ಕರ್ನಾಟಕ

ಖಾತೆ ಹಂಚಿಕೆ ಬಿಕ್ಕಟ್ಟು: ಸಿದ್ದು-ಪರಂ ಮಧ್ಯೆ ಫೈಟ್‌

Pinterest LinkedIn Tumblr


ಬೆಂಗಳೂರು: ಸಾಕಷ್ಟು ಸರ್ಕಸ್‌ ಮಾಡಿ ಸಚಿವ ಸಂಪುಟ ವಿಸ್ತರಣೆ ಮಾಡಿರುವ ಕಾಂಗ್ರೆಸ್‌ಗೆ ಈಗ ಖಾತೆ ಹಂಚಿಕೆ ಕಗ್ಗಂಟು ಎದುರಾಗಿದೆ. ಇದು ಕಾಂಗ್ರೆಸ್‌ನ ಪ್ರಮುಖ ನಾಯಕರಾದ ಪರಮೇಶ್ವರ್‌- ಸಿದ್ದರಾಮಯ್ಯ ನೇರ ಫೈಟ್‌ಗೂ ಕಾರಣವಾಗಿದೆ.

ಕಳೆದ ವಾರ ಪ್ರಮಾಣ ವಚನ ಸ್ವೀಕರಿಸಿದ ಎಂಟು ಸಚಿವರಿಗೆ ಖಾತೆ ಹಂಚಿಕೆ ಜವಾಬ್ದಾರಿಯನ್ನು ಕಾಂಗ್ರೆಸ್‌ ಹೈಕಮಾಂಡ್‌ ಸಿದ್ದರಾಮಯ್ಯ ಹೆಗಲಿಗೆ ಹೊರಿಸಿದೆ.

ಈ ವಿಷಯದ ಕುರಿತು ಕಾಂಗ್ರೆಸ್‌ ಉಸ್ತುವಾರಿ ಕೆ. ವೇಣುಗೋಪಾಲ್‌ ಸಮ್ಮುಖದಲ್ಲಿ ಬುಧವಾರ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ಮತ್ತು ಮಾಜಿ ಮುಖ್ಯಮಂತ್ರಿ ನಡುವೆ ಮಾತಿನ ಚಕಮಕಿ ನಡೆದಿದೆ.

ಪರಮೇಶ್ವರ್‌ ಬಳಿ ಇರುವ ಗೃಹ ಖಾತೆಯನ್ನು ಬಿಟ್ಟು ಕೊಡು ಎಂದು ಒತ್ತಡ ಹೇರಿದ್ದಕ್ಕೆ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ನಡೆದಿದೆ ಎಂದು ತಿಳಿದುಬಂದಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹೊಂದಿರುವುದರಿಂದ ಗೃಹ ಖಾತೆ ಬಿಟ್ಟುಕೊಡಬೇಕು ಎನ್ನುವುದು ಸಿದ್ದರಾಮಯ್ಯ ವಾದ. ಆದರೆ ಇದಕ್ಕೆ ಒಪ್ಪದ ಪರಮೇಶ್ವರ್‌, ಡಿಸಿಎಂ ಆದವರಿಗೆ ಎರಡು ಖಾತೆ ಬೇಡವೇ ಎಂದು ಪ್ರಶ್ನಿಸಿದ್ದಾರೆ.

ಈ ಸಂದರ್ಭದಲ್ಲಿ ವೇಣುಗೋಪಾಲ್‌ ಸಮ್ಮುಖದಲ್ಲಿ ಉಭಯ ನಾಯಕರು ಭಾರಿ ವಾದ-ಪ್ರತಿವಾದ ಮಾಡಿದ್ದಾರೆ. ಇದರಿಂದಾಗಿ ಸಭೆ ಮೊಟಕುಗೊಂಡಿದೆ.

ಖಾತೆ ಹಂಚಿಕೆ ಬಹುತೇಕ ಫೈನಲ್‌ ಆಗಿದ್ದು, ಈಗ ಹೈಕಮಾಂಡ್‌ ಅಂತಿಮ ಮೊಹರಿಗೆ ರಾಜ್ಯ ಕಾಂಗ್ರೆಸ್‌ ನಾಯಕರು ಎದುರು ನೋಡುತ್ತಿದ್ದಾರೆ.

Comments are closed.