Uncategorized

ರಾಹುಲ್​ ಒಂದು ನಾಯಿಮರಿ, ತಿಂಡಿ ಕೊಟ್ಟವರ ಎದುರು ಬಾಲ ಅಲ್ಲಾಡಿಸುತ್ತದೆ: ಬಿಜೆಪಿ ಸಚಿವ

Pinterest LinkedIn Tumblr

ನವದೆಹಲಿ: ಚುನಾವಣೆ ಶುರುವಾದಾಗಿನಿಂದ ಒಬ್ಬರಲ್ಲ ಒಬ್ಬ ರಾಜಕಾರಣಿ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಈಗ ಗುಜರಾತ್​ನ ಬುಡಕಟ್ಟು ಜನಾಂಗದ ಕಲ್ಯಾಣ ಇಲಾಖೆ ಸಚಿವರ ಸರದಿ. ಬಿಜೆಪಿ ಸಚಿವರು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿಯವರನ್ನು ಟೀಕಿಸಿದ ಪರಿ ಇದೀಗ ಮತ್ತೊಂದು ವಿವಾದ ಸೃಷ್ಟಿಸಿದೆ.

ಭಾರತೀಯ ಜನತಾ ಪಕ್ಷದ ಸಚಿವ ಗಣ್ಪತ್​ ವಾಸಾವಾ ಅವರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆ ನಡೆಸುತ್ತಿದ್ದ ವೇಳೆ ಮಾತನಾಡುತ್ತ, ನರೇಂದ್ರ ಮೋದಿಯವರನ್ನು ಸಿಂಹ ಎಂದು ಕರೆದಿದ್ದಾರೆ. ಆದರೆ ರಾಹುಲ್​ ಗಾಂಧಿಯವರನ್ನು ನಾಯಿಮರಿಗೆ (ಪಪ್ಪಿ) ಹೋಲಿಸಿ ವಿವಾದ ಹುಟ್ಟುಹಾಕಿದ್ದಾರೆ.

ಮೋದಿಯವರು ನಿಂತಿದ್ದರೆ ಗುಜರಾತ್​ನ ಸಿಂಹ ನಿಂತಿರುವಂತೆ ಭಾಸವಾಗುತ್ತದೆ. ಅದೇ ರಾಹುಲ್​ ಗಾಂಧಿಯನ್ನು ನೋಡಿದರೆ ನಾಯಿಯೊಂದರ ಮರಿಯಂತೆ ಕಾಣುತ್ತದೆ. ಈ ನಾಯಿಮರಿ ಪಾಕಿಸ್ತಾನ ತಿಂಡಿ ಕೊಟ್ಟರೆ ಅಲ್ಲಿಗೆ ಹೋಗುತ್ತದೆ, ಚೀನಾ ರೊಟ್ಟಿ ಕೊಟ್ಟರೆ ಅಲ್ಲಿಗೆ ತೆರಳುತ್ತದೆ. ಒಟ್ಟಿನಲ್ಲಿ ಹೊಟ್ಟೆಗೆ ಯಾರು ಕೊಡುತ್ತಾರೋ ಅವರ ಎದುರು ಬಾಲ ಅಲ್ಲಾಡಿಸುತ್ತ ನಿಲ್ಲುತ್ತದೆ ಎಂದು ಟೀಕಿಸಿದ್ದಾರೆ.

ಹಿಂದೆ ರಾಹುಲ್​ ಗಾಂಧಿಯನ್ನು ಶಿವನಿಗೆ ಹೋಲಿಸಿದ್ದಕ್ಕೆ ವ್ಯಂಗ್ಯವಾಡಿದ್ದ ಈ ಸಚಿವರು, ರಾಹುಲ್​ ಶಿವನಂತೆ ವಿಷ ಕುಡಿದು ಬದುಕಿದರೆ ಮಾತ್ರೆ ನಾವು ಈ ಹೋಲಿಕೆಯನ್ನು ಒಪ್ಪುತ್ತೇವೆ ಎಂದು ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು.

Comments are closed.