ಕರ್ನಾಟಕ

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಕೆ.ಎಸ್.ಈಶ್ವರಪ್ಪ, ಮೂವರು ಪುರೋಹಿತರು ಸೇರಿ 7 ಮಂದಿ ಖುಲಾಸೆ

Pinterest LinkedIn Tumblr

ಬೆಂಗಳೂರು: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಹಾಗೂ ಇತರೆ ಏಳು ಮಂದಿಯನ್ನು ಖುಲಾಸೆಗೊಳಿಸಿ ಚುನಾಯಿತ ಜನಪ್ರತಿನಿಧಿಗಳ ಕ್ರಿಮಿನಲ್ ಕೇಸ್ ಗಳನ್ನು ಇತ್ಯರ್ಥಪಡಿಸುವ ವಿಶೇಷ ನ್ಯಾಯಾಲಯವು ಆದೇಶಿಸಿದೆ.

ಮಾಜಿ ಎಂಎಲ್ಸಿ ಶಶೀಲ್ ನಮೋಶಿ, ಈಶ್ವರಪ್ಪ, ಮಾಜಿ ಬಿಜೆಪಿ ಅಭ್ಯರ್ಥಿ ಪಿ.ಗದಿಲಿಂಗಪ್ಪ, ಮಾಜಿ ಶಾಸಕ ಬಿ. ಶಿವರಾಮ ರೆಡ್ಡಿ, ಎಸ್. ಇಂಧುಶೇಕರ್ ಮತ್ತು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಮೂವರು ಪುರೋಹಿತರಾದ ಉಮಾಮಹೇಶ್ವರಿ, ರಾಮಂಜನೇಯ ಮತ್ತು ಸೀತಾರಾಮ ಅವರುಗಳು ದೋಷಮುಕ್ತರಾಗಿದ್ದಾರೆ.

2011ರ ಉಪಚುನಾವಣೆ ಸಮಯದಲ್ಲಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಸಂಗನಕಲ್ಲು ವ್ಯಾಪ್ತಿಯಲ್ಲಿ ರಾಜಕೀಯ ಚಟುವಟಿಕೆ ಉತ್ತೇಜನಕ್ಕಾಗಿ ಧಾರ್ಮಿಕ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವ ಮೂಲಕ ಈಶ್ವರಪ್ಪ ಹಾಗೂ ಇತರರು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರೆಂದು ಚುನಾವಣಾ ಆಯೋಗ ದೂರು ದಾಖಲಿಸಿತ್ತು. ಸ್ಥಳೀಯ ಪೋಲೀಸರ ಅನುಮತಿ ಪಡೆಯದೆ ರಾಜಕೀಯ ಚಟುವಟಿಕೆಗಾಗಿ ದೇವಸ್ಥಾನದ ಆವರಣವನ್ನು ಬಳಸಲು ಅವಕಾಶ ಕಲ್ಪಿಸಿದ್ದಕ್ಕೆ ಈ ಅರ್ಚಕರ ಮೇಲೆ ದೂರು ದಾಖಲಾಗಿತ್ತು.

ನ್ಯಾಯಾಧೀಶ ಬಿ.ವಿ. ಪಾಟೀಲ್ ಅವರನ್ನೊಳಗೊಂಡ ಪೀಠ ಈ ತೀರ್ಪು ಪ್ರಕಟಿಸಿದ್ದಾರೆ.

Comments are closed.