ಉಡುಪಿ: ವ್ಯವಹಾರ ನಿಮಿತ್ತ ವಿದೇಶದಲ್ಲಿ ನೆಲೆಸಿದ್ದರೂ ಕೂಡ ಪ್ರತಿ ಬಾರಿ ಮತದಾನ ಮಿಸ್ ಮಾಡಿಕೊಳ್ಳದೇ ಊರಿಗೆ ಆಗಮಿಸುವ ಎನ್.ಆರ್.ಐ. ಪೈಕಿ ಕುಂದಾಪುರ ಮೂಲದ ಪ್ರವೀಣ್ ಕುಮಾರ್ ಶೆಟ್ಟಿ ಕೂಡ ಒಬ್ಬರು. ಈ ಬಾರಿ ಮಹಾ ಚುನಾವಣೆ ನಡೆಯುತ್ತಿದ್ದು ಪ್ರವೀಣ್ ಕುಮಾರ್ ಶೆಟ್ಟಿ ಹುಟ್ಟೂರಾದ ವಕ್ವಾಡಿಗೆ ಆಗಮಿಸಿ ಇಲ್ಲಿನ ಶಾಲೆಯಲ್ಲಿ ಮತದಾನ ಮಾಡಿದರು.

ಬಳಿಕ ‘ಕನ್ನಡಿಗ ವರ್ಲ್ಡ್’ ಜೊತೆ ಮಾತನಾಡಿದ ದುಬೈ ಕರ್ನಾಟಕ ಎನ್.ಆರ್.ಐ. ಫೊರಂ ಅಧ್ಯಕ್ಷ ಹಾಗೂ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ದುಬೈನಿಂದ ನೂರಾರು ಕನ್ನಡಿಗರು ಮತದಾನಕ್ಕಾಗಿ ಆಗಮಿಸಿದ್ದೇವೆ. ನಿನ್ನೆ ದಿನ ವಿಮಾನದಲ್ಲಿ ಬರುವಾಗಲೂ ಕೂಡ ಉಡುಪಿ ಕ್ಷೇತ್ರದ ೨೬ ಮಂದಿಯಿದ್ದು ಇಡೀ ವಿಮಾನದಲ್ಲಿ ಮೋದಿ ಜೈಕಾರವಿತ್ತು. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದು ನಮ್ಮೆಲ್ಲರ ಹೆಮ್ಮ, ಕರಾವಳಿಯಲ್ಲೂ ಮೋದಿಯವರ ಹವಾ ಜಾಸ್ಥಿಯಾಗಿದೆ. ಮೋದಿ ಅಧಿಕಾರಕ್ಕೆ ಬಂದ ಮೇಲೆ ದುಬೈನಲ್ಲಿ ನಮ್ಮೆಲ್ಲರಿಗೆ ಗೌರವ ಹೆಚ್ಚಿದೆ ಎಂದು ಓರ್ವ ಎನ್.ಆರ್.ಐ ಆಗಿ ಎದೆತಟ್ಟಿಕೊಂಡು ಹೇಳುವೆ. ದೇಶದಲ್ಲಿ ಈ ಬಾರಿ ಮುನ್ನೂರಕ್ಕೂ ಅಧಿಕ ಸೀಟು ಬಿಜೆಪಿ ಪಡೆದು ಹೆಮ್ಮೆಯ ಮೋದಿಜಿ ಮತ್ತೆ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲೆಡೆ ಮತದಾನ ಹೆಚ್ಚಿದೆ. ಬೇರೆಬೇರೆ ಕಡೆಗಳಲ್ಲಿ ಉದ್ಯೋಗ ನಿಮಿತ್ತ ನೆಲಸಿದವರೂ ಊರಿಗೆ ಬಂದಿದ್ದು ಎಲ್ಲರೂ ಮತದಾನ ಮಾಡುತ್ತಿರುವುದು ಅಭಿವ್ರದ್ಧಿ ಸಾಧ್ಯ ಎಂಬುದು ತೋರಿಸಿಕೊಟ್ಟಿದ್ದಾರೆ. ಸ್ವಯಂಪ್ರೇರಿತ ಮತದಾನದ ಆಸೆ ಜನರಲ್ಲಿದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಅಭಿಪ್ರಾಯಪಟ್ಟರು.
(ವರದಿ- ಯೋಗೀಶ್ ಕುಂಭಾಸಿ)
Comments are closed.