ಮನೋರಂಜನೆ

ನಟಿಯ ಖಾಸಗಿ ಫೋಟೋಸ್ ವೈರಲ್ ಮಾಡಿದವರಿಗೆ ಹೀಗೆ ಹೇಳಿದ್ದೇಕೆ..!!?

Pinterest LinkedIn Tumblr


ನಾನು ಒಬ್ಬಳು ನಟಿ ನಾನು ಮಾಡೆಲ್ ಸಹ ಆಗಿದ್ದೆನೆ. ನಾನು ಸಾರ್ವಜನಿಕರ ದೃಷ್ಟಿಯಲ್ಲಿಇರಬೇಕು ಎಂದು ಬಯಸಿದವಳು. ಆದರೆ, ನಾನು ಸಾರ್ವಜನಿಕ ಆಸ್ತಿಯಲ್ಲ ಎಂದು ನಟಿ, ಮಾಡೆಲ್ ಶುಭ್ರ ಅಯ್ಯಪ್ಪ ಅವರು ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶುಭ್ರ ಅಯ್ಯಪ್ಪ ಅವರ ಖಾಸಗಿ ಫೋಟೋಸ್ ಗಳನ್ನು ಪೋಸ್ಟ್ ಮಾಡುವ ಮೂಲಕ ಅವರ ವೈಯಕ್ತಿಕ ಜೀವನಕ್ಕೆ ಚ್ಯುತಿ ತರ್ತಿರೋ ಪುಂಡ ಪೋಕರಿಗಳ ವಿರುದ್ದ ನಟಿ ಶುಭ್ರ ಅಯ್ಯಪ್ಪ ಆಕ್ರೋಶ ಹೊರಹಾಕಿದ್ದಾರೆ.

ಕೇವಲ ಕನ್ನಡವಷ್ಟೇ ಅಲ್ಲದೇ, ದಕ್ಷಿಣ ಭಾರತದಲ್ಲೇ ಸದ್ದು ಮಾಡಿರೋ ನಟಿ ಶುಭ್ರ ಅಯ್ಯಪ್ಪ ಈ ಕುರಿತು ನಟಿ ಇನ್ಸ್​ಟಾಗ್ರಾಂನಲ್ಲಿ ಸ್ಪಷ್ಟನೆ ಕೂಡ ನೀಡಿದ್ದಾರೆ. ಇದರಿಂದ ನನಗೆ ತುಂಬಾ ನೋವಾಗಿದೆ, ತೊಂದರೆ ಕೂಡ ಆಗಿದೆ. ನನ್ನ ಇಷ್ಟದಂತೆ ನಾನು ಬದುಕಿದರೆ ನಿಮಗೇನು ತೊಂದರೆ. ಎಲ್ಲರಿಗೂ ನಾನು ಉತ್ತರಿಸೋ ಅವಶ್ಯಕತೆ ಇಲ್ಲ, ನನ್ನ ಬಗ್ಗೆ ಅರಿತವರಿಗೆ ನಾನೇನು ಅನ್ನೋದು ಗೊತ್ತು, ಆದರೂ ಇಲ್ಲಿ ಸ್ಪಷ್ಟನೆ ನೀಡ್ತಿದ್ದೇನೆ. ಈ ರೀತಿ ಮಾಡೋರನ್ನ ದೂರ ಇಡೋ ಉದ್ದೇಶದಿಂದ ಇಂತಹವರಿಗೆ ನಾನು ಫ್ರೀಯಾಗಿ ಅಡ್ವೈಸ್ ಕೊಡ್ತೀನಿ, ಫೋಟೋಶಾಪ್ ಚೆನ್ನಾಗಿ ಕಲಿಯಿರಿ, ಅದನ್ನು ಒಳ್ಳೆಯ ಉದ್ದೇಶಕ್ಕೆ ಬಳಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನದಾಳವನ್ನು ನಟಿ ಶುಭ್ರ ಅಯ್ಯಪ್ಪ ಬಿಚ್ಚಿಟ್ಟರು.

ನಾನು ನನ್ನ ಪ್ರೀತಿ ಪಾತ್ರರಿಗೆ ಇಷ್ಟವಾಗುವಂತೆ ನಡೆದುಕೊಂಡರೆ ಸಾಕು ಎಂದುಕೊಂಡಿದ್ದೇನೆ. ಆದರೆ, ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವ ಮೂಲಕ ನನಗೆ ನೋವು ಕೊಡವವರನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸುವೆ” ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.

Comments are closed.