಲ್ಪಾ ಹಾಗೂ ನಿಖಿಲ್ ಪೊಲೀಸ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದು, ಎಸ್ಪಿಯವರು ಇಬ್ಬರಿಗೂ ರಕ್ಷಣೆ ನೀಡಲು ಸಮ್ಮತ್ತಿಸಿದ್ದಾರೆ. ಅಲ್ಲದೇ ಕುಟುಂಬದ ಹಿರಿಯರ ಜೊತೆ ಮಾತನಾಡಿ ಮನವೊಲಿಸಲು ಪ್ರಯತ್ನಿಸುವಂತೆ ಬಾಗಲಕೋಟೆ ನಗರ ಸಿಪಿಐಯವರಿಗೆ ಸೂಚಿಸಿದ್ದಾರೆ. ಒಂದು ಕುಟುಂಬಗಳ ನಡುವೆ ಹೊಂದಾಣಿಕೆಯಾಗದಿದ್ದಾರೆ, ಪ್ರೇಮಿಗಳಿಬ್ಬರೂ ವಯಸ್ಕರಾಗಿದ್ರಿಂದ ಅವರ ಸ್ವ ಇಚ್ಚೆಯಂತೆ ಮುಂದಿನ ಕ್ರಮಕೈಗೊಳ್ಳೊದಾಗಿ ತಿಳಿಸಿದ್ದಾರೆ.
ಪ್ರೀತಿಯಲ್ಲಿ ಬಿದ್ದ ಯುವತಿ ಪ್ರೀತಿಸಿದ ಯುವಕನನ್ನೇ ಮದುವೆಯಾಗುತ್ತೇನೆ ಅಂತ ಹಠಹಿಡಿದ್ದಾಳೆ. ಇತ್ತ ಪ್ರಿಯಕರ ಕೂಡ ಮದುವೆಗೆ ತಯಾರಾಗಿದ್ದು, ಇಬ್ಬರಿಗೂ ಜಾತಿ ಅಡ್ಡಿಯಾಗಿದೆ. ಪ್ರೇಮ ಪ್ರಕರಣಕ್ಕೆ ಪೊಲೀಸ್ ಇಲಾಖೆ ಮಧ್ಯಸ್ತಿಕೆ ವಹಿಸಿದೆ.
Comments are closed.