
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಅನೇಕ ಮೈಲುಗಲ್ಲನ್ನು ಬರೆದಿದ್ದು, ಈಗ ಹಿಂದಿ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ.
ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರವು ಈ ವರೆಗೆ 40.39 ಕೋಟಿ ರೂ. ಗಳಿಸಿದೆ. ಈ ಮೂಲಕ ಹಿಂದಿಗೆ ಡಬ್ ಆದ ಸಿನಿಮಾಗಳ ಪೈಕಿ ಅತಿ ಹೆಚ್ಚು ಹಣ ಗಳಿಸಿದ ನಾಲ್ಕನೇ ಸಿನಿಮಾ ಎಂಬ ಹೆಗ್ಗಳಿಕೆ ಕೆಜಿಎಫ್ ಪಾತ್ರವಾಗಿದೆ. ಹೀಗಾಗಿ ಬಾಹುಬಲಿ 2, 2.0, ಹಾಗು ಬಾಹುಬಲಿ ಭಾಗ 1 ಸಿನಿಮಾದ ನಂತರದ ಸ್ಥಾನದಲ್ಲಿ ಕೆಜಿಎಫ್ ಗುರುತಿಸಿಕೊಂಡಿದೆ. ಇದನ್ನು ಓದಿ: ಪಾಕಿಸ್ತಾನದಲ್ಲೂ ಕೆಜಿಎಫ್ ಹವಾ ಶುರು
ಕೆಜಿಎಫ್ ಸಿನಿಮಾ ತೆರೆಕಂಡ ಮೊದಲ ವಾರದಲ್ಲಿ 21.45 ಕೋಟಿ ರೂ., ಎರಡನೇ ವಾರಕ್ಕೆ 11.50 ಕೋಟಿ ಹಾಗೂ ಮೂರನೇ ವಾರ 7.44 ಕೋಟಿ ರೂ, ಗಳಿಸುವ ಮೂಲಕ ಒಟ್ಟು 40.39 ಕೋಟಿ ರೂ. ಗಡಿದಾಟಿದೆ.
8,313
12:22 PM – Jan 11, 2019
Twitter Ads info and privacy
1,160 people are talking about this
ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಸಿನಿಮಾ ಜುಲೈ 10, 2015ರಂದು ತೆರೆಕಂಡಿತ್ತು. 180 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಹಿಂದಿ ವರ್ಷನಿಂದ 120 ಕೋಟಿ ರೂ. ಸೇರಿದಂತೆ, ಒಟ್ಟು 650 ಕೋಟಿ ರೂ. ಗಳಿಸಿತ್ತು. ಇದರ ನಂತರದಲ್ಲಿ ಎಪ್ರಿಲ್ 28, 2017ರಂದು ತೆರೆಕಂಡ ಬಾಹುಬಲಿ 2 ಸಿನಿಮಾ ಬರೋಬ್ಬರಿ 1,810 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಬಾಹುಬಲಿ 2 ಸಿನಿಮಾ ಹಿಂದಿ ವರ್ಷನ್ ಒಂದರಲ್ಲಿ ಕೇವಲ 34ನೇ ದಿನಕ್ಕೆ 500 ಕೋಟಿ ರೂ. ಬಾಚಿತ್ತು.
ರಜನಿಕಾಂತ್, ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಹಿಂದಿ ವರ್ಷನ್ನಲ್ಲಿ 183.75 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು.
Comments are closed.