ಅಂತರಾಷ್ಟ್ರೀಯ

ನಿಮ್ಮನು ರಾತ್ರಿ ಬಾರ್ ನಲ್ಲಿ ಭೇಟಿ ಮಾಡಿದ್ದೇ, ಆದರೆ ನೀವು ರಾಂಗ್ ನಂಬರ್ ಕೊಟ್ಟಿದೀರಾ!

Pinterest LinkedIn Tumblr


ಕೆನಡಾ: ತನ್ನಾಕೆಯನ್ನು ಹುಡುಕಲು ವಿದ್ಯಾರ್ಥಿಯೊಬ್ಬ 246 ಯುವತಿಯರಿಗೆ ಮೇಲ್ ಮಾಡಿರುವ ಘಟನೆ ಕೆನಡಾದ ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

ಕ್ಯಾಲ್ಗರಿ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಝೆಟಿನಾ ಎಂಬ ವಿದ್ಯಾರ್ಥಿ ಗುರುವಾರ ವಿಶ್ವವಿದ್ಯಾಲಯದ ಬಳಿ ಇರುವ ಬಾರ್‌ವೊಂದರಲ್ಲಿ ಯುವತಿಯನ್ನು ಭೇಟಿ ಮಾಡಿದ್ದಾನೆ. ಆ ಯುವತಿ ಮೊದಲ ಹೆಸರು ನಿಕೋಲ್ ಎಂದು ಹೇಳಿ ತಪ್ಪು ಫೋನ್ ನಂಬರ್ ಅನ್ನು ಕೊಟ್ಟಿದ್ದಾಳೆ.

ಝೆಟಿನಾ ನಿಕೋಲ್ ಅನ್ನು ಹುಡುಕುಲು ಪ್ರಾರಂಭಿಸುತ್ತಾನೆ. ಇದಕ್ಕಾಗಿ ಅದೇ ಹೆಸರಿನ ಅನೇಕ ಯುವತಿಯರಿಗೆ “ನಾನು ನಿಮ್ಮನು ರಾತ್ರಿ ಬಾರ್ ನಲ್ಲಿ ಭೇಟಿ ಮಾಡಿದ್ದೇ, ಆದರೆ ನೀವು ರಾಂಗ್ ನಂಬರ್ ಕೊಟ್ಟಿದೀರಾ” ಎಂದು ಮೇಲ್ ಮಾಡಿದ್ದಾನೆ.

ಈ ಮೇಲ್ ಇಡೀ ವಿಶ್ವವಿದ್ಯಾಲಯದಲ್ಲಿ ಕುತೂಹಲವನ್ನು ಮೂಡಿಸಿದ್ದು, ಇತರ ವಿದ್ಯಾರ್ಥಿಗಳು ‘ನಿಕೋಲ್ ಫ್ರಮ್ ಲಾಸ್ಟ್ ನೈಟ್’ ಎಂದು ಫೇಸ್ ಬುಕ್ ಪೇಜ್ ಮಾಡಿ ಝೆಟಿನಾಗೆ ಹುಡುಕಲು ಸಹಾಯ ಮಾಡಿದ್ದಾರೆ.

15 ಕ್ಕಿಂತ ಹೆಚ್ಚಿನ ನಿಕೋಲ್ ಹೆಸರಿನ ಯುವತಿಯರನ್ನು ವಿಶ್ವವಿದ್ಯಾಲಯದ ಬಳಿ ಇರುವ ಬಾರ್ ಬಳಿ ಭೇಟಿ ಮಾಡಿದ್ದು, ಕೊನೆಗೂ ಝೆಟಿಯಾಗೆ ಶುಕ್ರವಾರದಂದು ಸ್ನೇಹಿತನಿಂದ ಹುಡುಕುತ್ತಿದ್ದ ನಿಕೋಲ್ ಸಿಕ್ಕಿದ್ದಾಳೆ. ಬಳಿಕ ಇಬ್ಬರು ಡೇಟಿಂಗ್ ಹೋಗಲು ನಿರ್ಧರಿಸಿದ್ದಾರೆ.

Comments are closed.