
ವಿಜಯಪುರ: ಸುಣ್ಣದ ಡಂಬಿಯೊಂದನ್ನು ನುಂಗಿದ 9 ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ತಿಕೋಟಾದಲ್ಲಿ ನಡೆದಿದೆ.
ಪಟ್ಟಣದ ವಿಶ್ವನಾಥ್ ತಾಳಿಕೋಟೆ ಅವರ ಮಗು ಮಲ್ಲು ಸಾವನ್ನಪ್ಪಿದೆ. ಆಕಸ್ಮಿಕವಾಗಿ ಸುಣ್ಣದ ಡಬ್ಬ ನುಂಗಿದ್ದು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಗೆ ದಾಖಲಿಸಿದರೂ ಸುಣ್ಣ ಹೊಟ್ಟೆ ಸೇರಿಕೊಂಡ ಕಾರಣ ದುಷ್ಪರಿಣಾಮ ಉಂಟಾಗಿ ಮಗು ಸಾವನ್ನಪ್ಪಿದೆ ಎಂದು ವೈದ್ಯರು ತಿಳಿಸಿದ್ದಾರೆ.
ತಿಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.