ಆರೋಗ್ಯ

ಮಂಗಳೂರಿನಲ್ಲಿ ಭಾರೀ ಮಳೆಗೆ ಆವರಣಗೋಡೆ ಕುಸಿತ : ಮಣ್ಣಿನಡಿ ಸಿಲುಕಿದ ಮಹಿಳೆ ಮೃತ್ಯು :ಜಿಲ್ಲಾಡಳಿತದಿಂದ ಪರಿಹಾರ ವಿತರಣೆ

Pinterest LinkedIn Tumblr

ಮಂಗಳೂರು, ಮೇ 30: ಕರಾವಳಿಯಾದ್ಯಂತ ಮಂಗಳವಾರ ಬೆಳಗ್ಗೆಯಿಂದ ಸುರಿದ ಭಾರೀ ಮಳೆಗೆ ಕಂಪೌಂಡ್ ಹಾಲ್ ಕುಸಿದು ಮಣ್ಣಿನಡಿ ಸಿಲುಕಿದ ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಮಣ್ಣಿನಲ್ಲಿ ಸಿಲುಕಿ ಮೃತಪಟ್ಟ ಮಹಿಳೆಯನ್ನು ಉದಯನಗರದ ನಿವಾಸಿ ಕಮಲಾಕ್ಷ ಅವರ ಪತ್ನಿ 60ರ ಹರೆಯದ ಮೋಹಿನಿ ಎಂದು ಗುರುತಿಸಲಾಗಿದೆ.

ನಗರದ ಕೆಪಿಟಿ ಉದಯನಗರ ಬಳಿಯಲ್ಲಿ ಈ ಘಟನೆ ನಡೆದಿದ್ದು, ಮನೆಯೊಂದರ ಹಿಂಬದಿಯ ಆವರಣಗೋಡೆ ಕುಸಿದು, ಮಹಿಳೆಯೊಬ್ಬರು ಮಣ್ಣಿನಲ್ಲಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕದ ದಳದಿಂದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಸಂಜೆಯವರೆಗೂ ನಡೆಯಿತು.ರಾತ್ರಿ ಅವರನ್ನು ಮಣ್ಣಿನಿಂದ ಮೇಲಕ್ಕೆತ್ಕಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.

ಮಂಗಳವಾರ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗಿದ್ದರಿಂದ ಸುಮಾರು 11 ಗಂಟೆಯ ಹೊತ್ತಿಗೆ ಮೋಹಿಣಿ ಅವರ ಮನೆಯ ಹಿಂಬದಿ ಆವರಣಗೋಡೆ ಹಠಾತ್ ಕುಸಿದು ಬಿದ್ದಿದೆ. ಪರಿಣಾಮವಾಗಿ ಮೋಹಿನಿ ಮಣ್ಣನಡಿಗೆ ಸಿಲುಕಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಪೂರ್ವ ಠಾಣೆ ಪೊಲೀಸರು, ಅಗ್ನಿಶಾಮಕ ದಳ, ಕಂದಾಯ ಇಲಾಖೆ ಮತ್ತು ಸ್ಥಳೀಯರ ನೆರವಿನಿಂದ ಬೆಳಗ್ಗೆ ಸುಮಾರು 11 ಗಂಟೆಯ ಹೊತ್ತಿಗೆ ಅವರನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತುವ ಕಾರ್ಯಾಚರಣೆ ರಾತ್ರಿ 7 ಗಂಟೆಯವರೆಗೂ ಮುಂದುವರಿದಿತ್ತು. ಆದರೆ, ರಾತ್ರಿ ಅವರನ್ನು ಮಣ್ಣಿನಿಂದ ಮೇಲಕ್ಕೆತ್ಕಲಾಯಿತಾದರೂ ಅದಾಗಲೇ ಅವರು ಕೊನೆಯುಸಿರೆಳೆದಿದ್ದರು.

ಮೋಹಿನಿ ಅವರು ಎಂಟು ವರ್ಷಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದರಿಂದ ಇಳಿಜಾರು ಪ್ರದೇಶದ ತಮ್ಮ ಮನೆಯಲ್ಲಿ ವಾಸಿಸುವುದನ್ನು ಬಿಟ್ಟು ಸನಿಹದಲ್ಲೇ, ತುಸು ಕೆಳಭಾಗದಲ್ಲಿದ್ದ ತಮ್ಮ ಅಣ್ಣನ ಮನೆಯಲ್ಲಿ ವಾಸಿಸುತ್ತಿದ್ದರು. ಅಪರೂಪಕ್ಕೊಮ್ಮೆ ಮಾತ್ರ ತಮ್ಮ ಸ್ವಂತ ಮನೆಗೆ ಹೋಗುತ್ತಿದ್ದರು. ಮಂಗಳವಾರ ಬೆಳಗ್ಗಿನಿಂದಲೇ ಸುರಿಯುತ್ತಿದ್ದ ಭಾರೀ ಮಳೆಯ ಕಾರಣ, ಪರಿಶೀಲನೆಗೆಂದು ಬಂದಿದ್ದ ವೇಳೆ ಆವರಣಗೋಡೆ ಕುಸಿದು ಈ ದುರುಂತ ಸಂಭವಿಸಿರುವುದಾಗಿ ತಿಳಿದುಬಂದಿದೆ.

ಮೋಹಿನಿ ಹಾಗೂ ಅವರ ಪತಿ ಕಮಲಾಕ್ಷ ಹಾಗೂ ತಂಗಿ ಗಿರಿಜಾಕ್ಷಿ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಹೃದಯ ಶಸ್ತ್ರ ಚಿಕಿತ್ಸೆಯ ಬಳಿಕ ಮೋಹಿನಿ ತನ್ನ ಅಣ್ಣನ ಮನೆಯಲ್ಲಿ ವಾಸಿಸುತ್ತಿದ್ದರಾದರೂ ಆಗಾಗ ಘಟನೆ ನಡೆದ ಮನೆಗೆ ಬರುತ್ತಿದ್ದರು. ಜೀವನೋಪಾಯಕ್ಕಾಗಿ ಅವರು ಬೀಡಿ ಕಟ್ಟುವ ಕೆಲಸ ಮಾಡುತ್ತಿದ್ದರು.

ಉದಯನಗರದಲ್ಲಿರುವ ಮೋಹಿನಿ ಅವರ ಮನೆಗೆ ಹೋಗುವ ರಸ್ತೆಯು ಕಿರಿದಾಗಿದ್ದು, ತ್ರಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನ ಅಲ್ಲಿಗೆ ತಲುಪುವುದು ಕಷ್ಟವಾಗಿತ್ತು. ಆಕೆಯನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಲು ಬೆಳಗ್ಗೆಯಿಂದಲೇ ವಾಹನದ ವ್ಯವಸ್ಥೆ ಮಾಡಲಾಗಿದ್ದರೂ ಘಟನಾ ಸ್ಥಳದ ಕಡೆಗೆ ತೆರಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ವಿಳಂಬಗೊಂಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಳೆ ನೀರು ಸರಾಗವಾಗಿ ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಆವರಣ ಗೋಡೆ ಕುಸಿದಿದೆ. ಈ ಬಗ್ಗೆ ಮಹಾನಗರ ಪಾಲಿಕೆಗೆ ಹಲವು ಬಾರಿ ದೂರಿತ್ತರೂ ಸೂಕ್ತ ಚರಂಡಿ ವ್ಯವಸ್ಥೆ ಆಗಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆಗೆ ಸಾಕ್ಷಿಯಾಗಿದ್ದ ಮೋಹಿನಿ ಅವರ ತಂಗಿ ಗಿರಿಜಾಕ್ಷಿ ಕಣ್ಣೀರು ಸುರಿಸುತ್ತಾ, ”ಮಳೆ ನೀರು ಶೌಚಾಲಯಕ್ಕೆ ನುಗ್ಗಿರುವುದನ್ನು ಕಂಡು ನಾವಿಬ್ಬರು, ಅದನ್ನು ತಡೆಯುವ ಕೆಲಸ ಮಾಡಿದೆವು. ನಾನಿದ್ದ ಜಾಗದಲ್ಲೇ ಅಕ್ಕ ನಿಂತಿದ್ದಳು. ಮಳೆ ತೀವ್ರವಾಗುತ್ತಿದ್ದುದನ್ನು ಗಮನಿಸಿ ಅಕ್ಕಳನ್ನು ಒಳ ಕರೆದು ನಾನೂ ಒಳಕ್ಕೆ ಹೋದೆ. ಆದರೆ,ಅಕ್ಕ ಮಾತ್ರ ಅಲ್ಲೇ ನಿಂತಿದ್ದು, ಕುಸಿದ ಮಣ್ಣಿನಡಿ ಸಿಲುಕಿದರು ಎಂದು ಹೇಳಿದ್ದಾರೆ.

ಜಿಲ್ಲಾಡಳಿತದಿಂದ ಪರಿಹಾರ ವಿತರಣೆ:

ಮಳೆ ವಿಕೋಪಕ್ಕೆ ಬಲಿಯಾದ ಉದಯನಗರದ ಮೋಹಿನಿ ಹಾಗೂ ಕೊಡಿಯಾಲ್ ಬೈಲ್ ನ ಮುಕ್ತಾ ಬ್ಯಾ ಯವರ ಕುಟುಂಬಕ್ಕೆ ಜಿಲ್ಲಾಡಳಿತದ ವತಿಯಿಂದ ಪರಿಹಾರ ಧನ ವಿತರಿಸಲಾಯಿತು. ನಗರದ ಸರಕಾರಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಇಂದು ಮುಂಜಾನೆ ದ.ಕ.ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್ ಅವರು ಪರಿಹಾರ ಮೊತ್ತದ ಚೆಕ್ ಅನ್ನು ಮೋಹಿನಿಯವರ ಕುಟೂಂಬಕ್ಕೆ ಹಸ್ತಾಂತರಿಸಿದರು.

Comments are closed.