ಕರ್ನಾಟಕ

ಪ್ರತ್ಯೇಕ ಕರ್ನಾಟಕ ಕೂಗಿಗೆ ಮಾಧ್ಯಮಗಳೇ ಕಾರಣ: ಎಚ್ ಡಿಕೆ

Pinterest LinkedIn Tumblr


ಬೆಂಗಳೂರು: ಪ್ರತ್ಯೇಕ ಕರ್ನಾಟಕ ಕೂಗಿಗೆ ಮಾಧ್ಯಮಗಳೇ ಕಾರಣ. ಉತ್ತರ ಕರ್ನಾಟಕ ವಿಷಯದಲ್ಲಿ ಬೆಂಕಿ(ದೃಶ್ಯ ಮಾಧ್ಯಮ) ಹಚ್ಚುತ್ತಿರುವವರು ನೀವು. ಪ್ರತಿಯೊಂದು ವಿಷಯದಲ್ಲಿ ತಪ್ಪೇ ಕಾಣಿಸುತ್ತಾ ಹೋದರೆ..ರಾಜ್ಯ ಉದ್ಧಾರವಾಗಬೇಕೋ ಅಥವಾ ರಾಜ್ಯ ಹಾಳಾಗಬೇಕೋ ಅದು ನಿಮಗೆ ಸೇರಿದ್ದು ಎಂಬುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯೇಕ ಉತ್ತರ ಕರ್ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ , ಅವರು ನಾನು ಅಖಂಡ ಕರ್ನಾಟಕ ಎಂಬುದನ್ನು ಮೊದಲೇ ಹೇಳಿದ್ದೇನೆ. ಆದರೆ ಪ್ರತ್ಯೇಕ ಉತ್ತರ ಕರ್ನಾಟಕ ಕೂಗಿಗೆ ಕುಮ್ಮಕ್ಕು ಕೊಟ್ಟವರು ನೀವೇ(ಮಾಧ್ಯಮ) ಎಂದು ಆರೋಪಿಸಿದರು.

ಉತ್ತರ ಕರ್ನಾಟಕದ ಬಗ್ಗೆ ನಾನು ಯಾವುದೇ ಹೇಳಿಕೆ ಕೊಟ್ಟಿಲ್ಲ. ಆದರೆ ಮಾಧ್ಯಮಗಳಲ್ಲಿ ಇದರ ಬಗ್ಗೆಯೇ ಪದೇ, ಪದೇ ಚರ್ಚೆ ನಡೆಸಲಾಗುತ್ತಿದೆ ಎಂದು ದೂರಿದರು.

ಪ್ರತ್ಯೇಕ ರಾಜ್ಯ ಬೇಕಂತೆ, ಹೋಗಿ ಮಾಡಿಕೊಳ್ಳಿ..ಎಲ್ಲಿಂದ ತರುತ್ತೀರಿ ಹಣ ಎಂದು ಬಹಿರಂಗವಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದರು.

Comments are closed.