
ಮಂಗಳೂರು, ಆಗಸ್ಟ್.27: ಸುಮಾರು 22 ವರ್ಷಗಳ ಕಾಲ ಮಂಗಳೂರು ಧರ್ಮಪ್ರಾಂತದ ಬಿಷಪ್ ಆಗಿ ಸೇವೆ ಸಲ್ಲಿಸಲು ಎಲ್ಲರೂ ಸಹಕರಿಸಿದ್ದಾರೆ. ನೂತನ ಬಿಷಪ್‌ಗೂ ಇದೇ ಮಾದರಿಯ ಸಹಕಾರ ನೀಡುವ ಮೂಲಕ ಸೌಹಾರ್ದ ಸಮಾಜ ನಿರ್ಮಿಸಲು ಸಹಕರಿಸ ಬೇಕು ಎಂದು ಮಂಗಳೂರಿನ ನಿರ್ಗಮನ ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ ಹೇಳಿದ್ದಾರೆ.
ಮಂಗಳೂರಿನ ನೂತನ ಬಿಷಪ್ ವಂ. ಫಾ. ಪೀಟರ್ ಪೌಲ್ ಸಲ್ದಾನ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ 4 ಸಾವಿರ ಚ.ಅ. ವಿಸ್ತೀರ್ಣದಲ್ಲಿ ನಿರ್ಮಾಣಗೊಳ್ಳಲಿರುವ ವೇದಿಕೆ ಹಾಗೂ ಸುಮಾರು 75 ಸಾವಿರ ಚ.ಅ. ವಿಸ್ತೀರ್ಣದ ಚಪ್ಪರ’ ನಿರ್ಮಾಣಕ್ಕೆ ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ ಸೋಮವಾರ ನಗರದ ರೊಝಾರಿಯೊ ಚರ್ಚ್ ವಠಾರದಲ್ಲಿ ಚಾಲನೆ ನೀಡಿ ಮಾತನಾಡಿದರು.

ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಮಂಗಳೂರು ಬಿಷಪ್ ಡಾ. ಅಲೋಶಿಯಸ್ ಪೌಲ್ ಡಿಸೋಜ ಒಂದು ಸಮುದಾಯದ ಹಿತಚಿಂತಕರಾಗಿರಲಿಲ್ಲ. ಸಮಸ್ಯೆ, ಸವಾಲುಗಳು ಎದುರಾದಾಗಲೆಲ್ಲಾ ಅವರು ಸಮಾಜದ ಎಲ್ಲರೊಂದಿಗೂ ಬೆರೆತು ಪರಿಹಾರಕ್ಕೆ ಮುಂದಾಗುತ್ತಿದ್ದರು. ಸಾಮಾಜಿಕ ಸ್ವಾಸ್ಥ ಕಾಪಾಡುವಲ್ಲಿ ಅವರ ಪಾತ್ರ ಅಪಾರವಾಗಿತ್ತು ಎಂದು ಈ ವೇಳೆ ಸಂಸದರು ಹೇಳಿದರು.

ಮಾಜಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್‌ಗಳಾದ ಲತೀಫ್ ಕಂದುಕ, ನವೀನ್ ಡಿಸೋಜ, ಫಾ. ಓನಿಲ್ ಡಿಸೋಜ, ಬಿಷಪ್ ಹೌಸ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ. ವಿಕ್ಟರ್ ವಿಜಯ್ ಲೋಬೊ, ವಿಲ್ಸೆನ್ ಮೊಂತೆರೋ, ಕಾರ್ಯಕ್ರಮದ ವಿವಿಧ ಸಮಿತಿಗಳ ಸಂಚಾಲಕರಾದ ಜೆ.ಬಿ. ಕಾಸ್ತಾ, ವಿಲ್ಸೆನ್ ಮೊಂತೆರೋ, ಎಂ.ಪಿ.ನೊರೊನ್ಹಾ, ಲೂಯಿ ಜೆ.ಪಿಂಟೋ ಮತ್ತಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
Comments are closed.