ಆರೋಗ್ಯ

ಆಫೀಸ್’ನಲ್ಲಿ ನಿಮಗೆ ನಿದ್ದೆ ಬರುತ್ತಾ…? ಇಲ್ಲಿದೆ ಪರಿಹಾರ…

Pinterest LinkedIn Tumblr

ದಿನದ ಮೂರನೇ ಒಂದು ಭಾಗದ ಸಮಯವನ್ನು ಆಫೀಸ್​ನಲ್ಲಿ ಕಳೆಯುತ್ತೇವೆ. ಕೆಲಸದ ಆಯಾಸದಿಂದ ಕೆಲ ಬಾರಿ ಕಚೇರಿಯಲ್ಲಿ ತೂಕಡಿಸುವುದು ಇದೆ. ಇದು ನಿಮ್ಮ ಕೆಲಸದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆಫೀಸ್​ ಸಮಯದಲ್ಲಿ ಬರುವ ನಿದ್ರೆಯಿಂದ ಹೊರಬರಲು ಅನುಸರಿಸಬೇಕಾದ ಕೆಲವೊಂದು ಸಲಹೆಗಳು ಇಲ್ಲಿವೆ.

ನೀರು ಒಂದು ಪರಿಣಾಮಕಾರಿ ಮನೆಮದ್ದು. ಆಫೀಸಿನಲ್ಲಿ ನಿದ್ದೆ ಬರುವಾಗ ನೀರು ಕುಡಿಯಿರಿ. ಇದು ನಿಮ್ಮ ಆಯಾಸವನ್ನು ದೂರ ಮಾಡುತ್ತದೆ. ಅಲ್ಲದೆ ಸೋಮಾರಿತನವನ್ನು ಹೋಗಲಾಡಿಸುತ್ತದೆ.

ಕಂಪ್ಯೂಟರ್​ ಮುಂದೆ ಕುಳಿತು ಕೆಲಸ ಮಾಡುವಾಗ ಸಾಮಾನ್ಯಾವಾಗಿ ಕೈಗಳಲ್ಲಿ ನೋವು ಕಾಣಿಸುತ್ತದೆ. ಇದನ್ನು ಹೋಗಲಾಡಿಸಲು ಕೈಗಳಿಗೆ ಸಣ್ಣ ಪುಟ್ಟ ವ್ಯಾಯಾಮ ನೀಡಿ. ಇದರಿಂದ ನಿಮ್ಮ ಆಯಾಸ ದೂರವಾಗುತ್ತದೆ.

ನಿದ್ದೆ ಬರುವಂತಹ ಸಮಯದಲ್ಲಿ ಚಹಾ ಸೇವಿಸಿ. ಹೀಗೆ ಮಾಡುವುದರಿಂದ ಆಯಾಸ ದೂರವಾಗಿ ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಬಹುದು.

ತುಂಬಾ ಆಯಾಸವಾಗುತ್ತಿದ್ದರೆ, ಕೂತಿರುವ ಸೀಟಿನಿಂದ ಎದ್ದು 2 ನಿಮಿಷಗಳ ಕಾಲ ನಡೆದಾಡಿ.

ಕಚೇರಿಯಲ್ಲಿರುವಾಗ ಮಿತವಾಗಿ ಆಹಾರ ಸೇವಿಸಿ, ಕೊಬ್ಬಿನಾಂಶ ಹೆಚ್ಚಿರುವ ಆಹಾರದಿಂದ ದೂರವಿರಿ.

ಪ್ರತಿದಿನ ಮನೆಯಲ್ಲಿ 7 ರಿಂದ 8ಗಂಟೆಗಳವರೆಗೆ ಚೆನ್ನಾಗಿ ನಿದ್ದೆ ಮಾಡಿ. ನಿದ್ರಾಹೀನತೆ ಕೂಡ ಆಫೀಸ್​ನಲ್ಲಿ ತೂಕಡಿಕೆ ಕಾರಣವಾಗುತ್ತದೆ.

Comments are closed.