ಮಂಗಳೂರು, ಎಪ್ರಿಲ್.18: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಗ್ಗೆ ಏಳು ಗಂಟೆಗೆ ಚುನಾವಣೆ ಆರಂಭಗೊಂಡಿದ್ದು, ಸಂಜೆ 5 ಗಂಟೆ ಸುಮಾರಿಗೆ ದ.ಕ. ಲೋಕಸಭಾ ಕ್ಷೇತ್ರದಲ್ಲಿ ಶೇ.72.30 ಮತದಾನವಾಗಿದೆ.
5 ಗಂಟೆಯ ಸುಮಾರಿಗೆ ಬೆಳ್ತಂಗಡಿಯಲ್ಲಿ ಶೇಖಡ 75.82, ಮೂಡಬಿದ್ರೆ ಶೇಖಡ 71.03, ಬಂಟ್ವಾಳ ಶೇಖಡ 75.65, ಪುತ್ತೂರು ಶೇಖಡ 77.64, ಸುಳ್ಯ ಶೇಖಡ 74.34, ಮಂಗಳೂರು ಉತ್ತರ ( ಸುರತ್ಕಲ್) ಶೇಖಡ 71.00, ಮಂಗಳೂರು ದಕ್ಷಿಣ ಶೇಖಡ 65.17, ಹಾಗೂ ಮಂಗಳೂರು (ಉಳ್ಳಾಲ) ಶೇಖಡ 60.03 ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮತದಾನವಾಗಿದೆ.
ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9ಗಂಟೆ ವೇಳೆಗೆ ಶೇ.14. ರಷ್ಟು ಮತದಾನವಾಗಿದ್ದು, ಬಳಿಕ 11 ಗಂಟೆಗೆ ಶೇಖಡ 32.34ರಷ್ಟು ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮಂದಿ ಮತದಾನ ಮಾಡಿದ್ದಾರೆ.
11 ಗಂಟೆಯ ವೇಳೆಗೆ ಬೆಳ್ತಂಗಡಿಯಲ್ಲಿ ಶೇಖಡ 33.80 ಮೂಡಬಿದ್ರೆ ಶೇಖಡ 31.65 ಬಂಟ್ವಾಳ ಶೇಖಡ 33.89 ಪುತ್ತೂರು ಶೇಖಡ 33.16 ಸುಳ್ಯ ಶೇಖಡ 33.65 ಮಂಗಳೂರು ಉತ್ತರ ( ಸುರತ್ಕಲ್) ಶೇಖಡ31.91 ಮಂಗಳೂರು ದಕ್ಷಿಣ ಶೇಖಡ 29.63 ಹಾಗೂ ಮಂಗಳೂರು (ಉಳ್ಳಾಲ) ಶೇಖಡ 31.33 ಮತದಾನವಾಗಿದೆ.
ಮಧ್ಯಾಹ್ನ 1 ಗಂಟಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 48.36, ಮೂಡುಬಿದಿರೆಯಲ್ಲಿ ಶೇ.48.55, ಮಂಗಳೂರು ಉತ್ತರದಲ್ಲಿ ಶೇ.47.24, ಮಂಗಳೂರು ದಕ್ಷಿಣದಲ್ಲಿ ಶೇ.43.34, ಮಂಗಳೂರು ಕ್ಷೇತ್ರದಲ್ಲಿ ಶೇ.45.80, ಬಂಟ್ವಾಳದಲ್ಲಿ ಶೇ.50.60, ಪುತ್ತೂರಿನಲ್ಲಿ 51.66 ಹಾಗೂ ಸುಳ್ಯದಲ್ಲಿ ಶೇ.53.13 ಮತದಾನವಾಗಿದೆ.
ಕೆಲವು ಕಡೆ ಮತಯಂತ್ರಗಳಲ್ಲಿ ಲೋಪದೋಷ ಕಂಡುಬಂದಿದೆ. ಉಪ್ಪಿನಂಗಡಿಯ ಮಠ ಹಿರ್ತಡ್ಕ ಮತಗಟ್ಟೆಯಲ್ಲಿ ಕಾಂಗ್ರೆಸ್ – ಎಸ್ಡಿಪಿಐ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿರುವುದು ಬಿಟ್ಟರೆ ಉಳಿದಂತೆ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ.