ಕರಾವಳಿ

ಕುಂದಾಪುರದ ಯು. ಸಂಗೀತಾ ಶೆಣೈಗೆ ಮಂಗಳೂರು ವಿ.ವಿ. ಸ್ವರ್ಣ ಪದಕ

Pinterest LinkedIn Tumblr

ಕುಂದಾಪುರ: ಕುಂದಾಪುರ ಭಂಡಾರ್‌ಕಾರ್‍ಸ್ ಕಾಲೇಜಿನ ಬಿ‌ಎಸ್‌ಸಿ ಪದವೀಧರೆ ಯು.ಸಂಗೀತಾ ಶೆಣೈ 2017 ರಲ್ಲಿ ನಡೆದ ಮಂಗಳೂರು ವಿವಿ ಪರೀಕ್ಷೆಯಲ್ಲಿ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ರಸಾಯನ ಶಾಸ್ತ್ರ (ಬಿ.ಝಡ್.ಸಿ) ವಿಭಾಗದಲ್ಲಿ ವಿಶ್ವವಿದ್ಯಾಲಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದು, ಡಾ.ಟಿ.ಎಂ.ಪೈ ಚಿನ್ನದ ಪದಕ ಪಡೆದಿರುತ್ತಾರೆ.

ದಿನಾಂಕ 26ರಂದು ಸೋಮವಾರ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿ ಸಭಾಂಗಣದಲ್ಲಿ ನಡೆದ 36ನೇ ಘಟಿಕೋತ್ಸವದಲ್ಲಿ ಕುಲಪತಿ ಡಾ| ಕೆ.ಭೈರಪ್ಪ ಗೌರವ ಪದಕ, ಪ್ರಶಸ್ತಿ ಪತ್ರ ಪ್ರದಾನ ಮಾಡಿದರು.

ಇವರು ಕುಂದಾಪುರದ ಕುಂದಪ್ರಭ ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ಹಾಗೂ ಸಾಧನಾ ಎಸ್.ಶೆಣೈ ದಂಪತಿ ಪುತ್ರಿ. ಭಂಡಾರ್‌ಕಾರ್‍ಸ್ ಕಾಲೇಜಿನ 2017ರ ಅತ್ಯುತ್ತಮ ವಿದ್ಯಾರ್ಥಿನಿಯಾಗಿಯೂ ಗೌರವಿಸಲ್ಪಟ್ಟಿದ್ದರು.

Comments are closed.